Homeಮುಖಪುಟಲಂಚ ಪಡೆದ ಆರೋಪ : ಇಡಿ ಅಧಿಕಾರಿಯ ಬಂಧನ

ಲಂಚ ಪಡೆದ ಆರೋಪ : ಇಡಿ ಅಧಿಕಾರಿಯ ಬಂಧನ

- Advertisement -
- Advertisement -

ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನ ಭ್ರಷ್ಟಾಚಾರ ನಿಗ್ರಹ ಮತ್ತು ಜಾಗೃತ ಪಡೆ (ಡಿವಿಎಸಿ) ಲಂಚ ಪಡೆದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದ ಹಿರಿಯ ಅಧಿಕಾರಿಯೊಬ್ಬರನ್ನು ಶುಕ್ರವಾರ ಬಂಧಿಸಿದೆ.

ಇಡಿಯ ಮಧುರೈ ಉಪ ವಿಭಾಗದ ಕಚೇರಿ ಮೇಲೆ ದಾಳಿ ನಡೆಸಿದ ಡಿವಿಎಸಿ ಪಡೆ, ವೈದ್ಯರೊಬ್ಬರಿಂದ ₹20 ಲಕ್ಷ ಲಂಚ ಪಡೆದ ಆರೋಪದ ಮೇಲೆ ಅಧಿಕಾರಿಯನ್ನು ಬಂಧಿಸಿದೆ. ತಮಿಳುನಾಡಿನಲ್ಲಿ ಇಡಿ ಅಧಿಕಾರಿಯ ಬಂಧನವಾಗುತ್ತಿರುವುದು ಇದೇ ಮೊದಲು. ಅಧಿಕಾರಿಯ ಬಂಧನಕ್ಕೆ ಸಂಬಂಧಪಟ್ಟಂತೆ ಡಿವಿಎಸಿ ಪಡೆ ಮಧುರೈನ ಇಡಿ ಕಚೇರಿ ಮತ್ತು ಅಧಿಕಾರಿಯ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದು, ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಅಂಕಿತ್ ತಿವಾರಿ ಬಂಧಿತ ಇಡಿ ಅಧಿಕಾರಿ ಎಂದು ತಿಳಿದು ಬಂಧಿದೆ. ಅವರನ್ನು ಡಿಸೆಂಬರ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಈ ಕುರಿತು ಇಡಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಭ್ರಷ್ಟಾಚಾರ ನಿಗ್ರಹ ಮತ್ತು ಜಾಗೃತ ಪಡೆ ನಿರ್ದೇಶನಾಲಯದ ಪ್ರಕಾರ, ಸರ್ಕಾರಿ ವೈದ್ಯನ ವಿರುದ್ದದ ಕಾನೂನು ಕ್ರಮವನ್ನು ತಪ್ಪಿಸಲು ಇಡಿ ಅಧಿಕಾರಿ ತಿವಾರಿ ₹3 ಕೋಟಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ನಿಮ್ಮ ಮೇಲೆ ದಾಳಿ ನಡೆಸಲು ನನಗೆ ಪ್ರಧಾನಮಂತ್ರಿ ಕಚೇರಿಯಿಂದ ಸೂಚನೆ ಬಂಧಿದೆ ಎಂದು ಅಧಿಕಾರಿ ಅಂಕಿತ್ ತಿವಾರಿ ವೈದ್ಯನನ್ನು ನಂಬಿಸಿದ್ದರು. ವೈದ್ಯ ₹3 ಕೋಟಿ ಹಣ ನೀಡಲು ನಿರಾಕರಿಸಿದಾಗ ಇಬ್ಬರು ಮಾತನಾಡಿಕೊಂಡು ₹51 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ಅದರ ಮೊದಲ ಕಂತು ₹20 ಲಕ್ಷ ಹಣವನ್ನು ಪಡೆಯಲು ಮುಂದಾದಾಗ ಡಿವಿಎಸಿ ಅಧಿಕಾರಿಗಳು ಬಂಧಿಸಿದ್ದಾರೆ.

ಮಧುರೈ-ದಿಂಡಿಗಲ್ ಹೆದ್ದಾರಿಯ ಟೋಲ್ ಪ್ಲಾಝಾ ಬಳಿಕ ವೈದ್ಯನಿಂದ ಲಂಚ ಪಡೆಯುವಾಗ ಇಡಿ ಅಧಿಕಾರಿಯನ್ನು ಬಂಧಿಸಲಾಗಿದೆ. ಅವರ ವಾಹನದಿಂದ ₹20 ಲಕ್ಷ ಜಪ್ತಿ ಮಾಡಲಾಗಿದೆ ಎಂದು ಡಿವಿಎಸಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಇಂಟರ್ನೆಟ್ ಸ್ಥಗಿತ ಮುಂದುವರಿಸುವಂತಿಲ್ಲ: ಮಣಿಪುರ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...