Homeಮುಖಪುಟಯುವಕನನ್ನು ನರಬಲಿ ಕೊಟ್ಟು ವಾಮಾಚಾರ: ಇಬ್ಬರು ಆರೋಪಿಗಳ ಬಂಧನ

ಯುವಕನನ್ನು ನರಬಲಿ ಕೊಟ್ಟು ವಾಮಾಚಾರ: ಇಬ್ಬರು ಆರೋಪಿಗಳ ಬಂಧನ

- Advertisement -
- Advertisement -

22 ವರ್ಷದ ಯುವಕನನ್ನು ತಲೆ ಕಡಿದು ನರಬಲಿ ನೀಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ನರಸಿಂಗ್‌ಪುರದಲ್ಲಿ ಗುರುವಾರ ನಡೆದಿದೆ.

ನರಸಿಂಗ್‌ಪುರದಲ್ಲಿ ಅಂಕಿತ್ ಕೌರವ್(22) ಎಂಬ ಯುವಕನನ್ನು ಶಿರಚ್ಛೇದ ಮಾಡಿದ ಆರೋಪದ ಮೇಲೆ ಮಧ್ಯಪ್ರದೇಶ ಪೊಲೀಸರು ಇಬ್ಬರು ತಂತ್ರಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸುರೇಂದ್ರ ಕಚಿ(40) ಮತ್ತು ರಾಮು ಕಚಿ (45) ಎಂದು ಗುರುತಿಸಲಾಗಿದೆ.

ನ.4ರಂದು ಹೊಲವೊಂದರಲ್ಲಿ ಯುವಕನ ವಿರೂಪಗೊಂಡ ಮೃತದೇಹ ಪತ್ತೆಯಾಗಿತ್ತು.

ದುರಂತ ಮರಣದ ಸುಮಾರು 2 ವಾರಗಳ ಮೊದಲು ಅಂಕಿತ್ ಕೌರವ್ ಕುಟುಂಬವು ಆರ್ಥಿಕ ತೊಂದರೆಗಳನ್ನು ಎದುರಿಸಿತ್ತು. ಈ ವೇಳೆ ತಂತ್ರಿಗಳ ಸಹಾಯ ಪಡೆಯಲು ಕೌರವ್ ಮುಂದಾಗಿದ್ದಾನೆ. ಅವರು ಆತನಿಗೆ ಸಹಾಯ ಮಾಡಲು ಒಪ್ಪಿಕೊಂಡರು ಮತ್ತು ಆತನ ಬಲಗೈಯಿಂದ ಮಧ್ಯದ  ಬೆರಳನ್ನು ಕತ್ತರಿಸುವಂತೆ ಮನವೊಲಿಸಿದ್ದಾರೆ.

ಟೇಕಪುರ ಗ್ರಾಮಕ್ಕೆ ಕೌರವ್‌ನನ್ನು ಕರೆದೊಯ್ದಿದ್ದು, ಆರೋಪಿಗಳು ಆತನಿಗೆ ನಿದ್ರೆ ಮಾತ್ರೆಗಳನ್ನು ನೀಡಿ ಬಳಿಕ ಹರಿತವಾದ ಆಯುಧದಿಂದ ಆತನ ರುಂಡವನ್ನು ಕತ್ತರಿಸಿದ್ದಾರೆ. ಬೆರಳು, ಕೈಗಳನ್ನು ಕೂಡ ಕತ್ತರಿಸಿದ್ದಾರೆ.

ಪೊಲೀಸರು ತಮ್ಮ ತನಿಖೆಯ ಸಮಯದಲ್ಲಿ ಘಟನೆ ನಡೆದ ರಾತ್ರಿ  ಸಂತ್ರಸ್ತ ಆರೋಪಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿರುವುದನ್ನು ಕಂಡುಕೊಂಡಿದ್ದಾರೆ. ಸಿಹೋರಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ಯುವಕ ಅಂಕಿತ್ ಕೌರವನ  ಕುಟುಂಬದ ಸದಸ್ಯರ ಚಿಕಿತ್ಸೆಗಾಗಿ ಹಣದ ಅವಶ್ಯಕತೆಯಿತ್ತು. ಅಸಹಾಯಕರಾದ ಕುಟುಂಬವು ತಂತ್ರಿ ಸುರೇಂದ್ರ ಕಚಿ ಅವರ ಸಹಾಯವನ್ನು ಕೋರಿದ್ದಾರೆ. ಈ ವೇಳೆ ಅವರು ಹಣ ಬರುವ ಧಾರ್ಮಿಕ ಕ್ರಿಯೆಗಳನ್ನು ಮಾಡಲು ಸೂಚಿಸಿದ್ದಾರೆ. ಅಂಕಿತ್‌ಗೆ ಬೆರಳನ್ನು ತ್ಯಾಗ ಮಾಡುವಂತೆ ಸೂಚಿಸಿದ್ದಾರೆ. ನಂತರ ನ.3 ರಂದು ಧಾರ್ಮಿಕ ಕ್ರಿಯೆಯನ್ನು ನಿಗದಿಪಡಿಸಿ ತಂತ್ರಿ ಪ್ರಸಾದದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಅಂಕಿತ್‌ಗೆ ನೀಡಿದ್ದಾನೆ. ಪ್ರಜ್ಞೆ ಕಳೆದುಕೊಂಡ ಅಂಕಿತ್‌ ತಲೆಯನ್ನು ಕೊಡಲಿಯಿಂದ ಕತ್ತರಿಸಿ, ಬೆರಳುಗಳನ್ನು ಬೇರ್ಪಡಿಸಲಾಗಿದೆ ಎಂದು ಹೇಳಿದ್ದಾರೆ.

ಅಂಕಿತ್‌ನ ಕುಟುಂಬಸ್ಥರು ಆತನ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು  ತನಿಖೆ ನಡೆಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 201, 120 (ಬಿ) ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನು ಓದಿ: ಸೌಜನ್ಯ ಪ್ರಕರಣ: ಸಂತೋಷ್‌ ರಾವ್‌ ಖುಲಾಸೆ ಪ್ರಶ್ನಿಸಿ ಸಿಬಿಐ ಮೇಲ್ಮನವಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...