Homeಮುಖಪುಟತೆಲಂಗಾಣ: ಕೇಸರಿ ಪಕ್ಷದಲ್ಲಿ ಆಂತರಿಕ ಕಚ್ಚಾಟ; ವಿಡಿಯೋ ಮೂಲಕ ಸುಳಿವು ಕೊಟ್ಟ ನಾಯಕ, ರಾಜ್ಯ ಬಿಜೆಪಿಯಲ್ಲಿ...

ತೆಲಂಗಾಣ: ಕೇಸರಿ ಪಕ್ಷದಲ್ಲಿ ಆಂತರಿಕ ಕಚ್ಚಾಟ; ವಿಡಿಯೋ ಮೂಲಕ ಸುಳಿವು ಕೊಟ್ಟ ನಾಯಕ, ರಾಜ್ಯ ಬಿಜೆಪಿಯಲ್ಲಿ ಕೋಲಾಹಲ!

- Advertisement -
- Advertisement -

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಜಿತೇಂದರ್ ರೆಡ್ಡಿ ಶೇರ್ ಮಾಡಿರುವ ವಿಡಿಯೋ ತೆಲಂಗಾಣದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಕೇಸರಿ ಪಕ್ಷದೊಳಗಿನ ಆಂತರಿಕ ಕಚ್ಚಾಟದ ಬಗ್ಗೆ ವೀಡಿಯೊ ಸುಳಿವು ನೀಡುತ್ತದೆ.

ವ್ಯಕ್ತಿಯೊಬ್ಬ ಎಮ್ಮೆಯನ್ನು ಟ್ರಕ್‌ಗೆ ಬಲವಂತವಾಗಿ ಒದೆಯುತ್ತಿರುವುದನ್ನು ತೋರಿಸುವ ವಿಡಿಯೋವನ್ನು ಶೇರ್ ಮಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ, ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್, ಬಿಜೆಪಿ ತೆಲಂಗಾಣ ಟ್ವಿಟರ್ ಹ್ಯಾಂಡಲ್‌ಗಳು ಹಾಗೂ ಪ್ರಮುಖ ಬಿಜೆಪಿ ನಾಯಕರನ್ನು ಟ್ಯಾಗ್ ಮಾಡಿದ್ದು, ”ಬಿಜೆಪಿ ತೆಲಂಗಾಣ ನಾಯಕತ್ವಕ್ಕೆ ಈ ಚಿಕಿತ್ಸೆ ಅಗತ್ಯವಿದೆ” ಎಂದು ಬರೆದಿದ್ದಾರೆ.

ಟ್ವೀಟ್‌ನಲ್ಲಿನ ನಿಗೂಢ ಸಂದೇಶವು ತಕ್ಷಣವೇ ಊಹಾಪೋಹಗಳನ್ನು ಹುಟ್ಟುಹಾಕಿದೆ. ಈ ಪೋಸ್ಟ್ ಮೂಲಕ ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್‌ಗೆ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟಕ್ಕೆ ಕಾರಣ ಎಂದು ಆರೋಸಿದ್ದಾರೆ ಎಂದು ಹಲವರು ಊಹಿಸಿದ್ದಾರೆ.

ಇದರಿಂದ ಮತ್ತಷ್ಟು ಕೋಲಾಹಲ ಉಂಟಾದ ಬಳಿಕ ಜಿತೇಂದರ್ ರೆಡ್ಡಿ ಅವರು, ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಲು ಮತ್ತೊಮ್ಮೆ ಟ್ವೀಟ್ ಮಾಡಿ, ”ಬಂಡಿ ಸಂಜಯ್ ವಿರುದ್ಧ ನನ್ನ ಆರೋಪವಲ್ಲ ಬದಲಾಗಿ ಪಕ್ಷದೊಳಗೆ ಅವರ ನಾಯಕತ್ವವನ್ನು ವಿರೋಧಿಸುತ್ತಿರುವವರ ವಿರುದ್ಧ ನನ್ನ ಈ ಪೋಸ್ಟ್” ಎಂದು ಅವರು ಹೇಳಿದ್ದಾರೆ.

ನಂತರ, ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ಎ ರೇವಂತ್ ರೆಡ್ಡಿ ಅವರು ತೆಲುಗಿನಲ್ಲಿ ಟ್ವೀಟ್ ಮಾಡಿ, ”ಜಿತೇಂದರ್ ರೆಡ್ಡಿ ಅವರು ಬಿಜೆಪಿಯ ಆಂತರಿಕ ‘ಡೊಂಕ’ನ್ನು ಅತ್ಯುತ್ತಮ ಹೋಲಿಕೆಯೊಂದಿಗೆ ಸಾರ್ವಜನಿಕರಿಗೆ ವಿವರಿಸಿದ್ದಾರೆ. ಆ ಪಕ್ಷಕ್ಕೆ ಸೇರಿದವರ ಸ್ಥಿತಿಯ ಬಗ್ಗೆ ಯಾರೂ ಹೆಚ್ಚು ಮಾತನಾಡಲಾರರು!” ಎಂದು ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ: ಸಿಎಂ ಶಿಫಾರಸಿಲ್ಲದೆಯೇ ಸೆಂಥಿಲ್‌ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ ಆದೇಶ ವಾಪಸ್ ಪಡೆದ ತಮಿಳುನಾಡು ರಾಜ್ಯಪಾಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಹಿಂಸೆಗೆ ಪ್ರಚೋದಿಸುವ, ಮುಸ್ಲಿಮರ ವಿರುದ್ಧದ ಜಾಹೀರಾತುಗಳನ್ನು ಅನುಮೋದಿಸಿದ್ದ ಮೆಟಾ: ವರದಿ

0
ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ, ಈ ಮಧ್ಯೆ ತಪ್ಪು ಮಾಹಿತಿಯನ್ನು ಹರಡುವ ಸುದ್ದಿಗಳು,  ವೀಡಿಯೊಗಳು ದೇಶದ ಸಾಮರಸ್ಯಕ್ಕೆ ಪ್ರಮುಖ ಬೆದರಿಕೆಯಾಗಿ ಹೊರಹೊಮ್ಮಿವೆ. 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ತಪ್ಪು ಮಾಹಿತಿಯನ್ನು ಹರಡುವ ಹಲವಾರು...