HomeUncategorizedಸ್ವಯಂಪಾಪದ ಹೊಣೆಯನ್ನು ಮೋದಿಯವರು ಬೇರೆಯವರ ಮೇಲೆ ಹೊರಿಸಿದ್ದಾರೆ: ಸಿದ್ದು

ಸ್ವಯಂಪಾಪದ ಹೊಣೆಯನ್ನು ಮೋದಿಯವರು ಬೇರೆಯವರ ಮೇಲೆ ಹೊರಿಸಿದ್ದಾರೆ: ಸಿದ್ದು

- Advertisement -
- Advertisement -

ಪ್ರಧಾನಿ ಮೋದಿಯವರು ತಮ್ಮ 5 ವರ್ಷಗಳ ಆಡಳಿತ ವ್ಯರ್ಥವಾಗಲು ಅಧಿಕಾರಿಗಳು ಕಾರಣ ಎಂದು ಆರೋಪಿಸಿದ್ದಾರೆ. ಪ್ರಧಾನಿಯವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ನಿರೀಕ್ಷೆಯಂತೆ ಸ್ವಯಂಪಾಪದ ಹೊಣೆಯನ್ನು ಬೇರೆಯವರ ಮೇಲೆ ಹೊರಿಸಿದ್ದಾರೆ.‌ ಆ ಹೊರೆಯನ್ನು ಹೊರಬೇಕಾಗಿ ಬಂದ ಅಧಿಕಾರಿಗಳ ಬಗ್ಗೆ ಅನುಕಂಪಗಳು ಎಂದು ಸಿದ್ದರಾಮಯ್ಯನವರು ಟ್ವೀಟ್‌ ಮಾಡಿದ್ದಾರೆ.

ಕಳೆದ ತಿಂಗಳು ಏಕ್‌ ಭಾರತ್‌, ಶ್ರೇಷ್ಠ ಭಾರತ್‌ ಕಾರ್ಯಕ್ರಮದಲ್ಲಿ ಮೋದಿ ಮಾತಾಡಿದ್ದ ಮಾತುಗಳು ನಿನ್ನೆ ಮಾಧ್ಯಮಗಳಲ್ಲಿ ಸುದ್ದಿಯಾಗಿವೆ. ಅದರಲ್ಲಿ ಮೋದಿಯವರು ಎನ್‌ಡಿಎ ಮೊದಲ 5 ವರ್ಷಗಳ ಆಡಳಿತ ಮಂದ ಅಧಿಕಾರಿಗಳಿಂದ ಹಾಳಾಗಿದೆ ಎಂದು ಆರೋಪಿಸಿದ್ದರು. ಹಾಗಾಗಿ ಅಂತಹ ಅಧಿಕಾರಿಗಳನ್ನು ಕೈಬಿಟ್ಟು ಚುರುಕಿನ, ಯುವ ಅಧಿಕಾರಿಗಳಗೆ ಮಣೆ ಹಾಕಲಾಗುವುದು ಎಂದಿದ್ದರು.

ಮೋದಿಯವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ದಾಖಲಾಗಿದೆ. ತಮ್ಮ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದು ಸರಿಯಲ್ಲ ಎಂದು ಹಲವಾರು ಜನ ಕಿಡಿಕಾರಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಣದುಬ್ಬರ, ಉದ್ಯೋಗಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ: ಪ್ರಿಯಾಂಕಾ...

0
'ಆಡಳಿತಾರೂಢ ಬಿಜೆಪಿ ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತದೆ ಅಥವಾ ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂಬುದರ ಕುರಿತು ಮಾತನಾಡುವ ಬದಲು ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ' ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ...