ಬಿಎಸ್‌‌ಪಿ
PC: PTI

ಸಮಾಜವಾದಿ ಪಕ್ಷದ (ಎಸ್‌ಪಿ) ಅಭ್ಯರ್ಥಿಗಳನ್ನು ಸೋಲಿಸುವುದಕ್ಕಾಗಿ ಬಿಜೆಪಿಯನ್ನು ಬೆಂಬಲಿಸುತ್ತೇವೆ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಬಿಎಸ್‌‌ಪಿ ಮುಖ್ಯಸ್ಥೆ ಮಾಯಾವತಿ, ಇದೀಗ ಉಲ್ಟಾ ಹೊಡೆದಿದ್ದಾರೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ರಾಜಕೀಯದಿಂದ ನಿವೃತ್ತಳಾಗುತ್ತೇನೆ ಎಂದು ಹೇಳಿದ್ದಾರೆ.

“ಬಿಜೆಪಿಯೊಂದಿಗೆ  ಬಿಎಸ್ಪಿ ಮೈತ್ರಿ ಭವಿಷ್ಯದ ಯಾವುದೇ ಚುನಾವಣೆಗಳಲ್ಲಿ ಸಾಧ್ಯವಿಲ್ಲ. ಬಿಎಸ್ಪಿಯು ಕೋಮುವಾದಿ ಪಕ್ಷದೊಂದಿಗೆ ಸೇರುವುದಿಲ್ಲ. ನಮ್ಮ ಸಿದ್ಧಾಂತ ‘ಸರ್ವಜನ, ಸರ್ವಧರ್ಮ ಹಿತಾಯ’, ಇದು ಬಿಜೆಪಿಯ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಬಿಎಸ್ಪಿ ಕೋಮು, ಜಾತಿ ಮತ್ತು ಬಂಡವಾಳಶಾಹಿ ಸಿದ್ಧಾಂತವನ್ನು ಹೊಂದಿರುವವರೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಯುಪಿ ಪರಿಷತ್ ಚುನಾವಣೆ: BJPಗೆ ಬೆಂಬಲ ನೀಡಲು ಸಿದ್ಧ; ಮಾಯಾವತಿ


ರಾಜ್ಯ ವಿಧಾನಸಭೆ ಮತ್ತು ರಾಜ್ಯಸಭೆ ಸೇರಿದಂತೆ ಮುಂದಿನ ಚುನಾವಣೆಗಳಲ್ಲಿ ಸಮಾಜವಾದಿ ಅಭ್ಯರ್ಥಿಗಳನ್ನು ಸೋಲಿಸಲು ಬಿಜೆಪಿ ಅಥವಾ ಯಾವುದೇ ಪಕ್ಷದ ಅಭ್ಯರ್ಥಿಗೆ ಬಿಎಸ್‌‌ಪಿಯು ಮತ ಚಲಾಯಿಸುತ್ತದೆ ಎಂದು ಇತ್ತೀಚೆಗೆ ಮಾಯಾವತಿ ಹೇಳಿದ್ದರು.

ಮುಂದಿನ ಶಾಸಕಾಂಗ ಮಂಡಳಿ ಚುನಾವಣೆಯಲ್ಲಿ ಎಸ್‌ಪಿಯ ಎರಡನೇ ಅಭ್ಯರ್ಥಿಯ ಸೋಲನ್ನು ಬಿಎಸ್‌ಪಿ ಖಚಿತಪಡಿಸುತ್ತದೆ ಎಂದು ಅವರು ಪುನರುಚ್ಚರಿಸಿದರು.

ಎಸ್‌ಪಿಯ ಎರಡನೇ ಅಭ್ಯರ್ಥಿಯನ್ನು ಸೋಲಿಸಲು ಬಿಜೆಪಿ ಸೇರಿದಂತೆ ಯಾವುದೇ ಪಕ್ಷದ ಅಭ್ಯರ್ಥಿಯನ್ನು ನಮ್ಮ ಪಕ್ಷ ಬೆಂಬಲಿಸುತ್ತದೆ ಎಂದು ಹೇಳಿದೆ ಅವರು, ತನ್ನ ಈ ಹಿಂದಿನ ಹೇಳಿಕೆಯನ್ನು ಸಮರ್ಥಿಸಿದರು. ತನ್ನ ಹೇಳಿಕೆಯನ್ನು ರಾಜಕೀಯ ಲಾಭಕ್ಕಾಗಿ ಎಸ್ಪಿ ಮತ್ತು ಕಾಂಗ್ರೆಸ್ ತಿರುಚಿದೆ. ಇದರಿಂದ ಮುಸ್ಲಿಂ ಸಮುದಾಯವು ಪಕ್ಷದಿಂದ ದೂರವಿರುವಂತೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.


ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿ, ಇಲ್ಲ ಪಕ್ಷದ ಸದಸ್ಯತ್ವ ರದ್ದು – ಮಾಯಾವತಿ

LEAVE A REPLY

Please enter your comment!
Please enter your name here