HomeಮುಖಪುಟNSE ಮಾಜಿ ಉನ್ನತ ಅಧಿಕಾರಿ ಚಿತ್ರಾ ರಾಮಕೃಷ್ಣ ಅವರ ಸಲಹೆಗಾರ ಆನಂದ್‌ ಸುಬ್ರಮಣಿಯನ್‌ ಬಂಧಿಸಿದ CBI

NSE ಮಾಜಿ ಉನ್ನತ ಅಧಿಕಾರಿ ಚಿತ್ರಾ ರಾಮಕೃಷ್ಣ ಅವರ ಸಲಹೆಗಾರ ಆನಂದ್‌ ಸುಬ್ರಮಣಿಯನ್‌ ಬಂಧಿಸಿದ CBI

- Advertisement -
- Advertisement -

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್‌ ಆನಂದ್ ಸುಬ್ರಮಣಿಯನ್ ಅವರನ್ನು 2018 ರಲ್ಲಿ ಷೇರುಗಳನ್ನು ತಿರುಚಿರುವ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿದೆ. “ಗುರುವಾರ ತಡರಾತ್ರಿ ಚೆನ್ನೈನಲ್ಲಿ ಅಧಿಕಾರಿಗಳ ತಂಡ ಸುಬ್ರಮಣಿಯನ್ ಅವರನ್ನು ಬಂಧಿಸಿದೆ. ಇಂದು ಅವರನ್ನು ಸಕ್ಷಮ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು” ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌‌ ವರದಿ ಮಾಡಿದೆ.

ಸಿಬಿಐ ಫೆಬ್ರವರಿ 21 ರಂದು ಮೂರು ದಿನಗಳ ಕಾಲ ಸುಬ್ರಮಣಿಯನ್ ಅವರನ್ನು ವಿಚಾರಣೆ ನಡೆಸಿ ತನ್ನ ವಿಚಾರಣೆಯನ್ನು ಅಂತ್ಯಗೊಳಿಸಿತ್ತು. ಸಿಬಿಐ ಈಗಾಗಲೇ NSEನ ಮಾಜಿ ಎಂಡಿ-ಸಿಇಒ ಚಿತ್ರಾ ರಾಮಕೃಷ್ಣ ಮತ್ತು ಮಾಜಿ ಸಿಇಒ ರವಿ ನರೇನ್‌ ಅವರನ್ನು ಪ್ರಶ್ನಿಸಿತ್ತು. ಚಿತ್ರಾ ರಾಮಕೃಷ್ಣ ಅವರ ವಿಚಾರಣೆ ಕಳೆದ ಶುಕ್ರವಾರ ನಡೆದರೆ, ಶನಿವಾರ ರವಿ ನರೇನ್ ಅವರನ್ನು ವಿಚಾರಣೆ ನಡೆಸಲಾಗಿತ್ತು.

ಇದನ್ನೂ ಓದಿ: NSEಯ ಮಹಾ ಹಗರಣ: ಸಿಇಒ ಚಿತ್ರಾ ರಾಮಕೃಷ್ಣರನ್ನು ಕೈಗೊಂಬೆ ಮಾಡಿಕೊಂಡಿದ್ದ ‘ಯೋಗಿ’ ಯಾರು? 

ಈ ವಾರದ ಆರಂಭದಲ್ಲಿ, ಸಿಬಿಐ ತಂಡವು ಮುಂಬೈನಲ್ಲಿರುವ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಕಚೇರಿಗೆ ಭೇಟಿ ನೀಡಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿದೆ.

ಸಿಬಿಐ ಪ್ರಕಾರ, ಸೆಬಿ ವರದಿಯ ಹಿನ್ನಲೆಯಲ್ಲಿ ವಿಚಾರಣೆಗಳನ್ನು ಮಾಡಲಾಗುತ್ತಿದೆ. NSE ವಿಚಾರವಾಗಿ ಚಿತ್ರಾ ಅವರು “ಹಿಮಾಲಯದ ಯೋಗಿ” ಯೊಂದಿಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದು, ನಿಯಮಗಳಿಗೆ ವಿರುದ್ಧವಾಗಿ ಆನಂದ್‌ ಸುಬ್ರಮಣಿಯನ್ ಅವರ ನೇಮಕಾತಿ ಮಾಡಿದ್ದಾರೆ ಎಂದು ದೋಷಾರೋಪಣೆ ಮಾಡಲಾಗಿದೆ.

ಆನಂದ್‌ ಸುಬ್ರಮಣಿಯನ್ ಅವರನ್ನು ಜಿಒಒ ಮತ್ತು ಎಂಡಿ ಸಲಹೆಗಾರರನ್ನಾಗಿ ನೇಮಿಸುವಲ್ಲಿ ಸೆಕ್ಯುರಿಟೀಸ್ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಚಿತ್ರಾ ಮತ್ತು ಇತರ ಕೆಲವರಿಗೆ ಸೆಬಿ ಎರಡು ವಾರಗಳ ಹಿಂದೆ ದಂಡ ವಿಧಿಸಿತ್ತು. ಆನಂದ್‌ ಸುಬ್ರಮಣಿಯನ್ ಅವರ ನೇಮಕಾತಿ ಮಾಡುವಂತೆ ತನಗೆ ಒಬ್ಬ “ಯೋಗಿ” ಸಲಹೆ ನೀಡಿದ್ದರು ಎಂದು ಚಿತ್ರಾ ಸೆಬಿ ತನಿಖೆಯನ್ನು ಹೇಳಿದ್ದಾರೆ. ಆನಂದ್‌ ಸುಬ್ರಮಣಿಯನ್ ಅವರೇ ಈ ಅಪರಿಚಿತ ಯೋಗಿ ಆಗಿದ್ದರು ಎಂದು ಕೂಡಾ ಹೇಳಲಾಗುತ್ತಿದೆ.

ಇದನ್ನೂ ಓದಿ: ರಾಜನಾಥ್ ಸಿಂಗ್‌ ಮಾತು ಕಡೆಗಣಿಸಿ ಮತ್ತೆ ಜಿನ್ನಾ ಹೆಸರು ಬಳಸಿದ ಸಿಎಂ ಯೋಗಿ ಆದಿತ್ಯನಾಥ್

ಈ ವರದಿಯ ನಂತರ, ಆದಾಯ ತೆರಿಗೆ ಇಲಾಖೆಯು NSE ಆಂತರಿಕ ವಿಚಾರವನ್ನು ಹೊರಗಿನ ವ್ಯಕ್ತಿಗೆ ಮಾಹಿತಿ ರವಾನಿಸುವ ಮೂಲಕ ಅಕ್ರಮ ಲಾಭ ಮಾಡಿದ್ದಾರೆ ಎಂಬ ಆರೋಪ ಮೇಲೆ ಚಿತ್ರಾ ಮತ್ತು ಆನಂದ್‌ ಸುಬ್ರಮಣಿಯನ್ ಅವರ ನಿವಾಸಗಳಲ್ಲಿ ಶೋಧ ನಡೆಸಿತ್ತು.

NSE ಯಲ್ಲಿ ಕೆಲವು ದಳ್ಳಾಳಿಗಳಿಗೆ ಅನುಕೂಲವಾಗಿವಂತೆ ವ್ಯವಸ್ಥೆ ಮಾಡಿಕೊಡಲಾಗಿತ್ತು ಎಂದು 2018 ರಲ್ಲಿ ಪ್ರಕರಣ ದಾಖಲಾಗಿತ್ತು. ದೆಹಲಿ ಮೂಲದ ಒಪಿಜಿ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್‌ನ ಮಾಲೀಕ ಮತ್ತು ಪ್ರವರ್ತಕ ಸಂಜಯ್ ಗುಪ್ತಾ ಮತ್ತು ಇತರರ ವಿರುದ್ಧ ಕೂಡಾ ಸಿಬಿಐ ಪ್ರಕರಣ ದಾಖಲಿಸಿದೆ.

2010 ಮತ್ತು 2014 ರ ನಡುವೆ, ಸಂಜಯ್‌ ಗುಪ್ತಾ NSEಯ ಸರ್ವರ್ ಆರ್ಕಿಟೆಕ್ಚರ್ ಅನ್ನು ದುರುಪಯೋಗಪಡಿಸಿಕೊಂಡು, NSE ಯ ಅಪರಿಚಿತ ಅಧಿಕಾರಿಗಳೊಂದಿಗೆ ಕ್ರಿಮಿನಲ್ ಪಿತೂರಿ ನಡೆಸಿದ್ದು, ಸೆಬಿ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಸಿಬಿಐ ಹೇಳಿದೆ.

ಚಿತ್ರಾ ರಾಮಕೃಷ್ಣ ಅವರು ಏಪ್ರಿಲ್ 2013 ರಿಂದ ಡಿಸೆಂಬರ್ 2016 ರವರೆಗೆ NSEಯ ಎಂಡಿ ಮತ್ತು ಸಿಇಒ ಆಗಿದ್ದರು, ನರೇನ್ ಅವರು ಏಪ್ರಿಲ್ 1994 ರಿಂದ ಮಾರ್ಚ್ 2013 ರವರೆಗೆ ಆ ಹುದ್ದೆಯಲ್ಲಿದ್ದರು.

ಇದನ್ನೂ ಓದಿ: ಪ್ರಧಾನಿ, ಯೋಗಿ ಆದಿತ್ಯನಾಥ್ ಪರ ಘೋಷಣೆ ಕೂಗುವಂತೆ ಮಕ್ಕಳಿಗೆ ಸೂಚನೆ : ತನಿಖೆಗೆ ಆದೇಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...