Homeಚಳವಳಿರೈತರು ಪ್ರತಿಭಟನೆಗೆ ತಲುಪದಂತೆ ರೈಲನ್ನೇ ತಿರುಗಿಸಿದ ಕೇಂದ್ರ ಸರ್ಕಾರ?

ರೈತರು ಪ್ರತಿಭಟನೆಗೆ ತಲುಪದಂತೆ ರೈಲನ್ನೇ ತಿರುಗಿಸಿದ ಕೇಂದ್ರ ಸರ್ಕಾರ?

- Advertisement -
- Advertisement -

ಕರಾಳ ಕೃಷಿ ಕಾನೂನಿನ ವಿರುದ್ದ ರೈತರು ನಡೆಸುತ್ತಿರುವ ಹೋರಾಟವನ್ನು ಒಡೆಯುವ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಜಾರಿಯಲ್ಲಿಟ್ಟಿದೆ. ಇದೀಗ ಹೊಸ ಆರೋಪವನ್ನು ರೈತ ಮುಖಂಡರು ಕೇಂದ್ರ ಸರ್ಕಾರದ ವಿರುದ್ದ ಮಾಡಿದ್ದಾರೆ. ಪ್ರತಿಭಟನೆಯನ್ನು ಸೇರಲು ಬರುತ್ತಿದ್ದ ರೈಲೊಂದನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿರುವ ಸ್ವರಾಜ್ ಇಂಡಿಯಾ ಮುಖಂಡರೂ ಆಗಿರುವ ಯೋಗೇಂದ್ರ ಯಾದವ್, “ಫೆರೋಝ್‌ಪುರ್-ಮುಂಬೈ-ಪಂಜಾಬ್‌ ರೈಲನ್ನು ರೋಹಟಕ್‌‌ನಿಂದ ರೇವಾರಿಗೆ ಇಂದು ಬೆಳಿಗ್ಗೆ ತಿರುಗಿಸಲಾಗಿದೆ. ಅದರಲ್ಲಿರುವ 1000 ರೈತರನ್ನು ದೆಹಲಿಗೆ ತಲುಪದಂತೆ ಮಾಡಲು ಹೀಗೆ ಮಾಡಲಾಗಿದೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಗೆಲ್ಲುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ: ಸಿಂಘು ಗಡಿಯಲ್ಲಿ ಗುರ್ತೇಜ್ ಸಿಂಗ್ ಗುಡುಗು

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾನೂನಿನ ವಿರುದ್ದ ರೈತರು ನಡೆಸುತ್ತಿರುವ ಹೋರಾಟ ಇಂದಿಗೆ 69ನೇ ದಿನಕ್ಕೆ ಕಾಲಿಟ್ಟೆದೆ. ರೈತರೊಂದಿಗೆ ಕೇಂದ್ರವು ಇದುವರೆಗೂ ಹನ್ನೊಂದು ಸುತ್ತಿನ ಮಾತುಕತೆ ನಡೆಸಿದ್ದು ಎಲ್ಲವು ವಿಫಲವಾಗಿದೆ. ರೈತರು ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ: ರೌಡಿಶೀಟರ್ ಪಟ್ಟಿಯಲ್ಲಿ ಡಾ.ಕಫೀಲ್ ಖಾನ್ ಹೆಸರು – ಒಳ್ಳೆಯದೇ ಆಯ್ತು ಎಂದ ಕಫೀಲ್ ಖಾನ್!

ವಿಧಾನಸಭೆ ಅಧಿವೇಶನದ ನೇರಪ್ರಸಾರ- ಸಿದ್ದರಾಮಯ್ಯನವರ ಮಾತುಗಳು | ಫೇಸ್‌‌ಬುಕ್ ಲೈವ್ ನೋಡಿ ►►

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದೇಶದಲ್ಲಿ ‘ಭ್ರಷ್ಟಾಚಾರದ ಶಾಲೆ’ಯನ್ನು ನಡೆಸುತ್ತಿದ್ದಾರೆ: ರಾಹುಲ್‌ ಗಾಂಧಿ ವಾಗ್ಧಾಳಿ

0
ಚುನಾವಣಾ ಬಾಂಡ್‌ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್‌ ಗಾಂಧಿ ವಾಗ್ಧಾಳಿಯನ್ನು ನಡೆಸಿದ್ದು, ಮೋದಿ ದೇಶದಲ್ಲಿ 'ಭ್ರಷ್ಟಾಚಾರದ ಶಾಲೆ'ಯನ್ನು ನಡೆಸುತ್ತಿದ್ದಾರೆ ಮತ್ತು ಸಂಪೂರ್ಣ ಭ್ರಷ್ಟಾಚಾರ ವಿಜ್ಞಾನ" ವಿಷಯದಲ್ಲಿ ಎಲ್ಲಾ ಅಧ್ಯಾಯಗಳನ್ನು ಕಲಿಸುತ್ತಿದ್ದಾರೆ...