Homeಮುಖಪುಟಬಿಹಾರಕ್ಕೆ 100 ವೆಂಟಿಲೇಟರ್‌ ಕೊಡಲು 70 ದಿನ ತೆಗೆದುಕೊಂಡ ಕೇಂದ್ರ ಸರ್ಕಾರ

ಬಿಹಾರಕ್ಕೆ 100 ವೆಂಟಿಲೇಟರ್‌ ಕೊಡಲು 70 ದಿನ ತೆಗೆದುಕೊಂಡ ಕೇಂದ್ರ ಸರ್ಕಾರ

- Advertisement -
- Advertisement -

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಕೇಂದ್ರವು ಬಿಹಾರಕ್ಕೆ 100 ವೆಂಟಿಲೇಟರ್‌ ಗಳನ್ನು ಒದಗಿಸಲು 70 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ. ಬಿಹಾರದಲ್ಲಿ ಕೇವಲ ಮೂರು ಕೊರೊನಾ ಪ್ರಕರಣಗಳು ಮತ್ತು ಒಂದು ಸಾವು ವರದಿಯಾದಾಗ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಏಪ್ರಿಲ್ 2 ರಂದು ರಾಜ್ಯಗಳೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪ್ರಧಾನ ಮಂತ್ರಿಯಿಂದ ಕನಿಷ್ಠ 100 ವೆಂಟಿಲೇಟರ್‌ಗಳನ್ನು ಕೋರಿದ್ದರು.

ಅಂತಿಮವಾಗಿ, 100 ವೆಂಟಿಲೇಟರ್‌ ಭಾನುವಾರ (ಜೂನ್ 7) ಬಿಹಾರಕ್ಕೆ ತಲುಪಿದವು. ಸೋಮವಾರ ರಾಜ್ಯ ಆರೋಗ್ಯ ಸಚಿವ ಮಂಗಲ್ ಪಾಂಡೆ ಹೇಳಿಕೊಂಡಂತೆ, COVID-19 ಪ್ರಕರಣಗಳ ಸಂಖ್ಯೆ 5,000 ದಾಟಿದೆ. ಸೋಮವಾರದ ವೇಳೆಗೆ, ಬಿಹಾರದಲ್ಲಿ 5,175 ಪ್ರಕರಣಗಳು ದಾಖಲಾಗಿದ್ದು, 31 ಸಾವುಗಳು ವರದಿಯಾಗಿವೆ.

ಈ 100 ವೆಂಟಿಲೇಟರ್‌ಗಳಲ್ಲಿ ಕೇವಲ 40 ಮಾತ್ರ COVID-19 ಮೀಸಲಾದ ಸರ್ಕಾರಿ ಆಸ್ಪತ್ರೆಗಳಿಗೆ ಸಿಗಲಿವೆ. ಉಳಿದವು ಇತರ ಆಸ್ಪತ್ರೆಗಳಿಗೆ ಸೇರಲಿವೆ. ಕೇಂದ್ರವು ಒದಗಿಸಿದ 100 ವೆಂಟಿಲೇಟರ್‌ಗಳೊಂದಿಗೆ, ಈಗ ನಿರ್ಣಾಯಕವಾಗಿ COVID-19 ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುವುದು ಸುಲಭವಾಗಲಿದೆ ಎಂದು ಪಾಂಡೆ ಹೇಳಿದ್ದಾರೆ.

ಕಳೆದ ತಿಂಗಳವರೆಗೆ, ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಮೂರು COVID-19 ಮೀಸಲಾದ ಆಸ್ಪತ್ರೆಗಳು COVID-19 ಪ್ರಕರಣಗಳ ಚಿಕಿತ್ಸೆಯ ಕೇಂದ್ರಗಳಾಗಿ ಮಾರ್ಪಟ್ಟಿವೆ. ಅಲ್ಲಿ ಕೇವಲ 50 ವೆಂಟಿಲೇಟರ್‌ಗಳು ಇವೆ. “ಪ್ರಕರಣಗಳಲ್ಲಿನ ಹೆಚ್ಚಳವನ್ನು ಎದುರಿಸಲು ರಾಜ್ಯಕ್ಕೆ ಹೆಚ್ಚಿನ ವೆಂಟಿಲೇಟರ್‌ ಬೇಕಾಗುತ್ತವೆ” ಎಂದು ಅಧಿಕಾರಿಗಳು ಹೇಳಿದ್ದಾರೆ.

ಏಪ್ರಿಲ್ ಆರಂಭದಲ್ಲಿ, ನಿತೀಶ್ ಕುಮಾರ್ ಅವರು ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಸಿಬ್ಬಂದಿಗಳ ರಕ್ಷಣೆಗಾಗಿ ಕೇಂದ್ರದಿಂದ 10 ಲಕ್ಷ ಎನ್ 95 ಮಾಸ್ಕ್‌ಗಳು ಮತ್ತು ಐದು ಲಕ್ಷ ವೈಯಕ್ತಿಕ ರಕ್ಷಣಾ ಸಾಧನಗಳ ( ಪಿಪಿಇ) ಕಿಟ್‌ಗಳನ್ನು ಕೋರಿದ್ದರು. ರಾಜ್ಯಕ್ಕೆ ಇದುವರೆಗೆ ಕೇವಲ 50,000 ಮಾಸ್ಕ್‌ಗಳು ಮತ್ತು 4,000 ಪಿಪಿಇ ಕಿಟ್‌ಗಳು ಬಂದಿವೆ ಎಂದು ಅವರು ಈಗ ಸ್ಪಷ್ಟಪಡಿಸಿದ್ದಾರೆ.

ಕನಿಷ್ಠ 100 ವೆಂಟಿಲೇಟರ್‌ಗಳು ಮತ್ತು 10,000 ಆರ್‌ಎನ್‌ಎ ಹೊರತೆಗೆಯುವ ಕಿಟ್‌ಗಳನ್ನು ಕೋರಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿಹಾರಕ್ಕೆ ಒಂದೇ ಒಂದು ವೆಂಟಿಲೇಟರ್ ನೀಡಲು ಕೇಂದ್ರ ಸರ್ಕಾರ ವಿಫಲವಾಗಿದೆ.


ಇದನ್ನೂ ಓದಿ: ಅನೋಷ್ಕಾ ಚೋಪ್ರಾ ಫೇಸ್‌ಬುಕ್‌ ಖಾತೆ ಮೂಲಕ ಪಾಕ್‌ ಪರ ಗೂಢಾಚರ್ಯೆ: ಇಬ್ಬರ ಬಂಧನ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read