Homeಮುಖಪುಟತನ್ನ ವಿರುದ್ದದ ಮೊಕದ್ದಮೆ ರದ್ದುಗೊಳಿಸುವಂತೆ ಕಂಗನಾ ಕೋರಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್

ತನ್ನ ವಿರುದ್ದದ ಮೊಕದ್ದಮೆ ರದ್ದುಗೊಳಿಸುವಂತೆ ಕಂಗನಾ ಕೋರಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್

- Advertisement -
- Advertisement -

ತನ್ನ ವಿರುದ್ದ ಬಾಲಿವುಡ್‌ನ ಹಿರಿಯ ಗೀತರಚನೆಕಾರ ಜಾವೇದ್ ಅಖ್ತರ್‌ ಸಲ್ಲಿಸಿದ ಮಾನಹಾನಿ ಪ್ರಕರಣವನ್ನು ರದ್ದುಗೊಳಿಸುವಂತೆ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಅಂಧೇರಿ ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ.

ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಮಾಡಿದ್ದ ಅವಹೇಳನಕಾರಿ ಆರೋಪದ ವಿರುದ್ದ ಕಳೆದ ವರ್ಷ ಕಂಗಾನಾ ರಣಾವತ್‌ ಮೇಲೆ ಜಾವೆದ್ ಅಖ್ತರ್‌ ಅವರು ಮಾನಹಾನಿ ಪ್ರಕರಣ ದಾಖಲಿಸಿದ್ದರು. ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನಲ್ಲಿ ಬಾಲಿವುಡ್ ಉನ್ನತ ಮಟ್ಟದ ಪಾತ್ರ ಇದೆಯೆಂದು ಹೇಳುತ್ತಾ ಜಾವೆದ್ ಅಖ್ತರ್ ಅವರ ಹೆಸರನ್ನು ಕಂಗನಾ ರಣಾವತ್‌ ಉಲ್ಲೇಖಿಸಿದ್ದರು.

ಇದನ್ನೂ ಓದಿ: ಟಿಎಂಸಿ ಮಹಿಳಾ ಅಭ್ಯರ್ಥಿಯನ್ನು ಅಟ್ಟಿಸಿಕೊಂಡು ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತರು

ಅಷ್ಟೇ ಅಲ್ಲದೆ ಬಾಲಿವುಡ್‌ನ ಮತ್ತೊಬ್ಬ ನಟನಾದ ಹೃತಿಕ್ ರೋಶನ್‌ ಹಾಗೂ ತನ್ನ ಸಂಬಂಧದ ಬಗ್ಗೆ ಮಾತನಾಡದಂತೆ ಜಾವೆದ್ ಅಖ್ತರ್‌ ಅವರು ತನಗೆ ಬೆದರಿಕೆ ಹಾಕಿದ್ದರು ಎಂದು ಕೂಡಾ ಅವರು ಅಂದು ಆರೋಪಿಸಿದ್ದರು.

ಕಂಗನಾ ಆರೋಪದ ವಿರುದ್ದ ಜಾವೇದ್ ಅಖ್ತರ್‌ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು, ಮಾನಹಾನಿ ಪ್ರಕರಣದ ದಾಖಲಿಸಿದ್ದರು. ನ್ಯಾಯಾಲಯವು ನಟಿಗೆ ಪ್ರಕರಣದ ಬಗ್ಗೆ ಉತ್ತರಿಸುವಂತೆ ಪದೇ ಪದೇ ಸಮನ್ಸ್ ಕಳುಹಿಸಿತ್ತಾದೂ, ಅವರು ನ್ಯಾಯಾಲಯಕ್ಕೆ ಉತ್ತರಿಸಿರಲಿಲ್ಲ. ಅಲ್ಲದೆ ತಮ್ಮ ಮೇಲಿನ ಸಮನ್ಸ್ ರದ್ದು ಪಡಿಸುವಂತೆ ಕೋರಿ ಅರ್ಜಿಯನ್ನು ಸಲ್ಲಿಸಿದ್ದರು.

ಆದರೆ ನ್ಯಾಯಾಲಯವು ಅದಕ್ಕೆ ನಿರಾಕರಿಸಿದ್ದು ನಟಿ ಕಂಗನಾ ರಣಾವತ್‌‌ ಅವರ ಅರ್ಜಿಯನ್ನು ರದ್ದುಗೊಳಿಸಿದೆ.

ಇದನ್ನೂ ಓದಿ: ಲೈಂಗಿಕ ಸಿಡಿ ಪ್ರಕರಣ: FIR ದಾಖಲಿಸದ ಕಮಲ್ ಪಂತ್ ವಿರುದ್ಧ ಖಾಸಗಿ ದೂರು ನೀಡಿದ ಜನಾಧಿಕಾರ ಸಂಘರ್ಷ ಪರಿಷತ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಚುನಾವಣೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ..’; ಇವಿಎಂ-ವಿವಿಪ್ಯಾಟ್ ಪರಿಶೀಲನೆ ಆದೇಶವನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

0
'ಇವಿಎಂ-ವಿವಿಪ್ಯಾಟ್ ಪರಿಶೀಲನಾ ಅರ್ಜಿ' ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಕಾಯ್ದಿರಿಸಿದ್ದು, 'ಮತ್ತೊಂದು ಸಾಂವಿಧಾನಿಕ ಪ್ರಾಧಿಕಾರದಿಂದ ನಡೆಸಬೇಕಾದ ಚುನಾವಣೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ' ಎಂದು ನ್ಯಾಯಾಲಯವು ಹೇಳಿತು. 2024ರ ಲೋಕಸಭಾ ಚುನಾವಣೆಯ ಎರಡನೇ ಹಂತವು...