Homeಮುಖಪುಟಅದಾನಿ ಗ್ರೂಪ್‌ಗೆ ಸಂಬಂಧಿಸಿದ ಕಂಪನಿಗಳಿಂದ ₹55.4 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ ಖರೀದಿ: ಈ ಪೈಕಿ...

ಅದಾನಿ ಗ್ರೂಪ್‌ಗೆ ಸಂಬಂಧಿಸಿದ ಕಂಪನಿಗಳಿಂದ ₹55.4 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ ಖರೀದಿ: ಈ ಪೈಕಿ ₹42.4 ಕೋಟಿ ನಗದೀಕರಿಸಿದ ಬಿಜೆಪಿ

- Advertisement -
- Advertisement -

ಅದಾನಿ ಸಮೂಹದೊಂದಿಗೆ ಸಂಪರ್ಕ ಹೊಂದಿರುವ ನಾಲ್ಕು ಕಂಪನಿಗಳು ಏಪ್ರಿಲ್ 2019 ರಿಂದ ನವೆಂಬರ್ 2023ರವರೆಗೆ ಒಟ್ಟು 55.4 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.

ಇವುಗಳಲ್ಲಿ ಎಬಿಸಿ ಇಂಡಿಯಾ ಲಿಮಿಟೆಡ್ ಮತ್ತು ವೆಲ್‌ಸ್ಪನ್ ಗ್ರೂಪ್‌ನ ಮೂರು ಅಂಗಸಂಸ್ಥೆಗಳು ಸೇರಿವೆ.

ರೂ. 55 ಕೋಟಿ ಮೌಲ್ಯದ ಬಾಂಡ್‌ಗಳನ್ನು ಬಿಕೆ ಗೋಯೆಂಕಾ ಸ್ಥಾಪಿಸಿದ ಮುಂಬೈ ಮೂಲದ ವೆಲ್‌ಸ್ಪನ್ ಗ್ರೂಪ್‌ನ ಮೂರು ಅಂಗ ಸಂಸ್ಥೆಗಳು ಖರೀದಿಸಿವೆ. ಚುನಾವಣಾ ಆಯೋಗವು ನಿನ್ನೆ (ಮಾ.21) ಅಪ್ಲೋಡ್ ಮಾಡಿರುವ ಮಾಹಿತಿಯ ಪ್ರಕಾರ, ಈ ಬಾಂಡ್‌ಗಳಲ್ಲಿ 42 ಕೋಟಿ ರೂಪಾಯಿಗಳನ್ನು ಬಿಜೆಪಿ ನಗದೀಕರಣ ಮಾಡಿಕೊಂಡಿದೆ.

ಬಾಂಡ್‌ಗಳನ್ನು ಖರೀದಿಸಿದ ಮೊದಲ ಅಂಗಸಂಸ್ಥೆ ವೆಲ್‌ಸ್ಪನ್ ಎಂಟರ್‌ಪ್ರೈಸಸ್ ಲಿಮಿಟೆಡ್, ಏಪ್ರಿಲ್ 2019 ರಲ್ಲಿ ರೂ. 3 ಕೋಟಿ ಮತ್ತು ನವೆಂಬರ್ 2022ರಲ್ಲಿ ರೂ. 10 ಕೋಟಿ ಸೇರಿ ಎರಡು ಹಂತಗಳಲ್ಲಿ ರೂ. 13 ಕೋಟಿ ಮೌಲ್ಯದ ಬಾಂಡ್‌ಗಳನ್ನು ಈ ಕಂಪನಿ ಖರೀದಿಸಿದೆ.

ಅದಾನಿ ಸಮೂಹದೊಂದಿಗೆ ವೆಲ್‌ಸ್ಪನ್ ಗ್ರೂಪ್‌ನ ಸಂಬಂಧ: 2005ರಲ್ಲಿ, ಅದಾನಿ ಸಮೂಹ ವೆಲ್‌ಸ್ಪನ್ ಜೊತೆಗೆ ಅದಾನಿ ವೆಲ್‌ಸ್ಪನ್ ಎಕ್ಸ್‌ಪ್ಲೋರೇಷನ್ ಲಿಮಿಟೆಡ್, ವೆಲ್‌ಸ್ಪನ್ ನ್ಯಾಚುರಲ್ ರಿಸೋರ್ಸಸ್ ಪ್ರೈವೆಟ್ ಲಿಮಿಟೆಡ್ ಎಂಬ ಜಂಟಿ ಉದ್ಯಮ ಸ್ಥಾಪಿಸಿತ್ತು.

ಪತ್ರಿಕಾ ಪ್ರಕಟಣೆಯ ಪ್ರಕಾರ, ಅದಾನಿ ಸಮೂಹ ವೆಲ್‌ಸ್ಪನ್ ಎಕ್ಸ್‌ಪ್ಲೋರೇಶನ್ ಲಿಮಿಟೆಡ್‌ನಲ್ಲಿ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಮೂಲಕ 65 ಪ್ರತಿಶತ ಷೇರುಗಳನ್ನು ಹೊಂದಿದೆ. ಗೌತಮ್ ಅದಾನಿ ಅಧ್ಯಕ್ಷ ಮತ್ತು ಅವರ ಮಗ ರಾಜೇಶ್ ಅದಾನಿ ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ವೆಲ್‌ಸ್ಪನ್ ಗ್ರೂಪ್ ಅದಾನಿ-ವೆಲ್‌ಸ್ಪನ್ ಎಕ್ಸ್‌ಪ್ಲೋರೇಶನ್ ಲಿಮಿಟೆಡ್‌ನಲ್ಲಿ ವೆಲ್‌ಸ್ಪನ್ ನ್ಯಾಚುರಲ್ ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್ ಮೂಲಕ 35 ಪ್ರತಿಶತ ಷೇರುಗಳನ್ನು ಹೊಂದಿದೆ. ಇದು ವೆಲ್‌ಸ್ಪನ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಾಗಿದೆ.

ಎರಡನೇ ಅಂಗಸಂಸ್ಥೆ, ವೆಲ್‌ಸ್ಪನ್ ಕಾರ್ಪ್‌ ಲಿಮಿಟೆಡ್. ರೂ 27 ಕೋಟಿ ಮೌಲ್ಯದ ಬಾಂಡ್‌ಗಳನ್ನು ಇದು ಖರೀದಿಸಿದೆ. ಮೇ 2019 ರಲ್ಲಿ ರೂ. 5 ಕೋಟಿ, ಜನವರಿ 2020ರಲ್ಲಿ ರೂ. 2 ಕೋಟಿ, ಅಕ್ಟೋಬರ್ 2020ರಲ್ಲಿ ರೂ. 7 ಕೋಟಿ, ಏಪ್ರಿಲ್ 2022ರಲ್ಲಿ ರೂ. 3 ಕೋಟಿ, ಮತ್ತು ನವೆಂಬರ್ 2022ರಲ್ಲಿ ರೂ. 10 ಕೋಟಿ ಮೌಲ್ಯದ ಬಾಂಡ್‌ಗಳನ್ನು ಈ ಕಂಪನಿ ಖರೀದಿ ಮಾಡಿದೆ.

ಮೂರನೇ ಅಂಗಸಂಸ್ಥೆ, ವೆಲ್‌ಸ್ಪನ್ ಲೀವಿಂಗ್ ಲಿಮಿಟೆಡ್. ನವೆಂಬರ್ 2022ರಲ್ಲಿ ರೂ. 10 ಕೋಟಿ ಮತ್ತು ನವೆಂಬರ್ 2023 ರಲ್ಲಿ ರೂ. 5 ಕೋಟಿ ಸೇರಿ ಒಟ್ಟು 15 ಕೋಟಿ ಮೌಲ್ಯದ ಬಾಂಡ್‌ಗಳನ್ನು ಈ ಕಂಪನಿ ಖರೀದಿಸಿದೆ.

ಒಟ್ಟಾರೆಯಾಗಿ, ವೆಲ್‌ಸ್ಪನ್‌ನ ಮೂರು ಅಂಗಸಂಸ್ಥೆಗಳು ರೂ 55 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿವೆ.

ಕಂಪನಿಯು ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಉತ್ತರ ಪ್ರದೇಶದ ರಾಜ್ಯ ಚುನಾವಣೆಗಳ ಸಮಯದಲ್ಲಿ, ಅಂದರೆ ನವೆಂಬರ್ 2022ರಲ್ಲಿ 30 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. 2019 ರ ಲೋಕಸಭೆ ಚುನಾವಣೆಯ ಸಮಯ ರೂ. 8 ಕೋಟಿ, 2020ರ ದೆಹಲಿ ವಿಧಾನಸಭಾ ಚುನಾವಣೆಯ ಸಮಯ ರೂ. 2 ಕೋಟಿ 2020ರ ಬಿಹಾರ ವಿಧಾನಸಭಾ ಚುನಾವಣೆಯ ಸಮಯ ರೂ. 7 ಕೋಟಿ, 2023ರ ನವೆಂಬರ್‌ನಲ್ಲಿ ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ನಡೆದ ಚುನಾವಣೆಗಳ ಸಂದರ್ಭದಲ್ಲಿ ರೂ. 5 ಕೋಟಿ ಮತ್ತು 2022ರ ಏಪ್ರಿಲ್‌ನಲ್ಲಿ ಯಾವುದೇ ಚುನಾವಣೆ ಇಲ್ಲದೆ ಸಮಯದಲ್ಲಿ ರೂ.3 ಕೋಟಿ ಮೌಲ್ಯದ ಬಾಂಡ್‌ಗಳನ್ನು ಕಂಪನಿಯು ಖರೀದಿಸಿದೆ.

ವೆಲ್‌ಸ್ಪನ್ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ವೆಲ್‌ಸ್ಪನ್ ಕಾರ್ಪ್ ಲಿಮಿಟೆಡ್ 2019ರ ಲೋಕಸಭೆ ಚುನಾವಣೆಯ ಸಂದರ್ಭ ಖರೀದಿಸಿದ ರೂ. 8 ಕೋಟಿ ಮೌಲ್ಯದ ಎಲ್ಲಾ ಚುನಾವಣಾ ಬಾಂಡ್‌ಗಳನ್ನು ಕಾಂಗ್ರೆಸ್ ನಗದೀಕರಣ ಮಾಡಿಕೊಂಡಿದೆ.

2023ರ ತೆಲಂಗಾಣ ವಿಧಾನಸಭಾ ಚುನಾವಣೆಯ ಮೊದಲು ವೆಲ್‌ಸ್ಪನ್ ಲಿವಿಂಗ್ ಲಿಮಿಟೆಡ್ ಖರೀದಿಸಿದ 5 ಕೋಟಿ ರೂ. ಮೌಲ್ಯದ ಬಾಂಡ್‌ ಅನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ನಗದೀಕರಣ ಮಾಡಿಕೊಂಡಿದೆ.

ಜನವರಿ 2020 ಮತ್ತು ನವೆಂಬರ್ 2022 ರ ನಡುವೆ ಖರೀದಿಸಿದ ರೂ. 42 ಕೋಟಿ ಮೌಲ್ಯದ ಉಳಿದ ಎಲ್ಲಾ ಬಾಂಡ್‌ಗಳನ್ನು ಬಿಜೆಪಿ ನಗದೀಕರಣ ಮಾಡಿಕೊಂಡಿದೆ.

ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಅದಾನಿ ಸಮೂಹದ ಜೊತೆ ಸಂಪರ್ಕ ಹೊಂದಿರುವ ನಾಲ್ಕನೇ ಕಂಪನಿ ಎಬಿಸಿ ಇಂಡಿಯಾ ಲಿಮಿಟೆಡ್. ಇದು ಕೋಲ್ಕತ್ತಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ರಸ್ತೆ ಲಾಜಿಸ್ಟಿಕ್ಸ್ ಸಂಸ್ಥೆಯಾಗಿದೆ. ಇದು 2019ರ ಏಪ್ರಿಲ್‌ನಲ್ಲಿ ರೂ. 40 ಲಕ್ಷ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. ಅವೆಲ್ಲವನ್ನು ಬಿಜೆಪಿ ನಗದೀಕರಣ ಮಾಡಿಕೊಂಡಿದೆ.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿರುವ ದಾಖಲೆಗಳ ಪ್ರಕಾರ, ಅದಾನಿ ಪ್ರಾಪರ್ಟೀಸ್ ಪ್ರೈವೆಟ್ ಲಿಮಿಟೆಡ್ ಎಬಿಸಿ ಇಂಡಿಯಾದಲ್ಲಿ ಮಾರ್ಚ್ 2016 ರಿಂದ ಸೆಪ್ಟೆಂಬರ್ 2023 ರವರೆಗೆ ಶೇ. 1.2 ಪಾಲು ಹೊಂದಿತ್ತು. ಅದಾನಿ ಪ್ರಾಪರ್ಟೀಸ್ ತನ್ನ ಪಾಲನ್ನು ಡಿಸೆಂಬರ್ 2023ರಲ್ಲಿ ಮಾರಾಟ ಮಾಡಿದೆ.

Source Courtesy : newslaundry

ಇದನ್ನೂ ಓದಿ : ದೆಹಲಿ ಅಬಕಾರಿ ನೀತಿ ಪ್ರಕರಣ: ನಿರ್ದೇಶಕ ಬಂಧನಕ್ಕೊಳಗಾದ ಬೆನ್ನಲ್ಲೇ ಬಿಜೆಪಿಯ ಚುನಾವಣಾ ಬಾಂಡ್‌ ಖರೀದಿಸಿತ್ತು ‘ಅರಬಿಂದೋ ಫಾರ್ಮಾ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...