Homeಮುಖಪುಟತಂಗಿ ಜೊತೆಗೆ ಸ್ನೇಹದಲ್ಲಿದ್ದಾನೆ ಎಂದು ಆರೋಪಿಸಿ ಸ್ನೇಹಿತನ ಹತ್ಯೆ ನಡೆಸಿದ ಗೆಳೆಯರು

ತಂಗಿ ಜೊತೆಗೆ ಸ್ನೇಹದಲ್ಲಿದ್ದಾನೆ ಎಂದು ಆರೋಪಿಸಿ ಸ್ನೇಹಿತನ ಹತ್ಯೆ ನಡೆಸಿದ ಗೆಳೆಯರು

- Advertisement -
- Advertisement -

ತಮ್ಮ ಸಹೋದರಿಯೊಂದಿಗೆ ಸ್ನೇಹದಲ್ಲಿದ್ದಾನೆ ಎಂದು ಆರೋಪಿಸಿ 19 ವರ್ಷದ ಯುವಕನನ್ನು ಆತನ ಇಬ್ಬರು ಸ್ನೇಹಿತರು ಸೇರಿ ಹತ್ಯೆ ನಡೆಸಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ ಎಂದು ದಿ ಸಿಯಾಸತ್‌ ಡೈಲಿ ವರದಿ ಮಾಡಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯು ರಾಜ್ಯದ ರೂಟು ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತ ಯುವಕನನ್ನು ಶಹಬಾಜ್ ಅನ್ಸಾರಿ ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನು ಓಂಪ್ರಕಾಶ್ ಮಹೊತೊ (25) ಮತ್ತು ಸುಶಾಂತ್ ನಾಯಕ್ (25) ಎಂದು ಗುರುತಿಸಲಾಗಿದೆ. ಕೊಲೆಗೂ ಮೊದಲು ಶಹಬಾಜ್‌ ಆರೋಪಿಗಳೊಂದಿಗೆ ಹೊರಗೆ ಹೋಗಿದ್ದರು ಎಂದು ವರದಿಯಾಗಿದೆ. ಅಲ್ಲಿ ಆರೋಪಿಗಳಿಬ್ಬರೂ ಶಹಬಾಜ್ ಅವರ ತಲೆಗೆ ಹೊಡೆದಿದ್ದು, ಪರಿಣಾಮವಾಗಿ ಸ್ಥಳದಲ್ಲೆ ನಿಧನರಾಗಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕೊಲೆಯ ಮರುದಿನ ಶಹಬಾಜ್‌‌ ಅವರ ತಂದೆ ಮಂಡರ್ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಪರಾಧವನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಓಂಪ್ರಕಾಶ್ ಮತ್ತು ಸುಶಾಂತ್‌ ಅವರನ್ನು ಸೆಪ್ಟೆಂಬರ್ 27 ರಂದು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 302 (ಕೊಲೆ), 34, 120 (ಬಿ) ಅಡಿಯಲ್ಲಿಎಫ್‌ಐಆರ್ ದಾಖಲಿಸಿದ್ದಾರೆ.

ಇದನ್ನೂ ಓದಿ: ಗರ್ಭಪಾತಕ್ಕೆ ವಿವಾಹಿತ ಮತ್ತು ಅವಿವಾಹಿತ ಮಹಿಳೆ ಎಂಬ ಬೇಧವಿರಬಾರದು: ಸುಪ್ರೀಂ

ಶಹಬಾಜ್ ಅವರು ತನ್ನ ಸಹೋದರಿ ಶಿಖಾಳೊಂದಿಗೆ ಸ್ನೇಹ ಬೆಳೆಸಿದ್ದು ಸುಶಾಂತ್‌‌ ನಾಯಕ್‌ಗೆ ಒಪ್ಪಿಗೆ ಇರಲಿಲ್ಲ ಎಂದು ಪ್ರಕರಣದ ತನಿಖಾಧಿಕಾರಿ ಸಬ್-ಇನ್ಸ್‌ಪೆಕ್ಟರ್ ಸನ್ನಿ ಡೇವಿಸ್ ಬಾರಾ ಅವರು ಹೇಳಿದ್ದಾರೆ ಎಂದು ಸಿಯಾಸತ್‌ ಡೈಲಿ ಹೇಳಿದ್ದಾರೆ.

ಇದನ್ನೂ ಓದಿ: ‘ರಾಹುಲ್ ಗಾಂಧಿಯನ್ನು ಸ್ವಾಗತಿಸುತ್ತೇನೆ’: ಭಾರತ್‌ ಜೋಡೋ ಯಾತ್ರೆಗೆ ಜೆಡಿಎಸ್‌ನ ಶಾಸಕನ ಬೆಂಬಲ

“ಸುಶಾಂತ್‌ ನಾಯಕ್‌‌ ಅವರ ಕುಟುಂಬ ಮತ್ತು ಶಹಬಾಜ್‌ ಅನ್ಸಾರಿ ಅವರ ತಾಯಿಯ ಅಜ್ಜಿ ನೆರೆಹೊರೆಯವರಾಗಿದ್ದರು. ಹೀಗಾಗಿ ಶಹಬಾಜ್‌ ಆಗಾಗ್ಗೆ ತನ್ನ ಅಜ್ಜಿಯನ್ನು ಭೇಟಿ ಮಾಡಲು ಅಲ್ಲಿಗೆ ಬರುತ್ತಿದ್ದರು. ಈ ವೇಳೆ ಅವರು ಶಿಖಾ ಅವರೊಂದಿಗೆ ಸ್ನೇಹ  ಬೆಳೆಸಿಕೊಂಡಿದ್ದರು” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

“ಶಿಖಾ ಮತ್ತು ಶಹಬಾಜ್ ಅವರ ಸ್ನೇಹ ಸುಶಾಂತ್‌‌ ನಾಯಕ್‌ಗೆ ಒಪ್ಪಿಗೆ ಇರಲಿಲ್ಲ. ಹಲವು ಸಂದರ್ಭದಲ್ಲಿ ಶಹಬಾಜ್‌ಗೆ ತನ್ನ ಸಹೋದರಿಯಿಂದ ದೂರವಿರಲು ಎಚ್ಚರಿಕೆ ನೀಡಿದ್ದನು” ಎಂದು ಸಬ್ ಇನ್ಸ್‌ಪೆಕ್ಟರ್ ಹೇಳಿದ್ದಾಗಿ ಸಿಯಾಸತ್‌.ಕಾಂ ವರದಿ ಹೇಳಿದೆ.

“ಆದರೆ ಅವರ ಎಚ್ಚರಿಕೆ ಕಡೆಗಣಿಸಿದ್ದರಿಂದ ಶಹಬಾಜ್ ಅವರನ್ನು ಕೊಲೆ ಮಾಡಲು ಸುಶಾಂತ್‌ ನಾಯಕ್‌‌ ಮತ್ತು ಓಂಪ್ರಕಾಶ್ ಮಹೊತೊ ಯೋಜನೆ ಹಾಕಿ, ತಮ್ಮೊಂದಿಗೆ ಯುವಕನನ್ನು ರೂಟು ಜಿಲ್ಲೆಗೆ ಕರೆದೊಯ್ದು ಕೊಲೆ ಮಾಡಿದ್ದಾರೆ” ಎಂದು ಸಬ್-ಇನ್ಸ್‌ಪೆಕ್ಟರ್ ಸನ್ನಿ ಡೇವಿಸ್ ಬಾರಾ ಹೇಳಿದ್ದಾರೆ.

ಇದನ್ನೂ ಓದಿ: ‘ನಾಳೆ ಕಾಂಡೋಂ ಕೂಡಾ ಕೇಳುತ್ತೀರಿ’: ಸ್ಯಾನಿಟರಿ ಪ್ಯಾಡ್‌ ಬಗ್ಗೆ ಪ್ರಶ್ನೆ ಕೇಳಿದ ವಿದ್ಯಾರ್ಥಿನಿಯನ್ನು ಅವಮಾನಿಸಿದ ಐಎಎಸ್‌ ಅಧಿಕಾರಿ

ಶಹಬಾಜ್ ಅನ್ಸಾರಿ ಅವರ ಕೈ, ಕಾಲುಗಳು, ಹಿಂಭಾಗ ಮತ್ತು ತಲೆಯ ಮೇಲೆ ಹಲವಾರು ತೀವ್ರವಾದ ಗಾಯಗಳು ಆಗಿವೆ. ಮಹೊತೊ ಮತ್ತು ಸುಶಾಂತ್‌ ನಾಯಕ್ ಪ್ರಸ್ತುತ ರಾಂಚಿ ಜೈಲಿನಲ್ಲಿದ್ದು, ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...