Homeಮುಖಪುಟಅತ್ಯಾಚಾರಕ್ಕೊಳಗಾದ ಬುಡಕಟ್ಟು ಯುವತಿಯ ಗರ್ಭಪಾತಕ್ಕೆ ಸರ್ಕಾರದ ಪ್ರತಿಕ್ರಿಯೆ ಕೋರಿದ ಹೈಕೋರ್ಟ್

ಅತ್ಯಾಚಾರಕ್ಕೊಳಗಾದ ಬುಡಕಟ್ಟು ಯುವತಿಯ ಗರ್ಭಪಾತಕ್ಕೆ ಸರ್ಕಾರದ ಪ್ರತಿಕ್ರಿಯೆ ಕೋರಿದ ಹೈಕೋರ್ಟ್

- Advertisement -
- Advertisement -

ಜಾರ್ಖಂಡ್‌‌ನಲ್ಲಿ ಅತ್ಯಾಚಾರ ಸಂತ್ರಸ್ತೆಯೊಬ್ಬರು ಗರ್ಭಪಾತಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಹೈಕೋರ್ಟ್ ರಾಜ್ಯ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ. ಅತ್ಯಾಚಾರ ಸಂತ್ರಸ್ತೆ 19 ವರ್ಷದವರಾಗಿದ್ದು 28 ವಾರಗಳ ಗರ್ಭಿಣಿಯಾಗಿದ್ದಾರೆ ಮತ್ತು ದೃಷ್ಟಿಹೀನರಾಗಿದ್ದಾರೆ ಎಂದು IANS ವರದಿ ಮಾಡಿದೆ.

ವಿಚಾರದ ಬಗ್ಗೆ ವೈದ್ಯಕೀಯ ಮಂಡಳಿ ರಚಿಸಿ ವರದಿ ಸಲ್ಲಿಸುವಂತೆ ರಾಂಚಿಯ ವೈದ್ಯಕೀಯ ಕಾಲೇಜು ರಿಮ್ಸ್‌ಗೆ ಸೆಪ್ಟೆಂಬರ್‌ 9ರಂದು ನ್ಯಾಯಾಲಯ ಸೂಚಿಸಿತ್ತು. ಅದನ್ನು ಅನುಸರಿಸಿ ಸುರಕ್ಷಿತ ಗರ್ಭಪಾತ ಸಾಧ್ಯವಿಲ್ಲ ಎಂದು RIMS ಮಂಡಳಿಯು ನ್ಯಾಯಾಲಯದ ಮುಂದೆ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದರ ನಂತರ ನ್ಯಾಯಾಲಯವು ಈ ವಿಷಯದ ಬಗ್ಗೆ ಏನು ಮಾಡಬಹುದು ಎಂಬುದನ್ನು ತಿಳಿಸಲು ರಿಮ್ಸ್ ಮತ್ತು ಸಂತ್ರಸ್ತೆಯ ವಕೀಲರೊಂದಿಗೆ ಚರ್ಚಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಪ್ರಕರಣವನ್ನು ನ್ಯಾಯಾಲಯವು ಬುಧವಾರ ಮತ್ತೆ ವಿಚಾರಣೆ ನಡೆಸಲಿದೆ.

ಬಾಲಕಿಯನ್ನು ರಾಮಗಢದಲ್ಲಿರುವ ಮಹಿಳಾ ಆಶ್ರಯಧಾಮದಲ್ಲಿ ಇರಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.

ಯುವತಿ ಬುಡಕಟ್ಟು ಸಮುದಾಯದವರಾಗಿದ್ದು, ರಾಂಚಿಯ ನಾಗ್ಡಿ ನಿವಾಸಿಯಾಗಿದ್ದಾರೆ. ಯುವತಿಯ ತಾಯಿ ಈ ಹಿಂದೆಯೆ ಮೃತಪಟ್ಟಿದ್ದು, ರಿಕ್ಷಾ ಚಾಲಕರಾಗಿರುವ ತನ್ನ ತಂದೆ ಕೆಲಸಕ್ಕೆ ಹೋಗಿದ್ದಾಗ ಅವರ ಮೇಲೆ ಪೈಶಾಚಿಕ ಕೃತ್ಯ ನಡೆದಿದೆ. ಯುವತಿ ಮನೆಯಲ್ಲಿ ಒಬ್ಬರೆ ಇದ್ದಾಗ ಅವರ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿದ್ದನು.

ಇದನ್ನೂ ಓದಿ: ಬುಡಕಟ್ಟು ಯುವತಿಗೆ ಚಿತ್ರಹಿಂಸೆ ನೀಡಿದ ಬಿಜೆಪಿ ನಾಯಕಿಯ ಬಂಧನ

2018ರಲ್ಲಿಯೂ ಯುವತಿ ಅಪ್ರಾಪ್ತರಾಗಿದ್ದಾಗ ಕೂಡ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಕೆಳ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಕುಟುಂಬವು ಬಡತನ ರೇಖೆಗಿಂತ ಕೆಳಗಿದ್ದು ತನ್ನ ಚಿಕಿತ್ಸೆಗೆ ಹಣವಿಲ್ಲದಿದ್ದರಿಂದ ಗರ್ಭಪಾತ ಮತ್ತು ಸರಿಯಾದ ಜೀವನ ವ್ಯವಸ್ಥೆಗಾಗಿ ಯುವತಿ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲು ನಿರ್ಧರಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...