Homeಮುಖಪುಟದೇವೇಗೌಡರನ್ನೇ ಹೊರಗಿಟ್ಟು ರಾಷ್ಟ್ರೀಯ ಸಮಾವೇಶ ನಡೆಸಿದ ಜೆಡಿಎಸ್ ನಾಯಕರು

ದೇವೇಗೌಡರನ್ನೇ ಹೊರಗಿಟ್ಟು ರಾಷ್ಟ್ರೀಯ ಸಮಾವೇಶ ನಡೆಸಿದ ಜೆಡಿಎಸ್ ನಾಯಕರು

- Advertisement -
- Advertisement -

ಡಿಸೆಂಬರ್ 9ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಮಹಾಧಿವೇಶನ ನಡೆಸಲು ಜೆಡಿಎಸ್ ನಾಯಕರು ತೀರ್ಮಾನಿಸಿದ್ದಾರೆ ಎಂದು deccanherald.com ವರದಿ ಮಾಡಿದೆ.

ಈ ಕುರಿತು ಸುದ್ದಿಗೋಷ್ಠಿ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ.ನನು, ”ಒಂದು ವೇಳೆ ಎನ್‌ಡಿಎ ಸೇರ್ಪಡೆಯಾಗುವ ತಮ್ಮನಿರ್ಧಾರವನ್ನು ದೇವೇಗೌಡರು ರದ್ದುಪಡಿಸದಿದ್ದರೆ, ಡಿಸೆಂಬರ್ 9ರಂದು ನಡೆಯಲಿರುವ ರಾಷ್ಟ್ರೀಯ ಮಹಾಧಿವೇಶನದಲ್ಲಿ ಅವರ ನಿರ್ಧಾರವನ್ನು ಔಪಚಾರಿಕವಾಗಿ ತಳ್ಳಿ ಹಾಕಲಾಗುವುದು. ಈ ಕುರಿತು ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ದೇವೇಗೌಡರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪಕ್ಷದ ಜಾತ್ಯತೀತ ಸಿದ್ಧಾಂತವನ್ನು ರಕ್ಷಿಸಬೇಕಾದ ಅಗತ್ಯವಿದೆ” ಎಂದು ಹೇಳಿದ್ದಾರೆ.

ಅಧಿವೇಶನಕ್ಕೂ ಮುನ್ನ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಳ್ಳುವಂತೆ ಆಗ್ರಹಿಸುವ ಪತ್ರವೊಂದನ್ನು ದೇವೇಗೌಡರಿಗೆ ಹಸ್ತಾಂತರಿಸಲಾಗುತ್ತದೆ. ಈ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಗೆ ಕರ್ನಾಟಕದಿಂದ ಸಿ.ಎಂ.ಇಬ್ರಾಹಿಂ ಸೇರಿದಂತೆ ಒಟ್ಟು 11 ರಾಜ್ಯಗಳ ರಾಜ್ಯಾಧ್ಯಕ್ಷರು ವೈಯಕ್ತಿಕವಾಗಿ ಉಪಸ್ಥಿತರಿದ್ದರು ಹಾಗೂ ನಾಲ್ಕು ಜನ ರಾಜ್ಯಾಧ್ಯಕ್ಷರು ಆನ್ ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಸಿ.ಕೆ.ನನು ತಿಳಿಸಿದ್ದಾರೆ.

ಈ ಸಭೆಯನ್ನು ತಿರುವನಂಪುರಂನಲ್ಲಿ ಆಯೋಜಿಸಲಾಗಿತ್ತು, ಇದನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಎಂದು
ಪರಿಗಣಿಸಲಾಗಿದೆ. ಈ ಸಭೆಯು ಕೇವಲ ದೇವೇಗೌಡರ ನಿರ್ಧಾರವನ್ನು ವಿರೋಧಿಸಲು ಸೇರಿದ್ದ ಸಭೆಯಾಗಿತ್ತು ಎಂದು ಸಿ.ಕೆ.ನನು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, ಕೇರಳದ ಜೆಡಿಎಸ್ ರಾಜ್ಯಾಧ್ಯಕ್ಷ ಮ್ಯಾಥ್ಯ ಟಿ. ಥಾಮಸ್ ಈ ಸಭೆಯಿಂದ ದೂರ ಉಳಿದರಲ್ಲದೆ, ತಮ್ಮ ರಾಜ್ಯದ ಪಕ್ಷದ ಪದಾಧಿಕಾರಿಗಳಿಗೂ ಈ ಸಭೆಗೆ ಹಾಜರಾಗದಂತೆ ಸೂಚಿಸಿದ್ದರು.

ಇದನ್ನೂ ಓದಿ: ವಿದ್ಯುತ್ ಕಳ್ಳತನ: ಕುಮಾರಸ್ವಾಮಿ ವಿರುದ್ಧ FIR ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...