Homeಮುಖಪುಟಬಾಲ್ಯವಿವಾಹ: ನಾಲ್ವರ ವಿರುದ್ಧ ಪ್ರಕರಣ ದಾಖಲು

ಬಾಲ್ಯವಿವಾಹ: ನಾಲ್ವರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಬಾಲ್ಯವಿವಾಹ ಆರೋಪದಡಿ ನಾಲ್ವರ ವಿರುದ್ಧ ಪುಣೆ ಚತುಶ್ರಿಂಗಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಚತುಶ್ರಿಂಗಿ ಪೊಲೀಸ್ ಠಾಣೆಯಲ್ಲಿ ಬಾಲ್ಯವಿವಾಹ ಆರೋಪದಡಿ ಸಂತ್ರಸ್ತ ಬಾಲಕಿಯ ಪತಿ, ಅತ್ತೆ, ತಂದೆ, ತಾಯಿ ವಿರುದ್ಧ ಪ್ರಕರಣ ದಾಖಲಾಗಿದೆ.

ವಿವಾಹದ ವೇಳೆ ಬಾಲಕಿಗೆ 17 ವರ್ಷ ವಯಸ್ಸಾಗಿತ್ತು. ಬಾಲಕಿ ಅಪ್ರಾಪ್ತಳೆಂದು ತಿಳಿದಿದ್ದರೂ ವಿವಾಹ ನಡೆಸಲಾಗಿತ್ತು. ಬಾಲಕಿ ಪ್ರಸ್ತುತ 9 ತಿಂಗಳ ಗರ್ಣಿಣಿಯಾಗಿದ್ದಾರೆ.

ಬಾಲಕಿ ಗರ್ಣಿಯಾದ ಹಿನ್ನೆಲೆ ಔಂಧ್ ಜಿಲ್ಲಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ತೆರಳಿದ್ದರು. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಬಾಲಕಿಯ ಕುರಿತು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಈ ಕುರಿತು ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಬಾಲ್ಯ ವಿವಾಹವು ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ನೆಲೆಯೂರಿರುವ ಸಾಮಾಜಿಕ ಸಮಸ್ಯೆಯಾಗಿದೆ. ಯುನಿಸೆಫ್‌ ಮಾಹಿತಿ ಪ್ರಕಾರ ಭಾರತದಲ್ಲಿ ಸುಮಾರು 27% ಬಾಲಕಿಯರಿಗೆ ವಿವಾಹ ನಡೆಸಲಾಗುತ್ತಿದೆ. ರಾಜಸ್ಥಾನ, ಬಿಹಾರದಂತಹ ರಾಜ್ಯಗಳಲ್ಲಿ 18ವರ್ಷಕ್ಕಿಂತ ಮೊದಲೇ ಹೆಚ್ಚು ಬಾಲಕಿಯರಿಗೆ ವಿವಾಹ ಮಾಡಿಸಿರುವುದು ಕಂಡು ಬಂದಿದೆ.

ಭಾರತದಲ್ಲಿ ಬಾಲ್ಯ ವಿವಾಹವು ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲೇ ಹೆಚ್ಚಳವಾಗಿದೆ. 29% ಬಾಲಕಿಯರ ವಿವಾಹವು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿದೆ. ಭಾರತದಲ್ಲಿ ಬಾಲ್ಯವಿವಾಹಕ್ಕೆ ಬಡತವೂ ಒಂದು ಕಾರಣವಾಗಿದೆ. ಮಕ್ಕಳನ್ನು ಪೋಷಣೆಯ ಹೊರೆಯಿಂದ ಪಾರು ಮಾಡಲು ಕೂಡ ಪೋಷಕರು ಇಂತಹ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.

2019–2020ರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5)  ಬಾಲ್ಯ ವಿವಾಹವು ಭಾರತದಲ್ಲಿ ಕಡಿಮೆಯಾಗಿದೆ ಎಂಬುವುದನ್ನು ಕಂಡುಹಿಡಿದಿದೆ. ಆದರೆ ಸಮೀಕ್ಷೆಯು ಸುಮಾರು 7.9% ಮಹಿಳೆಯರು 18 ವರ್ಷಕ್ಕೆ ಮುಂಚೆಯೇ ವಿವಾಹವಾಗುತ್ತಾರೆ ಎಂದು ಬಹಿರಂಗಪಡಿಸುತ್ತದೆ. ಸಮೀಕ್ಷೆಯು 13 ಭಾರತೀಯ ಮಹಿಳೆಯರಲ್ಲಿ ಒಬ್ಬರು ವಯಸ್ಸು ತುಂಬುವ ಮೊದಲು ಮದುವೆಯಾಗುತ್ತಾರೆ ಎಂದು ಸೂಚಿಸುತ್ತದೆ. ಭಾರತದಲ್ಲಿ ಬಾಲ್ಯ ವಿವಾಹದ ಪ್ರಮಾಣವು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಕೇರಳವು ಅತಿ ಕಡಿಮೆ 0.8% ಬಾಲ್ಯ ವಿವಾಹದ ಅನುಪಾತವನ್ನು ಹೊಂದಿದ್ದರೆ, ಬಿಹಾರವು ಅತಿ ಹೆಚ್ಚು 39.1% ಬಾಲ್ಯ ವಿವಾಹದ ಅನುಪಾತವನ್ನು ಹೊಂದಿದೆ.

ಇದನ್ನು ಓದಿ: ಮಣಿಪುರ: 3 ಜಿಲ್ಲೆಗಳಲ್ಲಿ ‘ಸ್ವಯಂ ಆಡಳಿತ’ ಘೋಷಿಸಿದ ಬುಡಕಟ್ಟು ಸಮುದಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read