Homeಕರ್ನಾಟಕಕಾವೇರಿಯ ಉಳಿವಿಗೆ ‘ಮೇಕೆದಾಟು ಅಣೆಕಟ್ಟು’ ಪ್ರಸ್ತಾಪ ಕೈಬಿಡಬೇಕು: ಮೇಧಾ ಪಾಟ್ಕರ್‌‌

ಕಾವೇರಿಯ ಉಳಿವಿಗೆ ‘ಮೇಕೆದಾಟು ಅಣೆಕಟ್ಟು’ ಪ್ರಸ್ತಾಪ ಕೈಬಿಡಬೇಕು: ಮೇಧಾ ಪಾಟ್ಕರ್‌‌

ಇದು ಪರಿಸರದ ಮೇಲಿನ ಯುದ್ಧವಾಗಿದ್ದು, ಮೂರು ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆ ಪರವಾಗಿ ನಿಂತು ಗುತ್ತಿಗೆಗಾರರ ಸ್ವಾರ್ಥಕ್ಕಾಗಿ ಇದನ್ನು ಮಾಡುತ್ತಿದ್ದಾರೆ ಎಂದು ನಟ ಚೇತನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -
- Advertisement -

‘‘ನಾವು ಯಾವುದನ್ನೂ ವಿರೋಧ ಮಾಡಲು ಇಲ್ಲಿ ಬಂದಿಲ್ಲ, ನಾವು ಬಂದಿದ್ದು ಕಾವೇರಿಯನ್ನು ಉಳಿಸಲು ಬೇಕಾಗಿ’’ ಎಂದು ಎಂದು ನರ್ಮದಾ ಬಚಾವ್ ಆಂದೋಲನದ ನಾಯಕಿ ಮೇಧಾ ಪಾಟ್ಕರ್‌ ಬೆಂಗಳೂರಿನಲ್ಲಿ ಶುಕ್ರವಾರ ಹೇಳಿದ್ದಾರೆ.

ಅವರು ರಾಜ್ಯದಲ್ಲಿ ಬಹುಚರ್ಚಿತ ವಿಷಯವಾಗಿರುವ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಆಗ್ರಹಿಸಿ ‘ಕರ್ನಾಟಕ ನೆಲ ಜಲ ರಕ್ಷಣಾ ಸಮಿತಿ’ ಆಯೋಜಿಸಿದ್ದ ಸಂವಾದ ಮತ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಇದನ್ನೂ ಓದಿ:ಜನರ ಹಿತದೃಷ್ಟಿಯಿಂದ ಮೇಕೆದಾಟು ಪಾದಯಾತ್ರೆ ತಾತ್ಕಾಲಿಕ ಸ್ಥಗಿತ: ಸಿದ್ದರಾಮಯ್ಯ

“ಮೇಕೆದಾಟು ಪರಿಸರವನ್ನು ಹಾಗೆ ಉಳಿಸಿಕೊಳ್ಳಬೇಕು, ಮೇಕೆದಾಟು ಅಣೆಕಟ್ಟು ನಿರ್ಮಿಸಿದರೆ 1,200 ಹೆಕ್ಟೇರ್‌‌ ಅರಣ್ಯ ಭೂಮಿಯೊಂದಿಗೆ ಆ ಭಾಗದಲ್ಲಿ ವಾಸಿಸುವ ಪ್ರಾಣಿ ಸಂಕುಲವೂ ನಾಶವಾಗಲಿದೆ. ಕಾಡು ನಾಶವಾದರೆ ಸಾವಿರಾರು ಜನರ ಬದುಕಿಗೆ ಗಂಡಾಂತರ ಒದಗಲಿದೆ. ಪರಿಸರದ ಮೇಲೆಯೂ ಇವೆಲ್ಲವೂ ಪರಿಣಾಮ ಬೀರಲಿದೆ. ಅಣೆಕಟ್ಟು ಕಟ್ಟುವ ಬದಲು ಕೆರೆ, ಕುಂಟೆಗಳನ್ನು ಸಂರಕ್ಷಿಸಿ, ಜೀವಜಲ ಉಳಿಸಿಕೊಳ್ಳಬೇಕು” ಎಂದು ಮೇಧಾ ಪಾಟ್ಕರ್‌ ಹೇಳಿದ್ದಾರೆ.

“ಅಣೆಕಟ್ಟು ಕಟ್ಟುವುದರಿಂದ ಕೆಲ ರಾಜಕಾರಿಣಿಗಳಿಗೆ, ಗುತ್ತಿಗೆದಾರರಿಗೆ ಅನುಕೂಲವಾಗುತ್ತದೆ. ಜನರಿಗೆ ಇದರಿಂದ ಯಾವ ಅನುಕೂಲವೂ ಇಲ್ಲ. ಉತ್ತಮ ಪರಿಸರ ಉಳಿದರೆ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ” ಎಂದು ಮೇಧಾ ಪಾಟ್ಕರ್‌ ಪ್ರತಿಪಾದಿಸಿದ್ದಾರೆ.

ಚಿತ್ರ ನಟ ಚೇತನ್‌ ಅಹಿಂಸಾ ಮಾತನಾಡಿ, “ಇದು ಪರಿಸರದ ಮೇಲಿನ ಯುದ್ಧ. ಬಿಜೆಪಿ, ಕಾಂಗ್ರೆಸ್​, ಜೆಡಿಎಸ್ ಸೇರಿದಂತೆ ಮೂರು ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆ ಪರವಾಗಿ ನಿಂತಿವೆ. ಇವೆಲ್ಲಾ ಕೇವಲ ಗುತ್ತಿಗೆಗಾರರ ಸ್ವಾರ್ಥಕ್ಕಾಗಿ ಮಾಡುತ್ತಿದ್ದಾರೆ. ಮೇಕೆದಾಟು ಸುತ್ತಮುತ್ತ ಇರುವವರನ್ನು ಒಕ್ಕಲೆಬ್ಬಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಈಗ ರಾಜಕಾರಣಿಗಳೆ ಗುತ್ತಿರಗೆದಾರರು, ಗುತ್ತಿಗೆದಾರರೆ ರಾಜಕಾರಣಿಗಳಾಗಿದ್ದಾರೆ’’ ಎಂದು ಚೇತನ್​ ಆರೋಪಿಸಿದ್ದಾರೆ.

ಇದನ್ನೂ ಓದಿ:ಮೇಕೆದಾಟು ಪಾದಯಾತ್ರೆ: ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ತರಾಟೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಅಭಿವೃದ್ಧಿಗೆ ಮಾರಕರಾದವರೆಲ್ಲಾ ಒಂದು ಕಡೆ ಸೇರಿರುವುದೇ ಒಂದು ದುರಂತ ,ಅಭಿವೃದ್ಧಿಯ ಮಾರಕರು ಇವರೆಲ್ಲ ಚೀನಿ ಏಜೆಂಟರು

  2. ಚೇತನ್ ಸರ್ ರವರ ಹೋರಾಟ ನಿಜವಾಗಲು ಸಫಲ ಅಗುತ್ತೆ ಎಂಬ ಭರವಸೆ ನಮಗಿದೆ ಯಾಕೆಂದರೆ ಅನ್ಯಾಯದ ವಿರೋಧ ಹೋರಾಟ ಮಾಡುತ್ತಿದಾರೆ

LEAVE A REPLY

Please enter your comment!
Please enter your name here

- Advertisment -

Must Read

ಫಡ್ನವೀಸ್‌ಗೆ ದಕ್ಕದ ಸಿಎಂ ಪಟ್ಟ: ಬಿಜೆಪಿ ಹೈಕಮಾಂಡ್ ಎದುರು ಮಂಡಿಯೂರಿದ್ದೇಕೆ?

0
ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳು ಅಚ್ಚರಿಯ ಬದಲಾವಣೆಗಳಿಗೆ ಕಾರಣವಾಗಿವೆ. ಮಹಾರಾಷ್ಟ್ರದ ಆಪರೇಷನ್ ಕಮಲದ ರೂವಾರಿ ಎಂದು ಬಿಂಬಿಸಿಕೊಳ್ಳುತ್ತಿದ್ದ ಮಾಜಿ ಸಿಎಂ, ಹಾಲಿ ಡಿಸಿಎಂ ದೇವೇಂದ್ರ ಫಡ್ನವೀಸ್ ಏಕಾಏಕಿ ಮೂಲೆಗೆ ತಳ್ಳಲ್ಪಟ್ಟರು. ಗುರವಾರದ ಬೆಳಿಗ್ಗೆಯವರೆಗೂ ತಾನೇ...