Homeಮುಖಪುಟಆ ಕ್ರಾಂತಿಯ ಹೆಸರು ರಾಹುಲ್ ಗಾಂಧಿ: ಜೈಲಿನಿಂದ ಬಿಡುಗಡೆ ಬಳಿಕ ನವಜೋತ್ ಸಿಂಗ್ ಸಿಧು ಹೇಳಿಕೆ

ಆ ಕ್ರಾಂತಿಯ ಹೆಸರು ರಾಹುಲ್ ಗಾಂಧಿ: ಜೈಲಿನಿಂದ ಬಿಡುಗಡೆ ಬಳಿಕ ನವಜೋತ್ ಸಿಂಗ್ ಸಿಧು ಹೇಳಿಕೆ

- Advertisement -
- Advertisement -

“ದೇಶದಲ್ಲಿ ಸರ್ವಾಧಿಕಾರ ಬಂದಾಗಲೆಲ್ಲ ಕ್ರಾಂತಿಯೊಂದು ನಡೆಯುತ್ತಿತ್ತು. ಆ ಕ್ರಾಂತಿಯ ಹೆಸರು ರಾಹುಲ್ ಗಾಂಧಿ ಎಂದು ಇಂದು ನಾನು ಎದೆ ಬಡಿದು ಹೇಳಬಲ್ಲೆ. ರಾಹುಲ್ ಗಾಂಧಿ ಸರ್ಕಾರವನ್ನು ಅದರ ಬೇರುಗಳಿಂದಲೇ ಅಲ್ಲಾಡಿಸಲಿದ್ದಾರೆ” ಎಂದು ಜೈಲಿನಿಂದ ಬಿಡುಗಡೆ ಬಳಿಕ ಪಂಜಾಬ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

1988ರ ರೋಡ್ ರೇಜ್ ಪ್ರಕರಣದಲ್ಲಿ 10 ತಿಂಗಳ ಸೆರೆವಾಸದ ನಂತರ ಇಂದು ಪಟಿಯಾಲ ಜೈಲಿನಿಂದ ಬಿಡುಗಡೆಯಾದ ಅವರು,  “ಪಂಜಾಬ್‌ನಲ್ಲಿ ಬಿಜೆಪಿ ಹಿಂಸಾಚಾರವನ್ನು ಪ್ರಚೋದಿಸುತ್ತಿದೆ. ಸದ್ಯಕ್ಕೆ ಪ್ರಜಾಪ್ರಭುತ್ವ ಎಂಬುದೇ ಇಲ್ಲ. ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ತರಲು ಪಿತೂರಿ ನಡೆಸಲಾಗುತ್ತಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ. ಪಂಜಾಬ್ ಅನ್ನು ದುರ್ಬಲಗೊಳಿಸಲು ನೀವು ಪ್ರಯತ್ನಿಸಿದರೆ ನೀವು ದುರ್ಬಲರಾಗುತ್ತೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಇವತ್ತು ಏನಾಯ್ತು ನೋಡಿ. ಮಧ್ಯಾಹ್ನದ ಸುಮಾರಿಗೆ ನನ್ನನ್ನು ಬಿಡುಗಡೆ ಮಾಡಬೇಕಿತ್ತು, ಆದರೆ ಕಾಂಗ್ರೆಸ್ ಬೆಂಬಲಿಗರು, ಮಾಧ್ಯಮದವರು ಹೊರಡುತ್ತಾರೆ ಎಂದು ಕಾಯುತ್ತಿದ್ದ ಕಾರಣ ಅವರು ಅದನ್ನು ವಿಳಂಬ ಮಾಡಿದರು. ಪಂಜಾಬ್‌ಗೆ ಹಾನಿ ಮಾಡಲು ಸಂಘಟಿತ ಪ್ರಯತ್ನ ನಡೆಯುತ್ತಿದೆ” ಎಂದು ಸಿಧು ಹೇಳಿದರು.

“ಪಂಜಾಬ್ ಈ ದೇಶದ ಗುರಾಣಿ, ಆದರೆ ಅವರು ಈ ಗುರಾಣಿಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಬಳಿ ಬಹುಮತವಿದೆ ಆದರೆ ಪ್ರಜಾಪ್ರಭುತ್ವವಿಲ್ಲ. ಅವರ ಪಿತೂರಿಯಿಂದ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ” ಎಂದರು.

ಎಲ್ಲಾ ಏಜೆನ್ಸಿಗಳು ಗುಲಾಮರಾಗಿದ್ದು, ರಬ್ಬರ್ ಸ್ಟ್ಯಾಂಪ್‌ಗಳಾಗಿ ಮಾರ್ಪಟ್ಟಿವೆ. ಅವು ಕೇವಲ 4-6 ಜನರ ಮಾತುಗಳನ್ನು ಕೇಳುತ್ತವೆ. ನಾನು ಸಾವಿಗೆ ಹೆದರುವುದಿಲ್ಲ ಏಕೆಂದರೆ ನಾನು ಹೋರಾಡುತ್ತಿರುವುದು ನನ್ನ ಕುಟುಂಬಕ್ಕಾಗಿ ಅಲ್ಲ, ಆದರೆ ಪಂಜಾಬ್‌ನ ಮುಂದಿನ ಪೀಳಿಗೆಗಾಗಿ ಎಂದು ಸಿಧು ಹೇಳಿದರು.

“ಐಪಿಸಿ 323ರ ಅಡಿಯಲ್ಲಿ ಒಂದು ವಾರವೂ ಯಾರೂ ಜೈಲಿನಲ್ಲಿ ಇರಲಿಲ್ಲ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಆದರೆ ಸಿಧು ಏಕೆ ಜೈಲಿಗೆ ಹೋದರು? ಏಕೆಂದರೆ ನನ್ನ ಹಿಂದಿನವರು ಸಂವಿಧಾನವನ್ನು ಬರೆದಿದ್ದಾರೆ ಮತ್ತು ನಾನು ಅದನ್ನು ಗೌರವಿಸುತ್ತೇನೆ” ಎಂದು ಸಿಧು ಹೇಳಿದರು.

ಇದನ್ನೂ ಓದಿ: ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...