Homeಮುಖಪುಟನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭ ಬಹಿಷ್ಕರಿಸಿದ ವಿರೋಧ ಪಕ್ಷಗಳು

ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭ ಬಹಿಷ್ಕರಿಸಿದ ವಿರೋಧ ಪಕ್ಷಗಳು

- Advertisement -
- Advertisement -

ಮೇ 28 ರಂದು ನಡೆಯಲಿರುವ ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ತಮಿಳುನಾಡಿನ ಆಡಳಿತರೂಢ ಡಿಎಂಕೆ, ಬಿಹಾರದ ಆಡಳಿತ ಪಕ್ಷ ಆರ್‌ಜೆಡಿ, ತೆಲಂಗಾಣದ ಆಡಳಿತ ಪಕ್ಷ ಭಾರತ್ ರಾಷ್ಟ್ರೀಯ ಸಮಿತಿ, ಮಹಾರಾಷ್ಟ್ರದ ಶಿವಸೇನಾ ಉದ್ಧವ್ ಬಾಳಾ ಸಾಹೇಬ್ ಠಾಕ್ರೆ, ಎನ್‌ಸಿಪಿ, ವಿಸಿಕೆ ಪಕ್ಷಗಳು ಬಹಿಷ್ಕರಿಸಲು ನಿರ್ಧರಿಸಿವೆ ಎಂದು ದಿ ಹಿಂದೂ ಮಂಗಳವಾರ ವರದಿ ಮಾಡಿದೆ.

ಕಾಂಗ್ರೆಸ್ ಕೂಡ ಕಾರ್ಯಕ್ರಮವನ್ನು ಬಹಿಷ್ಕರಿಸುವ ಚಿಂತನೆಯಲ್ಲಿದೆ ಮತ್ತು ವಿರೋಧ ಪಕ್ಷಗಳು ಈ ವಿಷಯದ ಬಗ್ಗೆ ಜಂಟಿ ಹೇಳಿಕೆಯನ್ನು ನೀಡಬಹುದು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದೆ ಕೇಂದ್ರವು ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು “ನಾಮಕಾವಸ್ತೆ”ಗೆ ಇಳಿಸಿದೆ ಎಂದು ಹೇಳುವ ಮೂಲಕ ಕಟ್ಟಡವನ್ನು ಉದ್ಘಾಟಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿದೆ. ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರ್ಕರ್ ಅವರ ಜನ್ಮದಿನದಂದು ಉದ್ಘಾಟನಾ ಸಮಾರಂಭವನ್ನು ನಡೆಸುವುದು ಸರಿಯಲ್ಲ ಎಂದು ವಿರೋಧ ಪಕ್ಷಗಳು ಟೀಕಿಸಿವೆ.

ಹಲವಾರು ವಿರೋಧ ಪಕ್ಷಗಳು ಡಿಸೆಂಬರ್ 2020 ರಲ್ಲಿ ಹೊಸ ಸಂಸತ್ತಿನ ಕಟ್ಟಡದ ಶಂಕುಸ್ಥಾಪನೆ ಸಮಾರಂಭವನ್ನು ಸಹ ಬಿಟ್ಟುಬಿಟ್ಟಿದ್ದವು.

ಈ ಉದ್ಘಾಟನಾ ಸಮಾರಂಭವನ್ನು ನಾವು ಬಹಿಷ್ಕರಿಸುತ್ತೇವೆ ಎಂದು ಡಿಎಂಕೆ ಸಂಸದ ತಿರುಚಿ ಶಿವ ಸುದ್ದಿ ಸಂಸ್ಥೆ ಎಎನ್‌ಐಗೆ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸರ್ಕಾರ ಹೊಸ ಸಂಸತ್ ಭವನವನ್ನು ನಾಮಕಾವಸ್ತೆಗೆ ನಿರ್ಮಿಸಿದೆ: ಮಲ್ಲಿಕಾರ್ಜುನ ಖರ್ಗೆ

ಆರ್‌ಜೆಡಿ ಬಹಿಷ್ಕಾರ

”ರಾಷ್ಟ್ರಪತಿಗಳು ಸಂಸತ್‌ನ ಮುಖ್ಯಸ್ಥರು. ಅವರು ಸಂಸತ್ ಭವನವನ್ನು ಉದ್ಘಾಟನೆ ಮಾಡಬೇಕಿತ್ತು. ಆದರೆ ರಾಷ್ಟ್ರಪತಿಗಳಿಂದ ಉದ್ಘಾಟನೆ ಮಾಡಿಸದೆ, ಅವರಿಗೆ ಅವಮಾನ ಮಾಡಲಾಗುತ್ತಿದೆ. ಹೀಗಾಗಿ ಮೊದಲ ಅಧಿವೇಶನವನ್ನು ಎಲ್ಲಾ ವಿಪಕ್ಷಗಳು ಸೇರಿ ಬಹಿಷ್ಕಾರ ಮಾಡುತ್ತೇವೆ’ ಎಂದು ಬಿಹಾರದ ಉಪಮುಖ್ಯಮಂತ್ರಿಯೂ ಆಗಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಹೇಳಿದ್ದಾರೆ.

ಟಿಎಂಸಿ ವಿರೋಧ

ಮಂಗಳವಾರ, ತೃಣಮೂಲ ರಾಜ್ಯಸಭಾ ನಾಯಕ ಡೆರೆಕ್ ಒ’ಬ್ರಿಯಾನ್ ಅವರು, ಈ ಸಮಾರಂಭವನ್ನು ಭಹಿಷ್ಕರಿಸುವ ತಮ್ಮ ಪಕ್ಷದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

”ಸಂಸತ್ತು ಕೇವಲ ಹೊಸ ಕಟ್ಟಡವಲ್ಲ, ಇದು ಹಳೆಯ ಸಂಪ್ರದಾಯಗಳು, ಮೌಲ್ಯಗಳು, ಪೂರ್ವನಿದರ್ಶನಗಳು ಮತ್ತು ನಿಯಮಗಳೊಂದಿಗೆ ಸ್ಥಾಪನೆಯಾಗಿದೆ – ಇದು ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಪ್ರಧಾನಿ ಮೋದಿಗೆ ಅದು ಅರ್ಥವಾಗುವುದಿಲ್ಲ.” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಎಎಪಿ ವಿರೋಧ

ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರು, ”ರಾಷ್ಟ್ರಪತಿಯನ್ನು ಸಮಾರಂಭಕ್ಕೆ ಆಹ್ವಾನಿಸದಿರುವುದು “ಅವರಿಗೆ ಮಾಡಿದ ಘೋರ ಅವಮಾನ” ಮತ್ತು “ದಲಿತ ಬುಡಕಟ್ಟು ಮತ್ತು ಭಾರತದ ವಂಚಿತ ಸಮಾಜ” ಎಂದು ಹೇಳಿದರು.

ಕಮ್ಯುನಿಸ್ಟ್ ಪಕ್ಷ ವಿರೋಧ

ಭಾರತೀಯ ಕಮ್ಯುನಿಸ್ಟ್ ಪಕ್ಷದ ಶಾಸಕ ಬಿನೋಯ್ ವಿಶ್ವಂ ಮಾತನಾಡಿ, ”ವಿಡಿ ಸಾವರ್ಕರ್ ಅವರ ಸ್ಮರಣೆಯೊಂದಿಗೆ ಸಂಸತ್ತು ಉದ್ಘಾಟನೆ ಮಾಡುತ್ತಿರುವುದು ಸರಿಯಲ್ಲ. ಅವರಿಗೂ ಸಂಸತ್ತಿಗೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ. ನಾವು ಖಂಡಿತವಾಗಿಯೂ ಅದರ ಭಾಗವಾಗಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

”ಸಮಾರಂಭವನ್ನು ಬಹಿಷ್ಕರಿಸಲು ವಿರೋಧ ಪಕ್ಷಗಳಲ್ಲಿ “ಅಗಾಧ ಒಮ್ಮತ”ವಿದೆ” ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

”ರಾಷ್ಟ್ರಪತಿಗಳು ದೇಶದ ಮುಖ್ಯಸ್ಥರು ಎಂಬ ಅಂಶವನ್ನು ಸರ್ಕಾರ ಗುರುತಿಸಬೇಕು, ಪ್ರಧಾನಿ ಸರ್ಕಾರದ ಮುಖ್ಯಸ್ಥರು” ಎಂದು ಅವರು ಹೇಳಿದರು.

”ಸಂಸತ್ ಭವನ ಉದ್ಘಾಟನೆಗೆ ಮುರ್ಮು ಅವರನ್ನು ಆಹ್ವಾನಿಸದಿರುವ ಸರ್ಕಾರದ ನಿರ್ಧಾರವನ್ನು ಒಪ್ಪಲಾಗದು” ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.

ಶಿವಸೇನಾ ಉದ್ಧವ್‌ ಬಾಳಾ ಸಾಹೇಬ್ ಠಾಕ್ರೆ ಪಕ್ಷ ವಿರೋಧ

”ಎಲ್ಲಾ ವಿರೋಧ ಪಕ್ಷಗಳು ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವುದಾಗಿ ಹೇಳಿವೆ. ನಾವೂ ಕೂಡ ಬಹಿಷ್ಕರಿಸುತ್ತೇವೆ” ಎಂದು ಶಿವಸೇನಾ ಉದ್ಧವ್‌ ಬಾಳಾ ಸಾಹೇಬ್ ಠಾಕ್ರೆ ಪಕ್ಷದ ಸಂಜಯ್‌ ರಾವುತ್ ಹೇಳಿದ್ದಾರೆ.

”ದೇಶದ ಅರ್ಥಿಕ ಪರಿಸ್ಥಿತಿ ಬಿಗಾಡಾಯಿಸಿರುವಾಗ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸೆಂಟ್ರಲ್ ವಿಸ್ತಾ ನಿರ್ಮಾಣ ಮಾಡಿದ್ದರ ಬಗ್ಗೆ ಮೊದಲು ನಾವೇ ಪ್ರಶ್ನೆ ಎತ್ತಿದ್ದೆವು. ಈ ಯೋಜನೆಯನ್ನು ಪ್ರಧಾನಮಂತ್ರಿಯವ ಇಚ್ಛೆಗಾಗಿ ಮಾಡಲಾಗಿದೆ. ಇದರ ಅಗತ್ಯ ಇತ್ತೇ? ಹಳೆಯ ಸಂಸತ್ ಭವನ ಇನ್ನೂ ನೂರು ವರ್ಷಕ್ಕೆ ಸಾಲುತ್ತಿತ್ತು. ಹಳೆಯ ಸಂಸತ್‌ ಭವನಕ್ಕೆ ಆರೆಸ್ಸೆಸ್ ಹಾಗೂ ಬಿಜೆಪಿಗೆ ಸಂಬಂಧ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದ್ದಾರೆ ಎನ್ನುವ ಫಲಕ ಹಾಕಲು ಹೊಸ ಭವನವನ್ನು ನಿರ್ಮಾಣ ಮಾಡಲಾಗಿದೆ” ಎಂದು ಸಂಜಯ್ ರಾವುತ್ ಕಿಡಿಕಾರಿದ್ದಾರೆ.

ಪ್ರಧಾನಿಯವರು ಡಿಸೆಂಬರ್ 10, 2020 ರಂದು ಹೊಸ ಸಂಸತ್ತಿನ ಕಟ್ಟಡದ ಶಂಕುಸ್ಥಾಪನೆ ಮಾಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನ್ಯೂಸ್‌ಕ್ಲಿಕ್ ಸಂಪಾದಕರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ಪೊಲೀಸ್; ‘ಅನಾವಶ್ಯಕ ಆತುರ’ ಏಕೆ ಎಂದ ಸುಪ್ರೀಂ...

0
ಬಂಧಿತ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಸಂಪಾದಕ ಪ್ರಬೀರ್ ಪುರ್ಕಾಯಸ್ಥನನ್ನು ತನ್ನ ವಕೀಲರಿಗೂ ತಿಳಿಸದೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿರುವ "ಅನಾವಶ್ಯಕ ಆತುರ"ವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. "ನೀವು ಅವರ ವಕೀಲರು ಅಥವಾ ಕಾನೂನು ತಂಡಕ್ಕೆ ಏಕೆ ತಿಳಿಸಲಿಲ್ಲ?...