Homeಕರ್ನಾಟಕಮೀಡಿಯಾಗಳು 'ಆಪರೇಷನ್ ಕಮಲ' ಎಂದು ಹೇಳುವ ಬದಲು ದೋಸ್ತಿ ಖತಮ್ ಎಂದೇಕೇ ಹೇಳುತ್ತಿವೆ?

ಮೀಡಿಯಾಗಳು ‘ಆಪರೇಷನ್ ಕಮಲ’ ಎಂದು ಹೇಳುವ ಬದಲು ದೋಸ್ತಿ ಖತಮ್ ಎಂದೇಕೇ ಹೇಳುತ್ತಿವೆ?

- Advertisement -
- Advertisement -

ಆಸೆಗೆ, ಅಹಂಗೆ ಮಾರಿಕೊಂಡವರ ನೆಪಗಳು!

ಕರ್ನಾಟಕದ ಸದ್ಯದ ಬೆಳವಣಿಗೆಗಳಿಗೆ ಯಾರು ಕಾರಣ ಎಂಬ ಚರ್ಚೆ ನಡೆಯುತ್ತಿದೆ. ಶಾಸಕರು ಅಸಮಾಧಾನಗೊಂಡು ಮುಂಬೈ ತಲುಪಿದ್ದಾರೆ. ಅವರ ಕೆಲ ಮಾತುಗಳನ್ನು ಆಧಾರವಾಗಿಟ್ಟುಕೊಂಡು ರಾಜಕೀಯ ವಿಶ್ಲೇಷಕರು ಈ ಎಲ್ಲಾ ಘಟನೆಗಳ ಹಿಂದೆ ಯಾರು ಇರಬಹುದು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ.

ಘಟನೆಗಳಿಗೆ, ಟಿವಿ ಚರ್ಚೆ, ಪತ್ರಿಕಾ ವರದಿಗಳಲ್ಲಿ ಪ್ರಮುಖವಾಗಿ ಕಾಣುವವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಮನ್ವಯ ಸಮಿತಿ ಮುಖ್ಯಸ್ಥರಾಗಿ ಅವರು ವಿಫಲರಾಗಿದ್ದಾರೆ. ತಮ್ಮದೇ ಬೆಂಬಲಿಗರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲಾಗಲಿಲ್ಲ. ಮೇಲಾಗಿ ಅವರದೇ ಬೆಂಬಲಿಗರು ಮುಂಬೈ ಹೋಗಿರುವ ಕಾರಣ ಇಡೀ ಪ್ರಕರಣ ಹಿಂದೆ ಅವರ ಪಾತ್ರವೂ ದೊಡ್ಡದಿರಬಹುದು ಎಂಬ ಮಾತುಗಳಿವೆ.
ಹಾಗೆ ಮಾತನಾಡುವಾಗ ಕೆಲ ಶಾಸಕರನ್ನು ನೇರವಾಗಿ ಸಿದ್ದು ಶಿಷ್ಯರೆಂದು, ಅವರು ಹೇಳಿದರೆ ಖಂಡಿತಾ ಹಿಂತಿರುಗುತ್ತಾರೆ. ಅವರು ಮನಸ್ಸು ಮಾಡುತ್ತಿಲ್ಲ‌. ಮೇಲಾಗಿ ಸಿದ್ದರಾಮಯ್ಯನಿಗೂ ಸರಕಾರ ಉಳಿದು ಆಗಬೇಕಾದ್ದು ಏನೂ ಇಲ್ಲ – ಎಂಬೆಲ್ಲಾ ಮಾತುಗಳಿವೆ‌.

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬಿಕ್ಕಟ್ಟನ್ನು ಬಿಡಿಸಲು ಎಷ್ಟೇ ಪ್ರಯತ್ನಪಟ್ಟವರಂತೆ ಕಂಡರೂ ಅವರ ಬಗ್ಗೆ ಅನುಮಾನಗಳು ಇದ್ದೇ ಇವೆ. ಜೆಡಿಎಸ್ ಪಕ್ಷದ ಬೆಂಬಲಿಗರು ಅವರನ್ನೇ ವಿಲನ್ ಎಂಬಂತೆ ನೋಡುತ್ತಿದ್ದಾರೆ. ಟಿವಿ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಒಬ್ಬ ಪತ್ರಕರ್ತರಂತೂ ಇಡೀ ಸಿನಿಮಾಕ್ಕೆ ಸಿದ್ದರಾಮಯ್ಯನವರದೇ ಚಿತ್ರಕತೆ, ನಿರ್ದೇಶನ ಎಂದು ಪದೇ ಪದೇ ಹೇಳುತ್ತಿದ್ದಾರೆ.

ಅದೇ ಹೊತ್ತಲ್ಲಿ ಶಾಸಕರ ಅತೃಪ್ತಿಗೆ ಕಾರಣವಾಗಿ ಹೊಮ್ಮಿರುವ ಇನ್ನೊಬ್ಬ ಇನ್ನೊಬ್ಬರು ಲೋಕೋಪಯೋಗಿ ಸಚಿವರಾದ ಹೆಚ್. ಡಿ. ರೇವಣ್ಣ. ಬೆಂಗಳೂರಿನ ಶಾಸಕರು ಮುಂಬೈ ವಿಮಾನ ಹತ್ತುವ ಮುನ್ನ, ಎಲ್ಲಾ ಇಲಾಖೆಗಳಿಗೆ ಮೂಗು ತೂರಿಸುವ ರೇವಣ್ಣನೇ  ಅಸಮಾಧಾನಕ್ಕೆ ಕಾರಣ ಎಂದು ಆರೋಪಿಸಿ ಹೊರಟಿದ್ದಾರೆ. ಹೀಗೆ ಆರೋಪ ಮಾಡುವವರಿಗೆ ಅವರದೇ ಆದ ಕಾರಣಗಳಿರಬಹುದು.

ಆದರೆ ಈ ಎಲ್ಲಾ ಕಾರಣಗಳ ಆಚೆ ದೊಡ್ಡ ದೊಡ್ಡ ವ್ಯಕ್ತಿಗಳಿದ್ದಾರೆ, ಆಮಿಷಗಳಿವೆ, ದುರಾಸೆ ಇದೆ ಎಂಬುದನ್ನು ನಮ್ಮ ಮಾಧ್ಯಮ ವ್ಯವಸ್ಥಿತವಾಗಿ ಮರೆ ಮಾಚಿದೆ. ಆ ಕಾರಣಕ್ಕೇನೆ ಈ ಬಾರಿ ‘ಆಪರೇಷನ್ ಕಮಲ’ ಎಂಬ ಪದ ಹೆಚ್ಚಾಗಿ ಕಿವಿಗೆ ಬೀಳಲೇ ಇಲ್ಲ‌. ಬದಲಾಗಿ ಕೇಳಿಸಿದ್ದು – ದೋಸ್ತಿ ಖತಮ್.

ಒಬ್ಬ ಶಾಸಕ ರಾಜೀನಾಮೆ ಕೊಟ್ಟ ತಕ್ಷಣ ಆತನನ್ನು ಮುಂಬೈಗೆ ಕರೆದುಕೊಂಡು ಹೋಗಲು ಒಂದು ವಿಮಾನ ರೆಡಿ ಇರುತ್ತದೆ. ಮುಂಬೈಗೆ ಹೋದ ನಂತರ ಅವರ ಭದ್ರತೆಗೆ ಮುಂಬೈ ಪೊಲೀಸರು ಬಂದು ನಿಲ್ಲುತ್ತಾರೆ. ಅವರು ಸುಪ್ರೀಂ ಕೋರ್ಟಿ ಅರ್ಜಿ ಸಲ್ಲಿಸಿದರೆ ಅವರ ಪರ ವಾದ ಮಂಡಿಸಲು ಬರುವ ವಕೀಲರಾದರೂ ಯಾರು?

ಈ ಎಲ್ಲಾ ಪ್ರಶ್ನೆಗಳನ್ನು ಗಾಳಿಗೆ ತೂರಿ, ಸಿದ್ದರಾಮಯ್ಯ ಮತ್ತು ರೇವಣ್ಣ ಎಂಬ ನೆಪ‌ ಹುಡುಕುತ್ತಿದ್ದಾರೆ. ಎಲ್ಲದಕ್ಕೂ ಸಿದ್ದರಾಮಯ್ಯ, ರೇವಣ್ಣನಂತಹವರೇ ಕಾರಣ ಆಗೋದಾದ್ರೆ, ಸದ್ಯ ಬೇರೆ ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವುದೇನು? ಪಕ್ಕದ ಗೋವಾ ದಂತಹ ಸಣ್ಣ ರಾಜ್ಯದಲ್ಲಿ 15 ಕಾಂಗ್ರೆಸ್ ಶಾಸಕರ ಪೈಕಿ ಹತ್ತು ಜನ ಬಿಜೆಪಿ ಸೇರಿದ್ದಾರೆ. ಅಲ್ಲಿ ಯಾವ ಸಿದ್ದರಾಮಯ್ಯ ಯಾವ ರೇವಣ್ಣ ಇದ್ರು?

ಅಷ್ಟೇ ಏಕೆ, ಈಗ ಪಶ್ಚಿಮ ಬಂಗಾಳದ ಮುಕುಲ್ ರಾಯ್ ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಎಂ ಪಾರ್ಟಿಗಳನ್ನು ತೊರೆದು ಬಿಜೆಪಿ ಸೇರಲು ಸಿದ್ಧ ಇರುವ ನೂರಕ್ಕೂ ಹೆಚ್ಚು ಶಾಸಕರ ಪಟ್ಟಿ ನನ್ನ ಜೇಬಿನಲ್ಲಿ ಇದೆ ಎಂದು ಹೇಳುತ್ತಾರಲ್ಲ ಅಲ್ಲಿ ಯಾವ ರೇವಣ್ಣ ಯಾವ ಸಿದ್ದರಾಮಯ್ಯ ಇದ್ದಾರೆ? 2014 ರ ನಂತರ ಹಲವು ರಾಜ್ಯಗಳಲ್ಲಿ ಚುನಾವಣೆಗಳು‌ ನಡೆದಿವೆ. ಅಲ್ಲೆಲ್ಲಾ ನಡೆದಿದ್ದೇನು?

ಟಿವಿ ಚರ್ಚೆಗಳಲ್ಲಿ ಕುಳಿತು ಮಾತನಾಡುವವರು ಬೇಕೆಂದೇ ತಮ್ಮ ದೃಷ್ಟಿಕೋನವನ್ನು ಕರ್ನಾಟಕಕ್ಕೆ ಸೀಮಿತಗೊಳಿಸಿ ರಾಜಕೀಯ ಬೆಳವಣಿಗೆಗಳನ್ನು ವಿಶ್ಲೇಷಿಸುತ್ತಿದ್ದಾರೆ. ಅವರಿಗೆ ಅದು ಸರಿ ಕಾಣಬಹುದು. ಅವರೆಲ್ಲಾ ಈ ಬೆಳವಣಿಗೆಗಳ ಹಿಂದೆ ಇರುವ ಅಮಿತ್ ಶಾ, ನರೇಂದ್ರ ಮೋದಿ ಕಾಣುವುದಿಲ್ಲ.

ಹೋಗಲಿ, ವಿಮಾನ ಹತ್ತಿಸುವ ಯಡಿಯೂರಪ್ಪ ಸಹಾಯಕ ಸಂತೋಷ್, ಜೊತೆಗೆ ಪ್ರಯಾಣಿಸುವ ಅಶೋಕ್ ಕೂಡಾ ಕಾಣುವುದಿಲ್ಲವೆ? ಅಷ್ಟರ ಮಟ್ಟಿಗೆ ಕಣ್ಣಿಗೆ ಪೊರೆ ಬೆಳೆಸಿಕೊಂಡರೆ ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...

ಕರಾವಳಿ ಇತಿಹಾಸದಲ್ಲೇ ಪ್ರಥಮ: ಮಂಗಳೂರಿನಲ್ಲಿ ಸಿಎಂ ‘ಡಿ.ಕೆ ಶಿವಕುಮಾರ್’ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ (Cabinet) ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲ್‌ನಲ್ಲಿರುವ ನೂತನ 'ಪ್ರಜಾ ಸೌಧ'ದಲ್ಲಿ (ಜಿಲ್ಲಾಡಳಿತ ಸೌಧ) ಶುಕ್ರವಾರ ವಿಜೃಂಭಣೆಯಿಂದ ಆರಂಭವಾಗಿದೆ....

ಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ: ಚುನಾವಣಾ ಆಯೋಗದ ಆದೇಶ ‘ಕಾನೂನಿಗೆ ವಿರುದ್ಧ’ ಎಂದ ಮಮತಾ ಬಣ, ಆದೇಶ ಸ್ವಾಗತಿಸಿದ ಬಂಡಾಯ ಪಾಳಯ 

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಯ ಆಂತರಿಕ ಬಿಕ್ಕಟ್ಟು ಇದೀಗ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿನ ಸಂಘರ್ಷವಾಗಿ ತೀವ್ರಗೊಂಡಿದೆ. ಟಿಎಂಸಿಯ ಎರಡು...