- Advertisement -
- Advertisement -
ಅಜಾತಶತ್ರು?
ಏನೆನ್ನುವುದು ನೀನು ?
ಶತ್ರುಗಳಿಲ್ಲವೇ ನಿನಗೆ ?
ಆಹಾ! ಗೆಳೆಯನೇ
ಇದು ಅತಿ ಕೆಟ್ಟ ಬಿರುದು;
ಗಟ್ಟಿಯೆದೆಯ ದಿಟ್ಟರು
ಕರ್ತವ್ಯದ ಹೋರಾಟದಲ್ಲಿ ಮುಳುಗಿರುವವರು
ಶತ್ರುಗಳ ಗಳಿಸಿರಲೇಬೇಕು
ನಿನಗಂಥವರಾರೂ ಇಲ್ಲವೆಂದರೆ
ಅದರರ್ಥ ನೀ ಮಾಡಿದ್ದು
ಏನೂ ಅಲ್ಲವೆಂದು
ಯಾವ ದೇಶದ್ರೋಹಿಯ ಕುಂಡೆಗೂ ನೀ ಒದೆಯಲಿಲ್ಲ
ಸುಳ್ಳಾಡುವ ತುಟಿಗಳಿಂದ ಬಟ್ಟಲ ಕಿತ್ತುಕೊಳ್ಳಲಿಲ್ಲ
ತಪ್ಪು ಸರಿಗೊಳಿಸಲೆಂದೂ ಯತ್ನಿಸಲಿಲ್ಲ
ಹೋರಾಟದಲಿ ಹೇಡಿಯಾಗೇ ಉಳಿದಿರುವೆ.
~ಚಾರ್ಲ್ಸ್ ಮೆಕಾಯ್ (1814-1889 ಬ್ರಿಟೀಷ್ ಕವಿ ಮತ್ತು ಪತ್ರಕರ್ತ)
ಅನುವಾದ: ಹೆಚ್.ಎಸ್. ಅನಪಮ
ಲಡಾಯಿ ಪ್ರಕಾಶನ ಪ್ರಕಟಿಸಿರುವ ’ಭಗತ್ ಸಿಂಗ್ ಜೈಲ್ ಡೈರಿ’ ಪುಸ್ತಕದಿಂದ
ಇದನ್ನೂ ಓದಿ: Factcheck ಅಂಬೇಡ್ಕರ್‌ರವರಿಗೆ ಭಾರತ ರತ್ನ ಕೊಟ್ಟಿದ್ದು ಅಟಲ್ ಬಿಹಾರ ವಾಜಪೇಯಿ- ಬಿ.ಎಲ್ ಸಂತೋಷ್ : ಈ ಮಾತು ನಿಜವೇ?