Homeಮುಖಪುಟ‘ಇದು ನನ್ನ ಕೊನೆ ಚುನಾವಣೆಯಾಗಬಹುದು..'; ರಾಜಕೀಯ ನಿವೃತ್ತಿ ಘೋಷಿಸಿದ್ರಾ ತರೂರ್!

‘ಇದು ನನ್ನ ಕೊನೆ ಚುನಾವಣೆಯಾಗಬಹುದು..’; ರಾಜಕೀಯ ನಿವೃತ್ತಿ ಘೋಷಿಸಿದ್ರಾ ತರೂರ್!

- Advertisement -
- Advertisement -

‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರ ಕ್ಷೇತ್ರದಲ್ಲಿ ನನ್ನದು ಕೊನೆಯ ಸ್ಪರ್ಧೆಯಿರಬಹುದು’ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಲೋಕಸಭಾ ಸಂಸದ ಶಶಿ ತರೂರ್ ನಿವೃತ್ತಿ ಕುರಿತು ಪರೋಕ್ಷ ಹೇಳಿಕೆ ನೀಡಿದ್ದಾರೆ. ಯುವ ಜನತೆಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸುವ ಕುರಿತು ಗುರುವಾರ ಮಾತನಾಡಿದ ಅವರು, ‘2024ರ ನನ್ನ ಹೋರಾಟವೇ ಕ್ಷೇತ್ರದಲ್ಲಿ ಕೊನೆಯದಾಗಿರಬಹುದು ಎಂದು ಸೂಚಿಸುತ್ತದೆ’ ಎಂದರು.

ತಿರುವನಂತಪುರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆದರೆ, ಇದು ರಾಜಕೀಯವಾಗಿರುವುದರಿಂದ ಯಾವುದೇ ಅಂತಿಮ ತೀರ್ಮಾನವಿಲ್ಲ. ಕೆಲವು ಹಂತದಲ್ಲಿ, ಕಿರಿಯರಿಗೆ ಅವಕಾಶ ನೀಡುವ ಸಮಯ ಬರುತ್ತದೆ ಎಂದು ನಾನು ನಂಬುತ್ತೇನೆ, ಅದು ನನ್ನ ಆಲೋಚನೆ’ ಎಂದು ಅವರು ಹೇಳಿದರು.

‘ನಾನು ಎಂದಿಗೂ ಈ ಬಗ್ಗೆ ಮಾತನಾಡಿಲ್ಲ. ಆದರೆ, ಇದು ನನ್ನ ಕೊನೆಯ ಚುನಾವಣೆ ಎಂದು ನಾನು ಭಾವಿಸುತ್ತೇನೆ’ ಎಂದು 67 ವರ್ಷದ ಸಂಸದ ತರೂರ್ ಹೇಳಿದ್ದಾರೆ.

‘ನಾನು ತಿರುವನಂತಪುರದಿಂದ ಚುನಾವಣೆಗೆ ಸ್ಪರ್ಧಿಸಲು ಹೊರಟರೆ, ಅದು ತನ್ನ ಕೊನೆಯ ಚುನಾವಣೆಯಂತೆ, ಪೂರ್ಣ ಉತ್ಸಾಹದಿಂದ, ಜನರಿಗೆ ಅತ್ಯುತ್ತಮವಾದ ಕೆಲಸವನ್ನು ಮಾಡುತ್ತೇನೆ’ ಎಂದು ಹೇಳಿದರು.

ಒಂದೂವರೆ ದಶಕದ ಹಿಂದೆ ರಾಜಕೀಯ ಪ್ರವೇಶಿಸಿದ ತರೂರ್, ಕೇರಳದ ತಿರುವನಂತಪುರಂ ಲೋಕಸಭಾ ಟಿಕೆಟ್ ಪಡೆದುಕೊಂಡಿದ್ದರು. 2009ರ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯ ಸಾಧಿಸಿದ ಅವರು, ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು. ಅವರ ಮೊದಲ ಚುನಾವಣಾ ಕದನದಲ್ಲಿ ಸಿಪಿಐ ಅಭ್ಯರ್ಥಿ ಪಿ. ರಾಮಚಂದ್ರನ್ ನಾಯರ್ ವಿರುದ್ಧ 95 ಸಾವಿರ ಮತಗಳ ಅಂತರದಿಂದ ಜಯಗಳಿಸಿದರು.

ಈ ಯಶಸ್ಸಿನ ನಂತರ, ಅವರು 2014 ಮತ್ತು 2019ರ ಲೋಕಸಭೆ ಚುನಾವಣೆಗಳಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡರು.

ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು ತರೂರ್ ವಿಶ್ವಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದರು. 2006 ರಲ್ಲಿ ಯುಎನ್ ಸೆಕ್ರೆಟರಿ ಜನರಲ್ ಹುದ್ದೆಗೆ ಅಧಿಕೃತ ಅಭ್ಯರ್ಥಿಯಾಗಿ ಭಾರತವನ್ನು ಪ್ರತಿನಿಧಿಸಿದ್ದರು. ಸ್ಪರ್ಧೆಯಲ್ಲಿದ್ದ ಏಳು ಅಭ್ಯರ್ಥಿಗಳಲ್ಲಿ ಅವರು ಎರಡನೇ ಸ್ಥಾನ ಪಡೆದರು.

ಇದನ್ನೂ ಓದಿ; ಸಿಐಎಸ್ಎಫ್‌ನ ಮೊದಲ ಮಹಿಳಾ ಮುಖ್ಯಸ್ಥೆಯಾಗಿ ಹಿರಿಯ ಐಪಿಎಸ್‌ ಅಧಿಕಾರಿ ನೀನಾ ಸಿಂಗ್ ಆಯ್ಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂಸತ್ತು ಅಂಗೀಕರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಅರ್ಜಿ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ

0
"ಹಲವು ದೋಷಗಳು ಮತ್ತು ವ್ಯತ್ಯಾಸಗಳಿವೆ" ಎಂದು, ಭಾರತ ದಂಡ ಸಂಹಿತೆಗಳನ್ನು (ಐಪಿಸಿ) ಕೂಲಂಕಷವಾಗಿ ಪರಿಶೀಲಿಸುವ ಮೂರು ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಬೇಲಾ...