Homeಮುಖಪುಟಶಾದಿ ಭಾಗ್ಯ ಯೋಜನೆ ಬಯಸುವವರು ಪಾಕಿಸ್ತಾನಕ್ಕೆ ಹೋಗಿ: ಬಸನಗೌಡ ಪಾಟೀಲ್‌ ಯತ್ನಾಳ್‌

ಶಾದಿ ಭಾಗ್ಯ ಯೋಜನೆ ಬಯಸುವವರು ಪಾಕಿಸ್ತಾನಕ್ಕೆ ಹೋಗಿ: ಬಸನಗೌಡ ಪಾಟೀಲ್‌ ಯತ್ನಾಳ್‌

- Advertisement -
- Advertisement -

ಅಲ್ಪಸಂಖ್ಯಾತ ಸಮುದಾಯದ ಬಡ ಮಹಿಳೆಯರಿಗಾಗಿ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ಶಾದಿ ಭಾಗ್ಯ ಯೋಜನೆಯನ್ನು ರದ್ದುಗೊಳಿಸುವ ಪ್ರಸ್ತುತ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯಟ್ನಾಲ್ ಸ್ವಾಗತಿಸಿದ್ದಾರೆ. “ಈ ಯೋಜನೆಯನ್ನು ಬಯಸುವವರು ಪಾಕಿಸ್ತಾನಕ್ಕೆ ಹೋಗಬಹುದು” ಎಂದು ಹೇಳಿದರು.

ಈ ಹಿಂದೆಯು ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಟೀಕೆಕ್ಕೊಳಗಾಗಿರುವ ಇವರು, ಈ ರೀತಿಯ ಹೇಳಿಕೆ ನೀಡುವ ಮೂಲಕ ಮತ್ತೊಂದು ಹೊಸ ವಿವಾದ ಸೃಷ್ಟಿಸಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ ಅಲ್ಪಸಂಖ್ಯಾತ ಸಮುದಾಯಗಳ ಮಹಿಳೆಯರಿಗೆ ವಿವಾಹ ವೆಚ್ಚವಾಗಿ 50,000 ರೂ ನೀಡುವ “ಶಾಧಿ ಭಾಗ್ಯ” ಯೋಜನೆಯನ್ನು ಹಿಂದಿನ ಕಾಂಗ್ರೆಸ್ ಸರ್ಕಾರ 2013 ರಲ್ಲಿ ಪ್ರಾರಂಭಿಸಿತ್ತು. ಈಗ ಅದನ್ನು ಹಿಂತೆಗೆದುಕೊಳ್ಳಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ.

“ಈ ಯೋಜನೆಯನ್ನು ಹಿಂತೆಗೆದುಕೊಳ್ಳುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಭಾರತ ಜಾತ್ಯತೀತ ರಾಷ್ಟ್ರ. ಅಲ್ಪಸಂಖ್ಯಾತರನ್ನು ಸಮಾಧಾನಪಡಿಸುವ ಅಗತ್ಯವಿಲ್ಲ. ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆಯ ಅವಶ್ಯಕತೆಯಿದೆ … ಭಾರತದಲ್ಲಿ ಬಹುಸಂಖ್ಯಾತ ಸಮುದಾಯಕ್ಕೆ ಏನನ್ನೂ ನೀಡಬಾರದೆ? ಹಿಂದೂ ಜಾತ್ಯತೀತರಿಗೆ ಏನನ್ನೂ ನೀಡಲಾಗುವುದಿಲ್ಲವೇ? ಜಾತ್ಯತೀತ ಎಂದರೆ ಎಲ್ಲವೂ ಅಲ್ಪಸಂಖ್ಯಾತರಿಗೆ ಮಾತ್ರವೇ? … ಪಾಕಿಸ್ತಾನವು ಅಂತಹ ಯೋಜನೆಗಳನ್ನು ನೀಡುತ್ತಿದೆ. ಯೋಜನೆಯನ್ನು ಬಯಸುವವರು ಪಾಕಿಸ್ತಾನಕ್ಕೆ ಹೋಗಲಿ” ಎಂದು ಬಿಜೆಪಿ ಶಾಸಕ ಬಸಂಗೌಡ ಪಾಟೀಲ್ ಯತ್ನಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಳೆದ ವಾರ ಕರ್ನಾಟಕ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯ ಬಜೆಟ್ ಮಂಡಿಸಿದಾಗ ಈ ವಿವಾಹ ಯೋಜನೆಗೆ ಯಾವುದೇ ಹೊಸ ಹಣವನ್ನು ಘೋಷಿಸಲಾಗಿಲ್ಲ.

ಫೆಬ್ರವರಿ ತಿಂಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ತಮ್ಮ ನಿಲುವಿಗೆ ಸಂಬಂಧಿಸಿದಂತೆ 102 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವಿರುದ್ಧ ಇದೇ ಯತ್ನಾಳ್‌ ತಮ್ಮ ನಾಲಿಗೆ ಹರಿಯಬಿಟ್ಟಿದ್ದರಿಂದ ಸಾಲು ಸಾಲು ತೀವ್ರಗಳನ್ನು ಎದರಿಸಬೇಕಾಗಿ ಬಂದಿತ್ತು.

ದೊರೆಸ್ವಾಮಿಯವರನ್ನು “ನಕಲಿ ಸ್ವಾತಂತ್ರ್ಯ ಹೋರಾಟಗಾರ” ಮತ್ತು “ಪಾಕಿಸ್ತಾನಿ ಏಜೆಂಟ್” ಎಂದು ಕರೆದಿದ್ದರು. ಇದರಿಂದ ರಾಜ್ಯದ್ಯಂತ ವ್ಯಾಪಕ ವಿರೋಧ ಬಂದಿತ್ತು. ಅಲ್ಲದೇ ರಾಜ್ಯ ವಿಧಾನಸಭೆಯಲ್ಲಿ ಕೋಲಾಹಲ ಉಂಟಾಗಿತ್ತು.

ಅದಾದ ನಂತರ ಸಹ ಮಹಾಭಾರತವನ್ನು ಕೀಳು ಜಾತಿಯ ವಾಲ್ಮೀಕಿ ಬರೆದಿದ್ದು ಎಂದು ಹೇಳಿಕೆ ನೀಡಿ ಯತ್ನಾಳ್‌ ಟೀಕೆಗೊಳಗಾಗಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...