Homeಮುಖಪುಟಇಂಡಿಯಾ ಮೈತ್ರಿಕೂಟ ತೊರೆಯಲು ಅಧೀರ್ ರಂಜನ್ ಚೌಧರಿ ಕಾರಣ: ಟಿಎಂಸಿ ಸಂಸದ ಓಬ್ರಿಯಾನ್

ಇಂಡಿಯಾ ಮೈತ್ರಿಕೂಟ ತೊರೆಯಲು ಅಧೀರ್ ರಂಜನ್ ಚೌಧರಿ ಕಾರಣ: ಟಿಎಂಸಿ ಸಂಸದ ಓಬ್ರಿಯಾನ್

- Advertisement -
- Advertisement -

ರಾಜ್ಯದಲ್ಲಿ ಉಭಯ ಪಕ್ಷಗಳ ನಡುವೆ ಮೈತ್ರಿ ಏರ್ಪಡದಿದ್ದಕ್ಕೆ ಪಶ್ಚಿಮ ಬಂಗಾಳ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಮಾತ್ರ ಹೊಣೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಡೆರೆಕ್ ಓಬ್ರಿಯಾನ್ ಗಂಭೀರ ಆರೋಪ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷವು ಲೋಕಸಭೆ ಚುನಾವಣೆ ಚುನಾವಣೆಯಲ್ಲಿ ‘ಏಕಾಂಗಿಯಾಗಿ’ ಹೋರಾಡಲಿದೆ ಎಂದು ಘೋಷಿಸಿದ ಒಂದು ದಿನದ ನಂತರ ಓಬ್ರಿಯಾನ್ ಪ್ರತಿಕ್ರಿಯೆ ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮೈತ್ರಿ ಕಾರ್ಯರೂಪಕ್ಕೆ ಬರದಿರಲು ಅಧೀರ್ ರಂಜನ್ ಚೌಧರಿ “ಕಾರಣ” ಎಂದು ಪ್ರತಿಪಾದಿಸಿದ ಓಬ್ರಿಯಾನ್, ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟವು (ಇಂಡಿಯಾ) ಅನೇಕ ವಿರೋಧಿಗಳನ್ನು ಹೊಂದಿದೆ. ಆದರೆ, ಬಿಜೆಪಿ ಮತ್ತು ಅಧೀರ್ ರಂಜನ್ ಚೌಧರಿ ಮಾತ್ರ ಮೈತ್ರಿಕೂಟದ ವಿರುದ್ಧ ಪದೇ ಪದೇ ಮಾತನಾಡಿದರು’ ಎಂದು ಹೇಳಿದರು.

‘ಸಾರ್ವತ್ರಿಕ ಚುನಾವಣೆಯ ನಂತರ, ಕಾಂಗ್ರೆಸ್ ತನ್ನ ಕೆಲಸವನ್ನು ನಿರ್ವಹಿಸಿ, ಗಣನೀಯ ಸಂಖ್ಯೆಯ ಸ್ಥಾನಗಳಲ್ಲಿ ಬಿಜೆಪಿಯನ್ನು ಸೋಲಿಸಿದರೆ, ತೃಣಮೂಲ ಕಾಂಗ್ರೆಸ್ ಸಂವಿಧಾನವನ್ನು ನಂಬುವ ಮತ್ತು ಹೋರಾಡುವರ ಭಾಗವಾಗಲಿದೆ’ ಎಂದು ಓಬ್ರಿಯಾನ್ ಸುದ್ದಿಗಾರರಿಗೆ ತಿಳಿಸಿದರು.

‘ಚೌಧರಿ ಅವರು ಬಂಗಾಳದಲ್ಲಿ ಇಂಡಿಯಾ ಮೈತ್ರಿಯ ಸಮಾಧಿಗಾರ. ಅವರ ದೈನಂದಿನ ಗದ್ದಲದಿಂದಾಗಿ ವಿಷಯಗಳು ನೆಲಕಚ್ಚಿವೆ. ನಿನ್ನೆ ಮುಖ್ಯಮಂತ್ರಿಯ ಹೇಳಿಕೆ ನೀಡಿದ ನಂತರ, ಕಾಂಗ್ರೆಸ್ ನಾಯಕರು ಡ್ಯಾಮೇಜ್ ಕಂಟ್ರೋಲ್‌ಗೆ ಬರುತ್ತಿದ್ದಾರೆ. ಆದರೆ, ಈಗ ತಡವಾಗಿದೆ’ ಎಂದು ತೃಣಮೂಲ ಮೂಲಗಳು ತಿಳಿಸಿವೆ.

ಸೀಟು ಹಂಚಿಕೆಯ ಮಾತುಕತೆಯ ಸಂದರ್ಭದಲ್ಲಿ ತೃಣಮೂಲ ಬಹಳ ತಾಳ್ಮೆಯಿಂದಿತ್ತು. ನಾವು ಸಾಕಷ್ಟು ತಾಳ್ಮೆ ಹೊಂದಿದ್ದೇವೆ. ಆದರೆ ನಾವು ಈವರೆಗೆ ನೋಡಿದ್ದು ವಿಳಂಬ, ವಿಳಂಬ ಮತ್ತು ವಿಳಂಬ ಮಾತ್ರ’ ಎಂದು ಮೂಲಗಳು ತಿಳಿಸಿವೆ.

‘ತೃಣಮೂಲ ಬಂಗಾಳದಲ್ಲಿ ಏಕಾಂಗಿಯಾಗಿ ಹೋರಾಡುತ್ತದೆ ಮತ್ತು ಲೋಕಸಭೆ ಚುನಾವಣೆಯ ನಂತರವೇ ಕಾಂಗ್ರೆಸ್‌ನೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಬ್ಯಾನರ್ಜಿ ನಿನ್ನೆ ಘೋಷಿಸಿದರು.

ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿರುವ ಕಾಂಗ್ರೆಸ್, ಹದಗೆಟ್ಟ ಸಂಬಂಧಗಳನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದೆ. ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. “ಮಮತಾಜಿ ಇಲ್ಲದ ಇಂಡಿಯಾ ಬಣವನ್ನು ಕಾಂಗ್ರೆಸ್ ಊಹಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ರಮೇಶ್ ನಿನ್ನೆ ಹೇಳಿದ್ದರು.

ಭಾರತ್ ಜೋಡೋ ನ್ಯಾಯ್ ಯಾತ್ರೆ ಇಂದು ಬಂಗಾಳವನ್ನು ಪ್ರವೇಶಿಸಿದ್ದು, ಇಂಡಿಯಾ ಬ್ಲಾಕ್ ಅನ್ಯಾಯದ ವಿರುದ್ಧ ಹೋರಾಡುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು. ‘ಪಶ್ಚಿಮ ಬಂಗಾಳಕ್ಕೆ ಬಂದಿದ್ದಕ್ಕೆ ನನಗೆ ಸಂತೋಷವಾಗಿದೆ. ನಿಮ್ಮ ಮಾತನ್ನು ಕೇಳಲು ಮತ್ತು ನಿಮ್ಮೊಂದಿಗೆ ನಿಲ್ಲಲು ನಾವು ಇಲ್ಲಿಗೆ ಬಂದಿದ್ದೇವೆ. ಬಿಜೆಪಿ-ಆರ್‌ಎಸ್‌ಎಸ್‌ ದ್ವೇಷ, ಹಿಂಸಾಚಾರ ಮತ್ತು ಅನ್ಯಾಯವನ್ನು ಹರಡುತ್ತಿವೆ. ಆದ್ದರಿಂದ, ಇಂಡಿಯಾ ಕೂಟವು ಹೇಗಾದರೂ ಒಟ್ಟಾಗಿ ಹೋರಾಡಲಿದೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಸೀಟು ಹಂಚಿಕೆ ಕುರಿತ ಮಾತುಕತೆಗಳು ವಿಫಲವಾದ ನಂತರ ಮೈತ್ರಿ ಕುರಿತು ಬ್ಯಾನರ್ಜಿ ಅವರ ಹೇಳಿಕೆಗಳು ಬಂದಿವೆ. ವರದಿಗಳ ಪ್ರಕಾರ, ಬಂಗಾಳದಲ್ಲಿ ತೃಣಮೂಲ ಪಕ್ಷವು ಕಾಂಗ್ರೆಸ್‌ಗೆ ಎರಡು ಸ್ಥಾನಗಳನ್ನು ನೀಡಲು ನಿರ್ಧರಿಸಿತ್ತು. ಅವರು ಕನಿಷ್ಠ 10 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದ್ದರು ಎನ್ನಲಾಗಿದೆ.

ಲೋಕಸಭೆಯಲ್ಲಿ ಕಾಂಗ್ರೆಸ್‌ನ ನಾಯಕರಾಗಿರುವ ಚೌಧರಿ ಅವರು ತೃಣಮೂಲ ಮುಖ್ಯಸ್ಥರನ್ನು “ಅವಕಾಶವಾದಿ” ನಾಯಕ ಎಂದು ಕರೆದರು. ಕಾಂಗ್ರೆಸ್ ಸ್ವತಂತ್ರವಾಗಿ ಚುನಾವಣೆಗಳನ್ನು ಎದುರಿಸಲು ಸಮರ್ಥವಾಗಿದೆ’ ಎಂದು ಹೇಳಿದಾಗ ವಿವಾದ ಭುಗಿಲೆದ್ದಿತು.

ಇದನ್ನೂ ಓದು; ರಾಹುಲ್ ಗಾಂಧಿ ‘ಕಲ್ಲಿದ್ದಲು ಒಲೆ’ ಹೇಳಿಕೆಯನ್ನು ಲೇವಡಿ ಮಾಡಿದ ಬಿಜೆಪಿಗರು; ವಾಸ್ತವ ಏನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಬಿಜೆಪಿಯ12 ಸಭೆ: ದಾಖಲೆ ಕೇಳಿದ ಕಾಂಗ್ರೆಸ್

0
ಬಿಜೆಪಿ ಚೀನಾದೊಂದಿಗೆ ನಿಕಟ ಸಂಪರ್ಕ ಹೊಂದಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದ್ದು, 2008 ರಿಂದ ಬಿಜೆಪಿ ನಾಯಕರು ಮತ್ತು ಚೀನಾದ ಅಧಿಕಾರಿಗಳ ನಡುವೆ 12 ಉನ್ನತ ಮಟ್ಟದ ಸಭೆಗಳು ನಡೆದಿವೆ ಎಂದು ಆರೋಪಿಸಿದೆ....