Homeಮುಖಪುಟರಾಜ್ಯಪಾಲರ ಬಾಲಿಶ ವರ್ತನೆಗೆ ನಾವು ಹೆದರುವುದಿಲ್ಲ: ಎಂಕೆ ಸ್ಟಾಲಿನ್

ರಾಜ್ಯಪಾಲರ ಬಾಲಿಶ ವರ್ತನೆಗೆ ನಾವು ಹೆದರುವುದಿಲ್ಲ: ಎಂಕೆ ಸ್ಟಾಲಿನ್

- Advertisement -
- Advertisement -

ನಮ್ಮ ಸರ್ಕಾರವು ನಿರಂಕುಶ ಆಡಳಿತಕ್ಕೆ ಸವಾಲು ಹಾಕುತ್ತಿದೆ. ರಾಜ್ಯಪಾಲ ಆರ್‌ಎನ್ ರವಿ ಅವರ “ಬಾಲಿಶ ನಡವಳಿಕೆ”ಗಳಿಗೆ ನಾವು ಹೆದರುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ಹೇಳಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ರಾಜ್ಯಪಾಲರು ತಮ್ಮ ರಾಜಕೀಯ ಚಟುವಟಿಕೆಗಳಿಗೆ ವಿಧಾನಸಭೆಯನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಡ್ರಾವಿಡ ಮಾದರಿ ಸರ್ಕಾರ ಈ ಹಿಂದೆ ಹಲವು ಸವಾಲುಗಳನ್ನು ಎದುರಿಸಿದೆ. ಮುಂದೆಯೂ ಎಲ್ಲಾ ಅಡೆತಡೆಗಳನ್ನು ಬೇಧಿಸಲಿದ್ದೇವೆ ಎಂದಿದ್ದಾರೆ.

ಸಿದ್ಧಪಡಿಸಿದ ಭಾಷಣ ಓದಲು ರಾಜ್ಯಪಾಲ ಆರ್‌.ಎನ್ ರವಿ ನಿರಾಕರಿಸಿದ್ದನ್ನು ಉಲ್ಲೇಖಿಸಿದ ಸ್ಟಾಲಿನ್, “ಅಡೆತಡೆಗಳನ್ನು ಬೇಧಿಸುವ ಸಾಮರ್ಥ್ಯವಿರುವ ಚಳವಳಿಯ ನಾಯಕನಾಗಿ, ನನ್ನ ಸಾಮರ್ಥ್ಯದಲ್ಲಿ ನಾನು ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್ ಎಂದು ಹೇಳುತ್ತೇನೆ. ನನ್ನನ್ನು ಸೋಲಿಸಲು ಅಥವಾ ನಿಲ್ಲಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಅಧಿವೇಶನದ ಆರಂಭದಲ್ಲಿ ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಭಾಷಣ ಮಾಡಬೇಕೆಂದು ಶಿಷ್ಟಾಚಾರದ ಬೇಡಿಕೆಯಾಗಿವೆ. ಆದರೆ, ರಾಜ್ಯಪಾಲರು ವಿಧಾನಸಭೆಯನ್ನು ತಮ್ಮ ರಾಜಕೀಯ ಚಟುವಟಿಕೆಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಶತಮಾನದಷ್ಟು ಹಳೆಯದಾದ ವಿಧಾನಸಭೆಯನ್ನು ಅವಹೇಳನ ಮಾಡಿದ ಕೃತ್ಯವಲ್ಲವೇ? ಇದು ತಮಿಳುನಾಡಿನ ಜನತೆಯನ್ನು ಕೆಣಕುವ ಕಾರ್ಯವಾಗಿರಲಿಲ್ಲವೇ? ಅವರು ಪ್ರಮಾಣ ವಚನ ಸ್ವೀಕರಿಸಿದ ಸಂವಿಧಾನವನ್ನು ಉಲ್ಲಂಘಿಸುವುದು ಮತ್ತು ಅವಹೇಳನ ಮಾಡುವುದಲ್ಲವೇ? ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.

ಉತ್ತರ ಭಾರತ ಪ್ರಗತಿಯಲ್ಲಿದೆ, ದಕ್ಷಿಣ ಸೊರಗುತ್ತಿದೆ ಎಂದು ಹೇಳುತ್ತಿದ್ದ ಕಾಲವೊಂದಿತ್ತು. ಈಗ ದಕ್ಷಿಣ ಭಾರತ ಬೆಳವಣಿಗೆ ಸಾಧಿಸಿದ್ದು, ಉತ್ತರದ ಪ್ರಗತಿಗೆ ಕೊಡುಗೆ ನೀಡುತ್ತಿದೆ. ದ್ರಾವಿಡ ಚಳವಳಿಯಿಂದಾಗಿ ಈ ಬೆಳವಣಿಗೆ ಸಾಧ್ಯವಾಯಿತು. ಸರ್ಕಾರ ಕೇವಲ ಅಧಿಕಾರ ಚಲಾಯಿಸುವುದಕ್ಕಲ್ಲ, ನಮ್ಮ ಸಿದ್ಧಾಂತವನ್ನು ಅನುಷ್ಠಾನಗೊಳಿಸುವ ಸಾಧನವಾಗಿದೆ. ನಮ್ಮ ಸರ್ಕಾರದ 33 ತಿಂಗಳು ಅಭಿವೃದ್ಧಿ ಮತ್ತು ಸಾಧನೆಗಳ ತಿಂಗಳು ಎಂದು ಸಾಬೀತುಪಡಿಸಿದೆ. ಭಾರತದ ಆರ್ಥಿಕತೆಯಲ್ಲಿ ತಮಿಳುನಾಡಿನ ಪಾಲು ಶೇ. 90 ಆಗಿದೆ. ಇದು ನಮ್ಮ ಸರ್ಕಾರದ ಮೊದಲ ಸಾಧನೆಯಾಗಿದೆ. ನಮ್ಮ ಸರ್ಕಾರ ದಬ್ಬಾಳಿಕೆ ಮಾಡುವ ಶಕ್ತಿಗಳನ್ನು ತೊಡೆದು ಹಾಕುತ್ತಿರುವುದರಿಂದ ಮತ್ತು ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಿರುವುದರಿಂದ ನಮ್ಮ ವಿರೋಧಿಗಳು ನಿರಾಶೆಗೊಂಡಿದ್ದಾರೆ ಎಂದು ಸ್ಟಾಲಿನ್ ಹೇಳಿದರು.

ಇದನ್ನೂ ಓದಿ : ಚುನಾವಣಾ ಬಾಂಡ್ ರದ್ದು| ಬಿಜೆಪಿಯ ಕುತಂತ್ರಕ್ಕೆ ಸುಪ್ರೀಂ ಕೋರ್ಟ್‌ನಿಂದ ಕಪಾಳಮೋಕ್ಷ: ಸಿಎಂ ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...