Homeಮುಖಪುಟಪೌರತ್ವ ಕಾಯ್ದೆಯ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಗಳು ದುರದೃಷ್ಟಕರ ಮತ್ತು ನೋವನ್ನುಂಟುಮಾಡುತ್ತವೆ: ನರೇಂದ್ರ ಮೋದಿ

ಪೌರತ್ವ ಕಾಯ್ದೆಯ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಗಳು ದುರದೃಷ್ಟಕರ ಮತ್ತು ನೋವನ್ನುಂಟುಮಾಡುತ್ತವೆ: ನರೇಂದ್ರ ಮೋದಿ

- Advertisement -
- Advertisement -

ಪೌರತ್ವ ತಿದ್ದುಪಡಿ ಕಾಯ್ದೆಯ ಮೇಲಿನ ಹಿಂಸಾತ್ಮಕ ಪ್ರತಿಭಟನೆಗಳು ದುರದೃಷ್ಟಕರ ಮತ್ತು ತೀವ್ರವಾಗಿ ನೋವನ್ನುಂಟುಮಾಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರುಮ ಚರ್ಚೆ ಮತ್ತು ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಅತ್ಯಗತ್ಯ ಭಾಗಗಳಾಗಿವೆ ಆದರೆ, ಎಂದಿಗೂ ಸಾರ್ವಜನಿಕ ಆಸ್ತಿಗೆ ಹಾನಿಯಾಗಬಾರದು ಮತ್ತು ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ನೀತಿಯ ಒಂದು ಭಾಗವಾಗಿದೆ ಎಂದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ 2019 ಅನ್ನು ಸಂಸತ್ತಿನ ಉಭಯ ಸದನಗಳು ಅಗಾಧ ಬೆಂಬಲದೊಂದಿಗೆ ಅಂಗೀಕರಿಸಿದವು. ಹೆಚ್ಚಿನ ಸಂಖ್ಯೆಯ ರಾಜಕೀಯ ಪಕ್ಷಗಳು ಮತ್ತು ಸಂಸದರು ಇದರ ಅಂಗೀಕಾರವನ್ನು ಬೆಂಬಲಿಸಿದರು. ಈ ಕಾಯಿದೆಯು ಭಾರತದ ಶತಮಾನಗಳ ಹಳೆಯದಾದ ಸ್ವೀಕಾರ, ಸಾಮರಸ್ಯ, ಸಹಾನುಭೂತಿ ಮತ್ತು ಸಹೋದರತ್ವದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದಿದ್ದಾರೆ.

ಕಾಯ್ದೆಯು ಭಾರತದ ಯಾವುದೇ ಧರ್ಮದ, ಯಾವುದೇ ನಾಗರಿಕರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನನ್ನ ಸಹ ಭಾರತೀಯರಿಗೆ ನಿಸ್ಸಂದಿಗ್ಧವಾಗಿ ಭರವಸೆ ನೀಡಲು ನಾನು ಬಯಸುತ್ತೇನೆ. ಈ ಕಾಯಿದೆಯ ಬಗ್ಗೆ ಯಾವುದೇ ಭಾರತೀಯರಿಗೆ ಚಿಂತೆ ಇರಬೇಕಾಗಿಲ್ಲ. ಈ ಕಾಯ್ದೆ ಹೊರಗಡೆ ಹಲವಾರು ವರ್ಷಗಳ ಕಿರುಕುಳವನ್ನು ಎದುರಿಸುತ್ತಿರುವ ಮತ್ತು ಭಾರತವನ್ನು ಹೊರತುಪಡಿಸಿ ಬೇರೆ ಸ್ಥಳವಿಲ್ಲದವರಿಗೆ ಮಾತ್ರ ಅನ್ವಯಿಸುತ್ತದೆ ಎಂದಿದ್ದಾರೆ.

ಭಾರತದ ಅಭಿವೃದ್ಧಿಗಾಗಿ ಮತ್ತು ಪ್ರತಿಯೊಬ್ಬ ಭಾರತೀಯರ, ವಿಶೇಷವಾಗಿ ಬಡವರು, ದೀನ ದಲಿತರು ಮತ್ತು ಅಂಚಿನಲ್ಲಿರುವವರ ಸಬಲೀಕರಣಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವುದು ಇಂದಿನ ಅವಶ್ಯಕತೆಯಾಗಿದೆ. ಪಟ್ಟಭದ್ರ ಹಿತಾಸಕ್ತಿ ಗುಂಪುಗಳು ನಮ್ಮನ್ನು ವಿಭಜಿಸಲು ಮತ್ತು ಗೊಂದಲವನ್ನು ಸೃಷ್ಟಿಸಲು ನಾವು ಅನುಮತಿಸುವುದಿಲ್ಲ ಎಂದಿದ್ದಾರೆ.

ಶಾಂತಿ, ಐಕ್ಯತೆ ಮತ್ತು ಸಹೋದರತ್ವವನ್ನು ಕಾಪಾಡಿಕೊಳ್ಳುವ ಸಮಯ ಇದು. ಯಾವುದೇ ರೀತಿಯ ವದಂತಿಗಳು ಮತ್ತು ಸುಳ್ಳುಗಳಿಂದ ದೂರವಿರಬೇಕು ಎಂಬುದು ಎಲ್ಲರಿಗೂ ನನ್ನ ಮನವಿ ಎಂದು ಅವರು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...