Homeಮುಖಪುಟಗಾಜಿಯಾಬಾದ್ ಪೋಲೀಸರಿಂದ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ: FIR ದಾಖಲು

ಗಾಜಿಯಾಬಾದ್ ಪೋಲೀಸರಿಂದ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ: FIR ದಾಖಲು

- Advertisement -
- Advertisement -

ಗಾಜಿಯಾಬಾದ್‌ನ ಸಾರ್ವಜನಿಕ ಉದ್ಯಾನವನದಲ್ಲಿ ದಂಪತಿಗೆ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಎಸಗಿದ ಆರೋಪದ ಮೇಲೆ ಗಾಜಿಯಾಬಾದ್ ಪೊಲೀಸ್ ಕಾನ್ಸ್‌ಟೇಬಲ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಘಟನೆ ಸೆಪ್ಟೆಂಬರ್ 16 ರಂದು ನಡೆದಿದ್ದರೂ, ಸೆಪ್ಟೆಂಬರ್ 28 ರಂದು ಬೆಳಕಿಗೆ ಬಂದಿದೆ. ಆರೋಪಿತ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲು ದಂಪತಿಗಳು 12 ದಿನಗಳ ಕಾಲ ಹೋರಾಟ ನಡೆಸಬೇಕಾಯಿತು.

ಘಟನೆಯ ಎಫ್‌ಐಆರ್‌ನ ಪ್ರಕಾರ, …. ಈ ಪತ್ರಿಕೆಯು ಮಧ್ಯ ಪ್ರವೇಶಿಸಿದ ಬಳಿಕ, ಪ್ರಕರಣ ದಾಖಲಾಯಿತು. ಆಪಾದಿತ ಪೊಲೀಸರು ದಂಪತಿಗೆ ಸುಮಾರು ಮೂರು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ. ಅಂತಿಮವಾಗಿ ಪೇಟಿಎಂ ಮೂಲಕ ಪೊಲೀಸರಿಗೆ 1,000 ರೂಪಾಯಿಗಳನ್ನು ವರ್ಗಾಯಿಸಿದ ನಂತರವೇ ಅಲ್ಲಿಂದ ಹೊರಡಲು ಅವಕಾಶ ಸಿಕ್ಕಿತು.

”ಪೊಲೀಸರು ನನ್ನ ಖಾಸಗಿ ಅಂಗಗಳನ್ನು ಮುಟ್ಟಿದರು ಮತ್ತು ಅವರೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಡ ಹೇರಿದರು. ಅವರೊಂದಿಗೆ ಇದ್ದ ಮೂರನೇ ವ್ಯಕ್ತಿ ನಮ್ಮಿಂದ 5-6 ಲಕ್ಷಕ್ಕೆ ಬೇಡಿಕೆಯಿಟ್ಟರು” ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

”ಕೊತ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಸಾಯಿಉಪ್ವಾನ್ ವ್ಯಾಪ್ತಿಯೊಳಗೆ ಪಿಆರ್‌ವಿ 112 ರ ಇಬ್ಬರು ಪೊಲೀಸರು ಕಾನ್‌ಸ್ಟೆಬಲ್‌ಗಳನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ.

ಈ ಬಗ್ಗೆ ಸಹಾಯಕ ಪೊಲೀಸ್ ಕಮಿಷನರ್ (ಕೊತ್ವಾಲಿ ನಗರ ಪೊಲೀಸ್ ಠಾಣೆ) ನಿಮಿಷ್ ಪಾಟೀಲ್ ಮಾತನಾಡಿ, ”ಸಾಯಿಉಪ್ವಾನ್ ವ್ಯಾಪ್ತಿಯೊಳಗೆ ಪಿಆರ್‌ವಿ 112 ರ ಇಬ್ಬರು ಪೊಲೀಸರ ವಿರುದ್ಧ ಮಹಿಳೆಯೊಬ್ಬರು ಸೆಪ್ಟೆಂಬರ್ 28 ರಂದು ಆರೋಪ ಮಾಡಿದ್ದಾರೆ. ಪೊಲೀಸರಿಬ್ಬರು ಮಹಿಳೆಯೊಂದಿಗೆ ಅನುಚಿತ ವರ್ತನೆ, ಕಿರುಕುಳ ಮತ್ತು ಅಕ್ರಮ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ” ಎಂದು ತಿಳಿದುಬಂದಿರುವುದಾಗಿ ಹೇಳಿದರು.

”ಘಟನೆಯ ಬಗ್ಗೆ ತಿಳಿದ ನಂತರ ಪೊಲೀಸರು ತಕ್ಷಣ ಸಂಬಂಧಿತ ವಿಭಾಗಗಳಿಗೆ ಅನುಗುಣವಾಗಿ ದೂರು ದಾಖಲಿಸಿದ್ದಾರೆ. ಹೆಚ್ಚಿನ ತನಿಖೆಯಿಂದ PRV 4757ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಅವರಲ್ಲಿ ಒಬ್ಬರು ಕಾನ್‌ಸ್ಟೆಬಲ್ ಮತ್ತು ಇನ್ನೊಬ್ಬರು ಹೋಮ್ ಗಾರ್ಡ್” ಎಂದು ಎಸಿಪಿ ಹೇಳಿದರು.

”ಆರೋಪಿ ಗೃಹರಕ್ಷಕ ದಳದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಲಾಗಿದ್ದು, ಕಾನ್ಸ್‌ಟೇಬಲ್‌ನನ್ನು ಅಮಾನತುಗೊಳಿಸಲಾಗಿದೆ” ಎಂದು ಅಧಿಕಾರಿ ತಿಳಿಸಿದರು.

ಇದನ್ನೂ ಓದಿ: ಉ.ಪ್ರದೇಶ: ದೂರು ನೀಡಲು ಬಂದ ದಲಿತ ಮಹಿಳೆ ಮೇಲೆ ಪೊಲೀಸ್ ಅಧಿಕಾರಿಯಿಂದಲೇ ಅತ್ಯಾಚಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...