Homeಮುಖಪುಟಟಿಎಂಸಿ ನಾಯಕ ಶಹಜಹಾನ್ ಬಂಧನ: 10 ದಿನಗಳ ಕಸ್ಟಡಿ

ಟಿಎಂಸಿ ನಾಯಕ ಶಹಜಹಾನ್ ಬಂಧನ: 10 ದಿನಗಳ ಕಸ್ಟಡಿ

- Advertisement -
- Advertisement -

ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ನಾಯಕ ಶೇಖ್ ಶಹಜಹಾನ್ ಅವರನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ.

ಸಂದೇಶಖಾಲಿಯಲ್ಲಿ ಗ್ರಾಮಸ್ಥರು, ಭೂಹಗರಣ ಮತ್ತು ಲೈಂಗಿಕ ದೌರ್ಜನ್ಯದ ಅನೇಕ ಆರೋಪಗಳನ್ನು ಹೊರಿಸಿರುವ ತೃಣಮೂಲ ಕಾಂಗ್ರೆಸ್‌ ನಾಯಕ ಶೇಖ್ ಶಹಜಹಾನ್‌ಗೆ ಫೆಬ್ರವರಿ 29ರಂದು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ನ್ಯಾಯಾಲಯವು 10 ದಿನಗಳ ಪೊಲೀಸ್ ಕಸ್ಟಡಿ ನೀಡಿದೆ. ಬಂಧನದ ಬೆನ್ನಲ್ಲಿ ಶಹಜಹಾನ್‌ ಅವರನ್ನು ಆರು ವರ್ಷಗಳ ಕಾಲ ತೃಣಮೂಲ ಕಾಂಗ್ರೆಸ್‌ ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಶಹಜಹಾನ್ ಮತ್ತು ಇತರ ಸ್ಥಳೀಯ ತೃಣಮೂಲ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಗ್ರಾಮಸ್ಥರು ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿದ ನಂತರ ಫೆಬ್ರವರಿ ಮೊದಲ ವಾರದಿಂದ ಸಂದೇಶಖಾಲಿ ಕುದಿಯುತ್ತಿದೆ. ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿದ್ದ ತೃಣಮೂಲ ನಾಯಕರಾದ ಶಿಬೋಪ್ರಸಾದ್ ಹಜ್ರಾ ಮತ್ತು ಉತ್ತಮ್ ಸರ್ದಾರ್ ಅವರನ್ನು ಪೊಲೀಸರು ಬಂಧಿಸಿದ್ದರೆ, ಶಹಾಜಹಾನ್ ಅವರು ಇದುವರೆಗೆ ಭದ್ರತಾ ಸಂಸ್ಥೆಗಳಿಂದ ತಪ್ಪಿಸಿಕೊಂಡಿದ್ದರು.

PDS ಹಗರಣಕ್ಕೆ ಸಂಬಂಧಿಸಿದಂತೆ ಜನವರಿ 5ರಂದು ಸಂದೇಶಖಾಲಿಯಲ್ಲಿರುವ ಅವರ ನಿವಾಸದಲ್ಲಿ ಶೋಧ ನಡೆಸುವಾಗ ಅವರ ಬೆಂಬಲಿಗರು ಇಡಿ ತಂಡದ ಮೇಲೆ ದಾಳಿ ಮಾಡಿದ 55 ದಿನಗಳ ನಂತರ ಅವರ ಬಂಧನವಾಗಿದೆ. ಇಡಿ ಉಪನಿರ್ದೇಶಕರು ನೀಡಿದ ದೂರಿನ ಆಧಾರದ ಮೇಲೆ ಪಶ್ಚಿಮ ಬಂಗಾಳ ಪೊಲೀಸ್‌ನ ಅಪರಾಧ ತನಿಖಾ ಇಲಾಖೆ ದಾಳಿಯ ಕುರಿತ ತನಿಖೆಯ ನೇತೃತ್ವವನ್ನು  ವಹಿಸಿಕೊಂಡಿದೆ.

ಪಶ್ಚಿಮ ಬಂಗಾಳ ಪೊಲೀಸ್‌ನ ಹೆಚ್ಚುವರಿ ನಿರ್ದೇಶಕರಾದ(ದಕ್ಷಿಣ ವಿಭಾಗ) ಸುಪ್ರತಿಮ್ ಸರ್ಕಾರ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ನಾವು 2024ರ ಜನವರಿ 5ರಂದು ನಡೆದ ಇಡಿ ಅಧಿಕಾರಿಗಳ ಮೇಲಿನ ದಾಳಿಯ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಶೇಖ್ ಶಹಜಹಾನ್ ಅವರನ್ನು ಮಿನಾಖಾ ಪ್ರದೇಶದ ಬಮನ್‌ಪುಕೂರ್‌ನಿಂದ ಬಂಧಿಸಿದ್ದೇವೆ. ಶಹಜಹಾನ್ ವಿರುದ್ಧ 307 (ಕೊಲೆಗೆ ಯತ್ನ) 353  ಮತ್ತು 326ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಆರೋಪಿಗಳ ಬಂಧನದಲ್ಲಿ ಕಾನೂನು ಅಡೆತಡೆಗಳು ಇವೆ ಎಂದು  ಸರ್ಕಾರ್ ಹೇಳಿದರು, ಮತ್ತು ಒಮ್ಮೆ ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ನಂತರ, ಪೊಲೀಸರು ವ್ಯಾಪಕ ಶೋಧಗಳನ್ನು ನಡೆಸಲು ಪ್ರಾರಂಭಿಸಿದರು. ಇಡಿ ಅರ್ಜಿಯ ನಂತರ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಎಡಿಜಿ ಉಲ್ಲೇಖಿಸಿದ್ದಾರೆ. ನಮಗೆ ಕಾನೂನು ಅಡೆತಡೆಗಳು ಇದ್ದವು ಆದರೆ ‘ಇಡಿ’  ಅವರನ್ನು ಏಕೆ ಬಂಧಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಶಹಜಹಾನ್ ಅವರ ಬಂಧನದ ನಂತರ, ಅವರನ್ನು ಬೆಳಿಗ್ಗೆ 10.40ರ ಸುಮಾರಿಗೆ ಬಸಿರ್ಹತ್‌ನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪೊಲೀಸರು 14 ದಿನಗಳ ಕಸ್ಟಡಿಗೆ ಕೋರಿದರು, ಆದರೆ ನ್ಯಾಯಾಲಯವು 10 ದಿನಗಳ ಕಾಲ ನೀಡಿತು. ಶಹಜಹಾನ್ ಅವರನ್ನು ನಂತರ ಕೋಲ್ಕತ್ತಾದ ಭವಾನಿ ಭವನದಲ್ಲಿರುವ ಪಶ್ಚಿಮ ಬಂಗಾಳದ ಪೊಲೀಸ್ ಪ್ರಧಾನ ಕಚೇರಿಗೆ ಕರೆತರಲಾಗಿದೆ.

ಶಹಜಹಾನ್‌ರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸುವ ಪಕ್ಷದ ನಿರ್ಧಾರವನ್ನು ಪ್ರಕಟಿಸಿದ ತೃಣಮೂಲ ನಾಯಕ ಡೆರೆಕ್ ಓಬ್ರಿಯೆನ್ ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ನಾರಾಯಣ ರಾಣೆ ಅಥವಾ ಹಿಮಂತ ಬಿಸ್ವಾ ಶರ್ಮಾ ಅಥವಾ ಸುವೆಂದು ಅಧಿಕಾರಿಯನ್ನು ನಾಳೆ ಅಮಾನತು ಮಾಡುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ತೃಣಮೂಲ ನಾಯಕತ್ವವು ಆರಂಭದಲ್ಲಿ ಶಹಜಹಾನ್ ಅವರ ಬೆಂಬಲಕ್ಕೆ ನಿಂತಿತ್ತು. ಆದರೆ ಪ್ರತಿಭಟನೆ  ಹೆಚ್ಚಾಗುತ್ತಿದ್ದಂತೆ ಅವರಿಂದ ಅಂತರ ಕಾಯ್ದುಕೊಂಡಿತ್ತು.

ಇದನ್ನು ಓದಿ: ಸುಪ್ರೀಂ ಕೋರ್ಟ್‌ ತೀರ್ಪಿನ 12 ದಿನಗಳ ಬಳಿಕ ಬಾಂಡ್‌ಗಳ ಮುದ್ರಣ ನಿಲ್ಲಿಸಲು ಎಸ್‌ಬಿಐಗೆ ಸೂಚಿಸಿದ್ದ ಹಣಕಾಸು ಸಚಿವಾಲಯ: ವರದಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...