Homeಮುಖಪುಟಸುಪ್ರೀಂ ಕೋರ್ಟ್‌ ತೀರ್ಪಿನ 12 ದಿನಗಳ ಬಳಿಕ ಬಾಂಡ್‌ಗಳ ಮುದ್ರಣ ನಿಲ್ಲಿಸಲು ಎಸ್‌ಬಿಐಗೆ ಸೂಚಿಸಿದ್ದ ಹಣಕಾಸು...

ಸುಪ್ರೀಂ ಕೋರ್ಟ್‌ ತೀರ್ಪಿನ 12 ದಿನಗಳ ಬಳಿಕ ಬಾಂಡ್‌ಗಳ ಮುದ್ರಣ ನಿಲ್ಲಿಸಲು ಎಸ್‌ಬಿಐಗೆ ಸೂಚಿಸಿದ್ದ ಹಣಕಾಸು ಸಚಿವಾಲಯ: ವರದಿ

- Advertisement -
- Advertisement -

ಚುನಾವಣಾ ಬಾಂಡ್‌ಗಳನ್ನು ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ರದ್ದುಗೊಳಿಸಿದ 12 ದಿನಗಳ ನಂತರ ಹಣಕಾಸು ಸಚಿವಾಲಯವು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)ಗೆ ಬಾಂಡ್‌ಗಳ ಮುದ್ರಣವನ್ನು ಔಪಚಾರಿಕವಾಗಿ ತಡೆಹಿಡಿಯಲು ಸೂಚನೆ ನೀಡಿದೆ, ಎನ್ನುವುದು ಆರ್‌ಟಿಐ ಮಾಹಿತಿಯಿಂದ ಬಯಲಾಗಿದೆ.

ಹಣಕಾಸು ಸಚಿವಾಲಯ ಮತ್ತು ಎಸ್‌ಬಿಐ ನಡುವಿನ ಪತ್ರ ವ್ಯವಹಾರ ಮತ್ತು ಇಮೇಲ್‌ಗಳ ಟಿಪ್ಪಣಿಗಳ ಪ್ರಕಾರ, ಈ ಕುರಿತು ಫೆಬ್ರವರಿ 28ರಂದು ಸೂಚನೆಗಳು ಬಂದಿರುವುದನ್ನು ಬಹಿರಂಗಪಡಿಸುತ್ತದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕಳೆದ ವರ್ಷ ನವೆಂಬರ್ 2ರಂದು ಸತತ ವಿಚಾರಣೆಯ ನಂತರ ಸುಪ್ರೀಂ ಕೋರ್ಟ್ ಆರಂಭದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಮೂರು ತಿಂಗಳ ನಂತರ ಅಂದರೆ ಫೆಬ್ರವರಿ 15ರಂದು ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್‌ ಘೋಷಿಸಿದೆ ಮತ್ತು ದೇಣಿಗೆಗಳ ವಿವರಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು.

ಫೆಬ್ರವರಿ 27ರ ಟಿಪ್ಪಣಿಯು 400 ಬುಕ್‌ಲೆಟ್‌ಗಳು ಮತ್ತು 10,000 ಚುನಾವಣಾ ಬಾಂಡ್‌ಗಳನ್ನು ಮುದ್ರಿಸಲು ಆದೇಶಿಸಿರುವುದನ್ನು ತೋರಿಸಿದೆ. ಅಂದರೆ ಎಲೆಕ್ಟೋರಲ್ ಬಾಂಡ್‌ಗಳ ಕುರಿತ ಅಂತಿಮ ತೀರ್ಪಿಗೆ ಮೂರು ದಿನಗಳ ಮೊದಲು ಫೆ. 12ರಂದು ಈ ಆದೇಶವನ್ನು ನೀಡಲಾಗಿದೆ. ಎಲೆಕ್ಟೋರಲ್‌ ಬಾಂಡ್‌ಗಳನ್ನು ಸುಪ್ರೀಂ ಕೋರ್ಟ್‌ ಅಸಂವಿಧಾನಿಕ ಎಂದು ಘೋಷಿಸಿದ ಮೂರು ದಿನಗಳ ಹಿಂದೆ ತಲಾ ರೂ 1 ಕೋಟಿ ಮೌಲ್ಯದ 10,000 ಚುನಾವಣಾ ಬಾಂಡ್‌ಗಳ ಮುದ್ರಣಕ್ಕೆ ಕೇಂದ್ರ ವಿತ್ತ ಸಚಿವಾಲಯವು ಸೆಕ್ಯುರಿಟಿ ಪ್ರಿಂಟಿಂಗ್‌ ಎಂಡ್‌ ಮಿಂಟಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾಗೆ (ಎಸ್‌ಪಿಎಂಸಿಐಎಲ್)‌ ಅಂತಿಮ ಅನುಮೋದನೆ ನೀಡಿತ್ತು ಎಂದು indianexpress.com ವರದಿ ಮಾಡಿದೆ. ಕೇಂದ್ರ ಸರ್ಕಾರದ ಸೂಚನೆ ದೊರೆಯುವ ಮುಂಚೆ ಎಸ್‌ಪಿಎಂಸಿಐಎಲ್‌ 8,350 ಬಾಂಡ್‌ಗಳನ್ನು ಮುದ್ರಿಸಿ ಎಸ್‌ಬಿಐಗೆ ನೀಡಿತ್ತು.

ಇದಾದ ಒಂದು ದಿನದ ನಂತರ, ಎಸ್‌ಬಿಐನ ಬ್ಯಾಂಕಿಂಗ್ ವಿಭಾಗದ ಸಹಾಯಕ ಜನರಲ್ ಮ್ಯಾನೇಜರ್ ‘ಚುನಾವಣಾ ಬಾಂಡ್‌ಗಳ ಮುದ್ರಣವನ್ನು ತಡೆಹಿಡಿಯಿರಿ – ಎಲೆಕ್ಟೋರಲ್ ಬಾಂಡ್ ಸ್ಕೀಮ್ 2018’ ಎಂಬ ಶೀರ್ಷಿಕೆಯ ಮೇಲ್‌ನಲ್ಲಿ ಮುದ್ರಣವನ್ನು ನಿಲ್ಲಿಸಲು ಆದೇಶಗಳನ್ನು ಕಳುಹಿಸಿದ್ದಾರೆ.

ನಾವು 23.02.2024ರ ಒಟ್ಟು 8,350 ಬಾಂಡ್‌ಗಳ ಇಮೇಲ್‌ನ್ನು ಒಳಗೊಂಡಿರುವ ಚುನಾವಣಾ ಬಾಂಡ್‌ಗಳ 4 ಬಾಕ್ಸ್‌ಗಳ ಭದ್ರತಾ ರೂಪಗಳ ಸ್ವೀಕೃತಿಯನ್ನು ಅಂಗೀಕರಿಸಿದ್ದೇವೆ. ಗೌರವಾನ್ವಿತ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆ, ಉಳಿದ 1,650 ಎಲೆಕ್ಟೋರಲ್ ಬಾಂಡ್‌ಗೆ ಮುದ್ರಣವನ್ನು ತಡೆಹಿಡಿಯಲು ನಾವು ನಿಮ್ಮನ್ನು ವಿನಂತಿಸುತ್ತೇವೆ ಎಂದು ಮೇಲ್‌ನಲ್ಲಿ ಹೇಳಲಾಗಿದೆ. ಇದರರ್ಥ ಮುದ್ರಣವನ್ನು ನಿಲ್ಲಿಸುವ ಅಂತಿಮ ಆದೇಶದ ಮೊದಲು, SPMCIL ಈಗಾಗಲೇ ತಲಾ 1 ಕೋಟಿ ಮೌಲ್ಯದ 8,350 ಬಾಂಡ್‌ಗಳನ್ನು ರವಾನಿಸಿದೆ.

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಬಿಜೆಪಿಯು 2018ರಿಂದ ಚುನಾವಣಾ ಬಾಂಡ್‌ಗಳ ಮೂಲಕ 8,251.8 ಕೋಟಿ ರೂ.ಗಳನ್ನು ಪಡೆದಿದೆ, ಈ ಅವಧಿಯಲ್ಲಿ ಮಾರಾಟವಾದ ಒಟ್ಟು ಬಾಂಡ್ ಮೌಲ್ಯದ 16,518 ಕೋಟಿ ರೂ.ಆಗಿದ್ದು, ಒಟ್ಟು ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ನಿಧಿಯಲ್ಲಿ 50% ಬಿಜೆಪಿ ಪಾಲಾಗಿದೆ ಎಂದು ದಾಖಲೆಗಳು ಸೂಚಿಸುತ್ತದೆ.

ಇದನ್ನು ಓದಿ: ದಲಿತ ಮಹಿಳೆಗೆ ಜಾತಿ ನಿಂದನೆಗೈದು ಥಳಿತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...