Homeಮುಖಪುಟನಮ್ಮ ವಿವಾಹಕ್ಕೆ ಕಾನೂನಿನ ಮಾನ್ಯತೆಯಿಲ್ಲ ಹಾಗಾಗಿ ವಿಚ್ಛೇದನದ ಪ್ರಶ್ನೆಯಿಲ್ಲ-ಟಿಎಂಸಿ ಸಂಸದೆ ನುಸ್ರತ್

ನಮ್ಮ ವಿವಾಹಕ್ಕೆ ಕಾನೂನಿನ ಮಾನ್ಯತೆಯಿಲ್ಲ ಹಾಗಾಗಿ ವಿಚ್ಛೇದನದ ಪ್ರಶ್ನೆಯಿಲ್ಲ-ಟಿಎಂಸಿ ಸಂಸದೆ ನುಸ್ರತ್

- Advertisement -
- Advertisement -

ವಿವಾಹ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿರುವ ತೃಣಮೂಲ ಸಂಸದೆ ನುಸ್ರತ್ ಜಹಾನ್ ಬುಧವಾರ ಹೇಳಿಕೆ ನೀಡಿದ್ದು, ನಿಖಿಲ್ ಜೈನ್ ಅವರೊಂದಿಗಿನ ಅವರ ವಿವಾಹವು ಎಂದಿಗೂ ಮಾನ್ಯವಾಗಿಲ್ಲ, ಹಾಗಾಗೀ ವಿಚ್ಛೇದನದ ಪ್ರಶ್ನೆ ಉದ್ಭವಿಸಲ್ಲ ಎಂದು ಹೇಳಿದ್ದಾರೆ.

ಭಾರತದಲ್ಲಿ ಅಂತರ್‌ ಧರ್ಮಿಯ ಮದುವೆಗೆ ವಿಶೇಷ ವಿವಾಹ ಕಾಯ್ದೆಯಡಿ ಮಾನ್ಯತೆಯ ಅಗತ್ಯವಿದೆ. ಆದರೆ ನಮ್ಮ ವಿವಾಹಕ್ಕೆ ಕಾನೂನುಬದ್ಧ ಮಾನ್ಯತೆ ಇಲ್ಲದ ಕಾರಣ ವಿಚ್ಛೇದನದ ಪ್ರಶ್ನೆಯೇ ಇಲ್ಲ. ನಾವು ಬಹಳ ಹಿಂದೆಯೇ ಬೇರೆಯಾಗಿದ್ದೇವೆ. ಆದರೆ ನನ್ನ ಖಾಸಗಿ ಜೀವನದ ವಿಚಾರವನ್ನು ನನ್ನಲ್ಲಿಯೇ ಇಟ್ಟುಕೊಳ್ಳುವ ಉದ್ದೇಶದಿಂದ ನಾನು ಅದರ ಬಗ್ಗೆ ಮಾತನಾಡಲಿಲ್ಲ” ಎಂದು ಸಂಸದೆ ನುಸ್ರತ್ ಹೇಳಿದ್ದಾರೆ.

ನಟಿ, ರಾಜಕಾರಣಿ ನುಸ್ರತ್ ಜಹಾನ್ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ 2019 ರಲ್ಲಿಯೇ ಟರ್ಕಿಯ ಉದ್ಯಮಿ ನಿಖಿಲ್ ಜೈನ್ ಅವರನ್ನು ವಿವಾಹವಾಗಿದ್ದರು. ಕೋಲ್ಕತ್ತಾದಲ್ಲೂ ‌ಆರತಾಕ್ಷತೆ ಸಮಾರಂಭ ನಡೆದಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗವಹಿಸಿದ್ದರು. ಟರ್ಕಿಯ ಮದುವೆ ಕಾಯ್ದೆ ಪ್ರಕಾರ ವಿವಾಹ ಸಮಾರಂಭವನ್ನು ಮಾಡಲಾಗಿತ್ತು ಎಂದು ಸಂಸದೆ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮರಳುಗಾಡಿನಲ್ಲಿ ಬಾಯಾರಿಕೆಗೆ ಬಲಿಯಾದ 5 ವರ್ಷದ ಬಾಲಕಿ

2021 ರ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಟ, ರಾಜಕಾರಣಿ ಯಶ್ ದಾಸ್‌ಗುಪ್ತಾ ಅವರೊಂದಿಗೆ ನುಸ್ರತ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳು ಹಬ್ಬಿದ್ದವು. ಕೆಲವು ದಿನಗಳ ಹಿಂದೆ ನುಸ್ರತ್, ಯಶ್ ದಾಸ್‌ಗುಪ್ತಾ ಅವರ ಮಗುವಿನ ತಾಯಿಯಾಗುತ್ತಿದ್ದಾರೆ ಎಂಬ ಊಹಾಪೋಹಗಳು ಹೆಚ್ಚಾದ ಹಿನ್ನೆಲೆ, ಬರಹಗಾರ್ತಿ ತಸ್ಲೀಮಾ ನಸ್ರೀನ್ ಈ ವದಂತಿಗಳು ನಿಜವಾಗಿದ್ದರೆ, ನುಸ್ರತ್ ನಿಖಿಲ್‌ನಿಂದ ವಿಚ್ಛೇದನ ಪಡೆಯಬೇಕು ಎಂದು ಹೇಳಿದ್ದರು.

ಸದ್ಯ ತನ್ನ ವಿವಾಹದ ಕುರಿತು ಸ್ಪಷ್ಟನೆ ನೀಡಿರುವ ಸಂಸದೆ ನುಸ್ರತ್, “ನನ್ನ ವೈಯಕ್ತಿಕ ಜೀವನದ ಬಗ್ಗೆ ಅಥವಾ ನನಗೆ ಸಂಬಂಧವಿಲ್ಲದ ಯಾರ ಬಗ್ಗೆಯೂ ನಾನು ಎಂದಿಗೂ ಮಾತನಾಡುವುದಿಲ್ಲ. ಹೀಗಾಗಿ, ತಮ್ಮನ್ನು ತಾವು ಸಾಮಾನ್ಯ ಜನರು ಎಂದು ಕರೆದುಕೊಳ್ಳುವವರು ಅವರಿಗೆ ಸಂಬಂಧವಿಲ್ಲದ ಯಾವುದರ ಬಗ್ಗೆಯೂ ಮಾತನಾಡಬಾರದು” ಎಂದು ನುಸ್ರತ್ ಹೇಳಿದ್ದಾರೆ.

ನಿಖಿಲ್ ಜೈನ್ ಕೋಲ್ಕತಾ ಮೂಲದ ಉದ್ಯಮಿಯಾಗಿದ್ದು, ಮದುವೆಗೂ ಒಂದು ವರ್ಷದ ಮೊದಲು ಇಬ್ಬರು ಭೇಟಿಯಾಗಿದ್ದರು. ಇತ್ತೀಚೆಗೆ, ನುಸ್ರತ್ ಗರ್ಭಧಾರಣೆಯ ವದಂತಿಗಳು ಹರಡುತ್ತಿದ್ದಂತೆ, ಕೆಲವು ಸುದ್ದಿ ವಾಹಿನಿಗಳು ನಿಖಿಲ್ ಅವರನ್ನು ಸಂಪರ್ಕಿಸಿದ್ದು, ಹಲವು ತಿಂಗಳುಗಳಿಂದ ಪರಸ್ಪರ ಸಂಪರ್ಕದಲ್ಲಿಲ್ಲದ ಕಾರಣ ನುಸ್ರತ್ ಅವರ ಗರ್ಭಧಾರಣೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.


ಇದನ್ನೂ ಓದಿ: ರೈತ ಹೋರಾಟ ತೀವ್ರಗೊಳಿಸಲು ನಿರ್ಧಾರ: ಮಮತಾ ಬ್ಯಾನರ್ಜಿ ಭೇಟಿಯಾಗಲಿರುವ ರಾಕೇಶ್‌ ಟಿಕಾಯತ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಿಂದೂ ಮಹಾಸಾಗರದಲ್ಲಿ ಇರಾನ್ ನೌಕೆ ಮೇಲೆ ದಾಳಿ: ‘ರಾಜಿ ಮಾಡಿಕೊಂಡ ಪ್ರಧಾನಿ ಕಾರ್ಯತಂತ್ರದ ಸ್ವಾಯತ್ತತೆ ಬಿಟ್ಟುಕೊಟ್ಟರು: ರಾಹುಲ್ ಟೀಕೆ

ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆ ಐರಿಸ್ ದೇನಾದ ಮೇಲೆ ಅಮೆರಿಕಾ ದಾಳಿ ಮಾಡಿದ ಒಂದು ದಿನದ ನಂತರ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ...

ಟ್ರಂಪ್ ಬೆದರಿಕೆಗೆ ಹೆದರದ ಸ್ಪೇನ್ ಪ್ರಧಾನಿ; ಇರಾನ್ ಮೇಲಿನ ದಾಳಿಗೆ ಸೇನಾ ನೆಲೆ ಬಳಸಲು ಅನುಮತಿ ನಿರಾಕರಿಸಿದ ಪೆಡ್ರೊ ಸ್ಯಾಂಚೆಜ್

ಇರಾನ್ ಮೇಲೆ ದಾಳಿ ಮಾಡಲು ಅಮೆರಿಕದ ವಿಮಾನಗಳು ತನ್ನ ನೆಲೆಗಳನ್ನು ಬಳಸಲು ಅನುಮತಿಸಲು ಮ್ಯಾಡ್ರಿಡ್ ನಿರಾಕರಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಟೀಕೆಗಳಿಗೆ ಬುಧವಾರ ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ತಿರುಗೇಟು...

ಭಾರತದಿಂದ ಹಿಂದಿರುಗುತ್ತಿದ್ದ ಯುದ್ಧನೌಕೆ ಮೇಲೆ ಹಠಾತ್ ದಾಳಿ : ಅಮೆರಿಕ ಪಶ್ಚಾತ್ತಾಪ ಪಡಲಿದೆ ಎಂದ ಇರಾನ್

ಭಾರತೀಯ ನೌಕಾಪಡೆಯ ಆಹ್ವಾನದ ಮೇರೆಗೆ ಸಮರಾಭ್ಯಾಸದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಇರಾನ್‌ನ ಅತ್ಯಾಧುನಿಕ ಯುದ್ಧನೌಕೆ ಐಆರ್‌ಐಎಸ್ ದೆನಾ ಮೇಲೆ ಅಮೆರಿಕದ ಜಲಾಂತರ್ಗಾಮಿ ದಾಳಿ ನಡೆಸಿ ಅದನ್ನು ಮುಳುಗಿಸಿದೆ. ಮಾರ್ಚ್ 4ರಂದು ಶ್ರೀಲಂಕಾದ ದಕ್ಷಿಣ ಕರಾವಳಿಯಿಂದ ಸುಮಾರು 40 ನಾಟಿಕಲ್...

ದೆಹಲಿ| ಹೋಳಿ ಹಬ್ಬ ಸಡಗರದಲ್ಲಿ ಕುಡಿದು ವಾಹನ ಚಾಲನೆ; 1,200 ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲು

ಹೋಳಿ ಹಬ್ಬದಂದು ನಗರದಾದ್ಯಂತ ನಡೆಸಿದ ವಿಶೇಷ ಪರಿಶೀಲನೆಯಲ್ಲಿ ದೆಹಲಿ ಸಂಚಾರ ಪೊಲೀಸರು 1,200 ಕ್ಕೂ ಹೆಚ್ಚು ವಾಹನ ಚಾಲಕರ ವಿರುದ್ಧ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ. ಪಶ್ಚಿಮ ವಲಯದಿಂದ ಅತಿ ಹೆಚ್ಚು...

ತಮಿಳುನಾಡು: ಜಾತಿ ಜಗಳದಲ್ಲಿ ದಲಿತ ವ್ಯಕ್ತಿ, ಒಡಿಶಾ ವಲಸೆ ಕಾರ್ಮಿಕನ ಹತ್ಯೆ; ಹಿಂದೆಯೂ ಜಾತಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಆರೋಪಿಗಳು

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ನಂಗುನೇರಿಯಿಂದ ಜಾತಿ ಹಿಂಸಾಚಾರದ ಭಯಾನಕ ಘಟನೆ ವರದಿಯಾಗಿದೆ, ಪೆರುಂಪತ್ತು ಗ್ರಾಮದಲ್ಲಿ ನಡೆದ ಕ್ರೂರ ದಾಳಿಯಲ್ಲಿ ಅಂಗವಿಕಲ ದಲಿತ ವ್ಯಕ್ತಿ ಮತ್ತು ಒಡಿಶಾದ ವಲಸೆ ಕಾರ್ಮಿಕ ಸಾವನ್ನಪ್ಪಿದ್ದಾರೆ.  ಆರೋಪಿಗಳಲ್ಲಿ ಇಬ್ಬರು ಕೆಲವು...

ರಾಜ್ಯಸಭಾ ಚುನಾವಣೆ: ಆರು ಜನರ ಹೆಸರು ಘೋಷಿಸಿದ ಕಾಂಗ್ರೆಸ್; ಸಿಂಘ್ವಿ-ನೇತಮ್ ಮರು ನಾಮನಿರ್ದೇಶನ

ರಾಜ್ಯಸಭೆಗೆ ಮುಂಬರುವ ದ್ವೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್ ಪಕ್ಷ ಆರು ಅಭ್ಯರ್ಥಿಗಳನ್ನು ಘೋಷಿಸಿದೆ. ಇಬ್ಬರು ಹಾಲಿ ಸದಸ್ಯರನ್ನು ಮತ್ತೆ ನಾಮನಿರ್ದೇಶನ ಮಾಡಿದ್ದು, ವಿವಿಧ ರಾಜ್ಯಗಳಿಂದ ಹಲವಾರು ಹೊಸ ಮುಖಗಳನ್ನು ಕಣಕ್ಕಿಳಿಸಿದೆ. ರಾಜ್ಯಸಭಾ ಸದಸ್ಯರಾದ ಅಭಿಷೇಕ್ ಮನು...

ರಾಷ್ಟ್ರ ರಾಜಕಾರಣಕ್ಕೆ ನಿತೀಶ್ ಕುಮಾರ್; ರಾಜ್ಯಸಭೆ ಪ್ರವೇಶ ದೃಢಪಡಿಸಿದ ಬಿಹಾರ ಸಿಎಂ

ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ನಿತೀಶ್ ಕುಮಾರ್, 20 ವರ್ಷಗಳಿಗೂ ಹೆಚ್ಚು ಕಾಲ ತಾವು ಹೊಂದಿದ್ದ ಹುದ್ದೆಗೆ ರಾಜೀನಾಮೆ ನೀಡಿ ರಾಜ್ಯಸಭೆಗೆ ತೆರಳುವುದಾಗಿ ದೃಢಪಡಿಸಿದ್ದಾರೆ. "ನನ್ನ ಸಂಸದೀಯ...

ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ : ಹಲವು ಅಧಿಕಾರಿಗಳ ಮನೆ, ಕಚೇರಿ ಶೋಧ

ರಾಜ್ಯಾದಾದ್ಯಂತ ವಿವಿಧ ಜಿಲ್ಲೆಗಳ ಹಲವು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಗುರುವಾರ (ಮಾ.5) ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರು, ಮೈಸೂರು, ಬಾಗಲಕೋಟೆ, ಮಂಡ್ಯ,...

ಬಾಬಾ ಬುಡನ್‌ಗಿರಿಯಲ್ಲಿ ಸಂಪ್ರದಾಯದಂತೆ ಉರೂಸ್ ನಡೆಸಲು ಅಡ್ಡಿ : ಜಿಲ್ಲಾಡಳಿತದ ದ್ವಿಮುಖ ನೀತಿ ವಿರುದ್ಧ ಪ್ರತಿಭಟನೆ

ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿಯಲ್ಲಿ ಸಂಪ್ರದಾಯದಂತೆ ಉರೂಸ್ ನಡೆಸುವ ಕಾನೂನಾತ್ಮಕ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಲಾಗಿದ್ದು, ಜಿಲ್ಲಾಡಳಿತದ ದ್ವಿಮುಖ ನೀತಿ ವಿರುದ್ದ ಗುರುವಾರ (ಮಾ.5) ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಉರೂಸ್‌ ಸಂದರ್ಭದಲ್ಲಿ ಬಾಬಾ ಬುಡನ್‌ಗಿರಿಯ...

ಟ್ರಂಪ್ ಯುದ್ಧಾಧಿಕಾರಕ್ಕೆ ಬ್ರೇಕ್ ಹಾಕುವ ಪ್ರಯತ್ನಕ್ಕೆ ಹಿನ್ನಡೆ; ಸೆನೆಟ್‌ನಲ್ಲಿ ನಿರ್ಣಯಕ್ಕೆ ಸೋಲು 

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯುದ್ಧಾಧಿಕಾರಕ್ಕೆ ಲಗಾಮು ಹಾಕುವ ನಿರ್ಣಯಕ್ಕೆ ಅಮೆರಿಕ ಸೆನೆಟ್‌ನಲ್ಲಿ (ಸಂಸತ್ತಿನ ಮೇಲ್ಮನೆ) ಸೋಲಾಗಿದೆ. ಇದರಿಂದ ಪ್ರಸ್ತುತ ನಡೆಸುತ್ತಿರುವ ಇರಾನ್ ಮೇಲಿನ ದಾಳಿಯನ್ನು ಇನ್ನಷ್ಟು ಹೆಚ್ಚಿಸಲು ಟ್ರಂಪ್‌ಗೆ ಅನುಮತಿ ಸಿಕ್ಕಂತಾಗಿದೆ....