Homeಮುಖಪುಟಮಾನ್ಸೂನ್‌ ಮಳೆಯ ಆರ್ಭಟಕ್ಕೆ ಮುಂಬೈನಲ್ಲಿ ಜನಜೀವನ ಅಸ್ತವ್ಯಸ್ತ

ಮಾನ್ಸೂನ್‌ ಮಳೆಯ ಆರ್ಭಟಕ್ಕೆ ಮುಂಬೈನಲ್ಲಿ ಜನಜೀವನ ಅಸ್ತವ್ಯಸ್ತ

- Advertisement -
- Advertisement -

ಭಾರತದ ಎಲ್ಲಾ ಭಾಗಗಳಲ್ಲೂ ಮುಂಗಾರು ಮಳೆ ಆರಂಭವಾಗಿದೆ. ಜೂನ್‌ ಮೊದಲ ವಾರದಲ್ಲಿ ಕೇರಳದ ಮೂಲಕ ಭಾರತ ಪ್ರವೇಶಿಸಿದ ಮಾನ್ಸೂನ್ ಈಗ ಕರ್ನಾಟಕ, ಮಹಾರಾಷ್ಟ್ರ ಗುಜರಾತ್‌ ರಾಜ್ಯಗಳಲ್ಲಿ ಉತ್ತಮ ಮಳೆ ಸುರಿಸುತ್ತಿದೆ. ಕರ್ನಾಟಕ ಮತ್ತು ಕೇರಳದಲ್ಲಿ ಮಾನ್ಸೂನ್‌ ಅಬ್ಬರ ಸಾಧರಣವಾಗಿದೆ. ಪಶ್ಚಿಮ ಕರಾವಳಿಯ ಮಹಾನಗರ ಮುಂಬೈನಲ್ಲಿ ನಿನ್ನೆ ಮಂಗಳವಾರ ಜೂನ್‌ 8 ರಿಂದ ಮಾನ್ಸೂನ್‌ ಆರ್ಭಟ ತೀವ್ರಗೊಂಡಿದೆ. ಇಂದು ಬುಧವಾರ ಜೂನ್ 9 ರಂದು ಕೂಡ ಮುಂಬೈ ನಗರ ಮತ್ತು ಸುತ್ತ ಮುತ್ತ ಭಾರಿ ಮಳೆ ಸುರಿದಿದೆ.

ಚಿತ್ರ ಕೃಪೆ : ಕ್ವಿಂಟ್

ಮಾನ್ಸೂನ್‌ ಮಳೆಯ ಪರಿಣಾಮ ಮುಂಬೈನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಅನೇಕ ಜನವಸತಿ ಪ್ರದೇಶಗಳಿಗೂ ನೀರು ನುಗ್ಗಿ ಸಾವಿರಾರು ಜನರು ಎತ್ತರದ ಪ್ರದೇಶಗಳಲ್ಲಿ ರಕ್ಷಣೆ ಪಡೆದಿದ್ದಾರೆ. ಇನ್ನೊಂದೆಡೆ ರಸ್ತೆಗಳು ಕೂಡ ಜಲಾವೃತವಾಗಿದ್ದು ಅನೇಕ ವಾಹನಗಳು ನೀರಿನಲ್ಲಿ ಮುಳುಗಿವೆ. ಮುಂಬೈ ನಗರ ಮತ್ತು ಉಪನಗರಗಳ ಹಲವಾರು ಕಡೆ ವಿದ್ಯತ್‌ ಕಂಬಗಳು ಧರೆಗುರಿಳಿದ್ದು ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ.‌‌

ಚಿತ್ರ ಕೃಪೆ : ಕ್ವಿಂಟ್

ಭಾರಿ ಮಳೆಯಿಂದಾಗಿ ರಸ್ತೆಗಳ ತುಂಬಾ ನೀರು ಹರಿಯುತ್ತಿರುವುದು ವಾಹನಗಳ ಸಂಪರ್ಕಕ್ಕೆ ತೊಡಕಾಗಿದೆ. ಮುಂಬೈ ನಗರದ ಚೆಂಬುರ್‌, ಈಸ್ಟರ್ನ್‌ ಎಕ್ಸ್‌ಪ್ರೆಸ್‌ ವೇ, ದಾದರ್‌ ಕಿಂಗ್‌ ಸರ್ಕಲ್‌, ಸಿಯೋನ್‌ ಮತ್ತು ಜಿಟಿಬಿ ನಗರಗಳಲ್ಲಿ ಭಾರೀ ಮಳೆಯಿಂದಾಗಿ ಗಂಟೆಗಳ ಕಾಲ ಕಿಲೋಮಿಟರ್‌ಗಳ ದೂರ ವಾಹನಗಳು ಸಾಲಾಗಿ ನಿಂತಿವೆ.

ಚಿತ್ರ ಕೃಪೆ : ಕ್ವಿಂಟ್

ಭಾರಿ ಮಳೆಗೆ ರೈಲು ಸಂಚಾರ ಸ್ಥಗಿತ

ಮುಂಬೈನ ಛತ್ರಪತಿ ಶಿವಾಜಿ ಟರ್ಮಿನ್ಸನ್‌ (CSMT) ನಿಂದ ಅನೇಕ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಮುಂಬೈ-ಕುರ್ಲಾ ಮಾರ್ಗದಲ್ಲಿ ಇಂದು ಬೆಳಗ್ಗೆ 10:20 ಗಂಟೆಯಿಂದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸೆಂಟ್ರಲ್‌ ರೈಲ್ವೆ CRPO ತಿಳಿಸಿದ್ದಾರೆ. ಕುರ್ಲಾ, ಚೆಂಬೂರ್‌ ಗಳಲ್ಲಿ ರೈಲ್ವೆ ಹಳಿಗಳ ಮೇಲೆ ಭಾರಿ ಪ್ರಮಾಣದ ನೀರು ನಿಂತಿರುವುದು ರೈಲುಗಳ ಸಂಚಾರವನ್ನು ಆಸಾಧ್ಯಗೊಳಿಸಿದೆ. ಕುರ್ಲಾ ಮಾರ್ಗವಾಗಿ ಮುಂಬೈ ಛತ್ರಪತಿ ಶಿವಾಜಿ ಸ್ಟೇಷನ್‌ ಗೆ ಬರುವ ರೈಲುಗಳನ್ನು ಬೇರೆ ಮಾರ್ಗಗಳಲ್ಲಿ ಸಂಚರಿಸಲು ಸೂಚಿಸಲಾಗಿದೆ ಎಂದು ಸೆಂಟ್ರಲ್‌ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯು ಮಂಗಳವಾರ ಜೂನ್‌ 8 ರ ಮುಂಜಾನೆ 8:30 ಗಂಟೆಯಿಂದ ಬುಧವಾರ 8:30 ನಿಮಿಷದ ಅವಧಿಯಲ್ಲಿ ಕೊಲಾಬಾ ಒಂದರಲ್ಲೇ 65.4 ಮಿಲಿಮೀಟರ್‌ ಮಳೆಯಾಗಿದೆಯೆಂದು ವರದಿಯಾಗಿದೆ. ಇದೇ ವೇಳೆಯಲ್ಲಿ ಸಾಂತಾಕ್ರೂಝ್‌ನಲ್ಲಿ 50 ಮಿಲಿಮೀಟರ್‌ ಮಳೆಯಾಗಿದೆ.

4.16 ಮೀಟರ್‌ ಎತ್ತರದ ಅಲೆಗಳು ಸಮದ್ರದಲ್ಲಿ ಕಾಣಿಸಿಕೊಳ್ಳಲಿವೆ. ಮೀನುಗಾರರು ಮತ್ತು ಇತರರು ಯಾರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮುಂಬೈ, ಪುಣೆ, ಸೇರಿ ಮಹಾರಾಷ್ಟ್ರದ ನಗರಗಳಲ್ಲಿ ಮುಂದಿನ 4 ದಿನಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.‌


ಇದನ್ನೂ ಓದಿ :ಉತ್ತರ ಪ್ರದೇಶ: ಹಿಂದೊಮ್ಮೆ ರಾಹುಲ್‍ ಗಾಂಧಿಗೆ ನಿಕಟವಾಗಿದ್ದ ಜಿತಿನ್‍ ಪ್ರಸಾದ ಬಿಜೆಪಿ ಸೇರ್ಪಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...