Homeಮುಖಪುಟಸಿಂಹಗಳ ಜೋಡಿಗೆ ಅಕ್ಬರ್-ಸೀತಾ ನಾಮಕರಣ ವಿವಾದ: ಹಿರಿಯ ಅರಣ್ಯಾಧಿಕಾರಿ ಅಮಾನತು

ಸಿಂಹಗಳ ಜೋಡಿಗೆ ಅಕ್ಬರ್-ಸೀತಾ ನಾಮಕರಣ ವಿವಾದ: ಹಿರಿಯ ಅರಣ್ಯಾಧಿಕಾರಿ ಅಮಾನತು

- Advertisement -
- Advertisement -

ಸಿಂಹಗಳ ಜೋಡಿಯ ನಾಮಕರಣ ವಿವಾದದ ಬೆನ್ನಲ್ಲಿ ಅಕ್ಬರ್ ಮತ್ತು ಸೀತಾ ಎಂದು ಸಿಂಹಗಳ ಜೋಡಿಗೆ ನಾಮಕರಣವನ್ನು ಮಾಡಿದ್ದ ವಿವಾದಕ್ಕೆ ಸಂಬಂಧಿಸಿ ತ್ರಿಪುರಾ ರಾಜ್ಯ ಸರ್ಕಾರವು, ಮುಖ್ಯ ವನ್ಯಜೀವಿ ವಾರ್ಡನ್ ಪ್ರಬಿನ್ ಲಾಲ್ ಅಗರವಾಲ್ ಅವರನ್ನು ಫೆಬ್ರವರಿ 24 ರಂದು ಅಮಾನತುಗೊಳಿಸಿದ್ದಾರೆ.

ಸಂಭಾವ್ಯ ಧಾರ್ಮಿಕ ವಿವಾದಗಳನ್ನು ಉಂಟುಮಾಡಲು ಅಕ್ಬರ್ ಮತ್ತು ಸೀತೆಯ ಹೆಸರನ್ನು ಸಿಂಹಗಳಿಗೆ ಏಕೆ ಇಡಲಾಗಿದೆ ಎಂದು ಕೋಲ್ಕತ್ತಾ ಹೈಕೋರ್ಟ್ ಕೇಳಿದ ನಂತರ ಈ ಬೆಳವಣಿಗೆ ನಡೆದಿದೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷವಾದ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ ಸಮ್ಮಿಶ್ರ ಸರಕಾರ ಅಗರವಾಲ್ ಅವರನ್ನು ಅಮಾನತು ಮಾಡಿದೆ ಎಂದು ದಿ ವೈರ್‌ ವರದಿ ತಿಳಿಸಿದೆ.

ಸಿಲಿಗುರಿಯಲ್ಲಿರುವ ಬಂಗಾಳ ಸಫಾರಿ ಪಾರ್ಕ್‌ಗೆ ಫೆಬ್ರವರಿ 12ರಂದು ತ್ರಿಪುರಾದ ಸೆಪಹಿಜಲಾ ಝುವೊಲಾಜಿಕಲ್‌ ಪಾರ್ಕಿನಿಂದ ಎರಡು ಸಿಂಹಗಳನ್ನು ತರಲಾಗಿತ್ತು. ಅವುಗಳಲ್ಲಿ ಒಂದಕ್ಕೆ ʼಅಕ್ಬರ್‌ʼ ಎಂದು ಹೆಸರನ್ನಿಡಲಾಗಿದ್ದರೆ, ಇನ್ನೊಂದಕ್ಕೆ ಸೀತಾ ಎಂಬ ಹೆಸರನ್ನಿಡಲಾಗಿದೆ. ಈ 7 ವರ್ಷದ ʼಅಕ್ಬರ್‌ ಮತ್ತು 5 ವರ್ಷದ ಸೀತಾ ಸಿಂಹದ ಜೋಡಿಯನ್ನು ಒಂದೇ ಕಡೆ ಅಧಿಕಾರಿಗಳು ಇರಿಸಿದ್ದಾರೆ. ಇದನ್ನು ಪ್ರಶ್ನಿಸಿ ವಿಶ್ವ ಹಿಂದೂ ಪರಿಷತ್‌ ಕೋಲ್ಕತಾ ಹೈಕೋರ್ಟ್‌ ಮೊರೆ ಹೋಗಿದೆ. ಇದು ಹಿಂದೂ ಧರ್ಮಕ್ಕೆ ಅವಮಾನ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಕೋಲ್ಕತ್ತ ಉಚ್ಚ ನ್ಯಾಯಾಲಯದ ಜಲ್‌ ಪಾಯ್‌ಗುರಿ ಸರ್ಕ್ಯೂಟ್‌ ಪೀಠಕ್ಕೆ ವಿಶ್ವಹಿಂದೂ ಪರಿಷತ್‌ ಅರ್ಜಿಯನ್ನು ಸಲ್ಲಿಸಿತ್ತು. ಈ ಕುರಿತು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಗತಾ ಭಟ್ಟಾಚಾರ್ಯ ಅವರ ಕಲ್ಕತ್ತಾ ಹೈಕೋರ್ಟ್‌ ಪೀಠವು ‘ಅಕ್ಬರ್ ಮತ್ತು ಸೀತಾ’ ಸಿಂಹಗಳ ಹೆಸರು ಬದಲಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ.

1994ರ ಬ್ಯಾಚ್‌ನ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರಬಿನ್ ಲಾಲ್ ಅಗರವಾಲ್ ಅವರು ಸಿಂಹಗಳ ಜೋಡಿಯನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸುವ ಮೊದಲು ಜೋಡಿಯ ಹೆಸರನ್ನು ಅಕ್ಬರ್ ಮತ್ತು ಸೀತಾ ಎಂದು ದಾಖಲಿಸಿದ್ದರು. ಅಗರವಾಲ್ ಅವರು ತ್ರಿಪುರಾದ ಮುಖ್ಯ ವನ್ಯಜೀವಿ ವಾರ್ಡನ್ ಆಗಿದ್ದು, ರಾಜ್ಯ ಅರಣ್ಯ ಇಲಾಖೆಯ ಉನ್ನತ ಉದ್ಯೋಗಿಗಳಲ್ಲಿ ಒಬ್ಬರಾಗಿದ್ದರು. ಅವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿದ್ದರು.

ಫೆಬ್ರವರಿ 16ರಂದು ಸ್ಥಳೀಯ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಿಂಹಗಳ ಜೋಡಿಯನ್ನು ಅಕ್ಬರ್ ಮತ್ತು ಸೀತಾ ಎಂದು ಹೆಸರಿಸುವುದರ ಕುರಿತು ಕೋಲ್ಕತ್ತಾ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ವಿಎಚ್‌ಪಿ ಜಿಲ್ಲಾ ಮುಖ್ಯಸ್ಥ ದುಲಾಲ್ ಚಂದ್ರ ರೇ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ನಾಮಕರಣವು ಹಿಂದೂ ಧರ್ಮದ ಮೇಲಿನ ದಾಳಿ, ಅಕ್ಬರ್ ಎಂಬುದು ಮೊಘಲ್ ಚಕ್ರವರ್ತಿಯ ಹೆಸರು ಮತ್ತು ಸೀತಾ ಹಿಂದೂ ಮಹಾಕಾವ್ಯ ರಾಮಾಯಣದಲ್ಲಿ ಒಂದು ಪಾತ್ರವಾಗಿದೆ, ಇದನ್ನು ಹಿಂದೂ ಧರ್ಮದಲ್ಲಿ ದೇವತೆಯಾಗಿ ಪೂಜಿಸಲಾಗುತ್ತದೆ ಎಂದು ಹೇಳಿದ್ದರು. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ವಿವಾದವನ್ನು ತಪ್ಪಿಸಬಹುದಿತ್ತು ಎಂದು ಹೇಳಿದೆ.

ವರದಿಯ ಪ್ರಕಾರ, ತ್ರಿಪುರಾ ಸರ್ಕಾರವು ಅಗರವಾಲ್ ಅವರಿಂದ ಸ್ಪಷ್ಟೀಕರಣವನ್ನು ಕೇಳಿದೆ ಮತ್ತು ಅವರು ಜೋಡಿಗೆ ಅಕ್ಬರ್ ಮತ್ತು ಸೀತಾ ಎಂದು ಹೆಸರಿಸಿರುವುದನ್ನು ನಿರಾಕರಿಸಿದ್ದಾರೆ. ಆದರೆ ತ್ರಿಪುರಾದಲ್ಲಿನ ವನ್ಯಜೀವಿ ಅಧಿಕಾರಿಗಳು ಸಿಂಹದ ಜೋಡಿಯ ಹೆಸರುಗಳನ್ನು ಬದಲಾಯಿಸಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಇದನ್ನು ಓದಿ: ಅಕ್ಬರ್-ಸೀತಾ ಸಿಂಹಗಳ ಹೆಸರು ಬದಲಿಸಲು ಹೈಕೋರ್ಟ್ ಸೂಚನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...