ಟಿಆರ್‌ಪಿ ತಿರುಚುವುದಕ್ಕಾಗಿ ಬಾರ್ಕ್‌ನ ಮಾಜಿ ಮುಖ್ಯಸ್ಥನಿಗೆ 12 ಸಾವಿರ ಡಾಲರ್ ಮತ್ತು 40 ಲಕ್ಷ ರೂ. ಗಳನ್ನು ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಾಬ್ ಗೋಸ್ವಾಮಿಯು ನೀಡಿದ್ದಾರೆಂದು ಇತ್ತೀಚೆಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು. ಈ ವರದಿಯನ್ನು ವಿರೋಧಿಸಿರುವ ರಿಪಬ್ಲಿಕ್ ಟಿವಿ, ಮಾಧ್ಯಮ ವಿಚಾರಣೆ ನಡೆಸುತ್ತಿದ್ದೀರಿ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ಕಾನೂನು ನೋಟಿಸ್ ರವಾನಿಸಿದೆ.
ಕಾನೂನು ನೋಟಿಸ್‌ನಲ್ಲಿ, “ಲಂಚ ನೀಡಿದ ಆರೋಪವು ಟಿಆರ್‌ಪಿ ಹಗರಣದಲ್ಲಿ ಮುಂಬೈ ಪೊಲೀಸರು ಸಲ್ಲಿಸಿರುವ ಪೂರಕ ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ. ಆದರೆ ಇದಕ್ಕೆ ಸ್ಪಷ್ಟ ಪುರಾವೆಗಳಿಲ್ಲ. ಹೀಗಿದ್ದರೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೋದ್ಯಮ ನೀತಿಗಳನ್ನು ಉಲ್ಲಂಘಿಸಿ ನ್ಯಾಯಾಧೀಶರಂತೆ, ತೀರ್ಪುಗಾರರಂತೆ, ಮರಣದಂಡನೆ ನೀಡುವವರಂತೆ ವರ್ತಿಸಿದ್ದೀರಿ. ಲೇಖನದ ಶೀರ್ಷಿಕೆ ದುರುದ್ದೇಶಪೂರಿತ ಮತ್ತು ಕುಚೇಷ್ಟೆಯದ್ದಾಗಿದೆ’’ ಎಂದು ಹೇಳಿದೆ.
ಇದನ್ನೂ ಓದಿ: ರೇಟಿಂಗ್ ಹೆಚ್ಚಿಸಲು ಅರ್ನಾಬ್ 12,000 ಡಾಲರ್ ಮತ್ತು 40 ಲಕ್ಷ ರೂ ಪಾವತಿಸಿದ್ದಾರೆ: ಪಾರ್ಥೋ ದಾಸ್‌ಗುಪ್ತಾ
“ಬಾರ್ಕ್‌ನ ಮಾಜಿ ಮುಖ್ಯಸ್ಥ ಪಾರ್ಥೊ ದಾಸ್‌ಗುಪ್ತಾರಿಂದ ಮುಂಬೈ ಪೊಲೀಸರು ಒತ್ತಾಯಪೂರ್ವಕವಾಗಿ ಮತ್ತು ಬಲವಂತದಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಈ ಹೇಳಿಕೆಯನ್ನು ಪಾರ್ಥೋ ದಾಸ್‌ಗುಪ್ತ ಕೂಡಾ ನಿರಾಕರಿಸಿದ್ದಾರೆ. ಆದರೆ, ಹೇಳಿಕೆಯನ್ನು ಪುರಾವೆಯಾಗಿ ಪರಿಗಣಿಸಲಾಗದು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಉಲ್ಲೇಖಿಸಿಲ್ಲ” ಎಂದು ನೋಟಿಸ್ ಹೇಳಿದೆ.
“ರಿಪಬ್ಲಿಕ್ ಟಿವಿಯ ಘನತೆಗೆ ಕುಂದುಂಟು ಮಾಡಲು ಪತ್ರಿಕೆ ಪ್ರಯತ್ನಿಸುತ್ತಿದೆ. ಪತ್ರಿಕೆಯಲ್ಲಿ ಪ್ರಕಟವಾದ ವರದಿಯು ಪತ್ರಿಕೆ ನಡೆಸುತ್ತಿರುವ ಅಪಪ್ರಚಾರ ಅಭಿಯಾನದ ಭಾಗವಾಗಿದ್ದು ರಿಪಬ್ಲಿಕ್ ಟಿವಿ ಮತ್ತು ರಿಪಬ್ಲಿಕ್ ನೆಟ್‌ವರ್ಕ್‌ನ ಖ್ಯಾತಿಯನ್ನು ಸರಿಪಡಿಸಲಾರದಷ್ಟು ನಾಶಮಾಡುವ ಪ್ರಯತ್ನ ಹೊಂದಿದೆ” ಎಂದು ಉಲ್ಲೇಖಿಸಲಾಗಿದೆ.
“ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ 24 ಗಂಟೆಯೊಳಗೆ ಬೇಷರತ್ ಕ್ಷಮೆ ಯಾಚಿಸಬೇಕು ಮತ್ತು ರಿಪಬ್ಲಿಕ್ ಟಿವಿ ಚಾನೆಲ್‌ನ ವಿರುದ್ಧ ಸುಳ್ಳು ಹಾಗೂ ಆಧಾರರಹಿತ ವರದಿ ಪ್ರಕಟಿಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೆವೆ” ಎಂದು ಕಾನೂನು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಸುಶಾಂತ್ ಸಿಂಗ್ ರಾಜಪೂತ್ ಸಾವಿನ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿಯನ್ನು ರಿಪಬ್ಲಿಕ್ ಟಿವಿಯು ಮಾಧ್ಯಮ ವಿಚಾರಣೆ ನಡೆಸುತ್ತಿದೆ ಎಂದು ಹಲವಾರು ಜನರು ಆರೋಪಿಸಿದ್ದರು.
ಇದನ್ನೂ ಓದಿ: ಸೇನಾ ರಹಸ್ಯ ಬಹಿರಂಗ: ಅರ್ನಾಬ್‌ನನ್ನು ಮತ್ತೆ ಅರೆಸ್ಟ್ ಮಾಡುತ್ತಾ ಮಹಾಸರ್ಕಾರ?
ತಾನೇ ತೋಡಿದ ಹಳ್ಳಕ್ಕೆ ಬೀಲುತ್ತಿರುವ ರಿಪಬ್ಲಿಕ್ ಟಿವಿ