Homeಮುಖಪುಟರವಿಶಂಕರ್ ಪ್ರಸಾದ್ ಟ್ವಿಟ್ಟರ್ ಖಾತೆಯ ನಂತರ ಶಶಿ ತರೂರ್ ಖಾತೆಗೂ ತಾತ್ಕಾಲಿಕ ನಿರ್ಬಂಧ

ರವಿಶಂಕರ್ ಪ್ರಸಾದ್ ಟ್ವಿಟ್ಟರ್ ಖಾತೆಯ ನಂತರ ಶಶಿ ತರೂರ್ ಖಾತೆಗೂ ತಾತ್ಕಾಲಿಕ ನಿರ್ಬಂಧ

- Advertisement -
- Advertisement -

ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ರವಿಶಂಕರ್ ಪ್ರಸಾದ್ ಅವರ ಟ್ವಿಟ್ಟರ್ ಖಾತೆಯ ಬೆನ್ನಲ್ಲೇ ಕಾಂಗ್ರೆಸ್‌ ಸಂಸದ ಮತ್ತು ಮಾಜಿ ಸಚಿವ ಶಶಿ ತರೂರ್ ಅವರ ಖಾತೆಯನ್ನೂ ಟ್ವಿಟ್ಟರ್ ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಕಾಪಿ ರೈಟ್ ಕಾರಣಕ್ಕೆ ಶಶಿ ತರೂರ್ ಅವರ ಟ್ವೀಟ್ ಒಂದನ್ನು ಟ್ಟಿಟ್ಟರ್ ತಡೆಹಿಡಿದಿದೆ.

ಈ ಸಂಬಂಧ ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿರುವ ಶಶಿ ತರೂರ್ ಏಕಾಏಕಿ ಟ್ವಿಟ್ಟರ್ ನನ್ನ ಖಾತೆಯನ್ನು ಬಳಸದಂತೆ ಬ್ಲಾಕ್ ಮಾಡಿದೆ. ನಾನು ರೆಸಪ್ಟಿನ್ ಎಂಬ ಹಾಡನ್ನು ಟ್ವೀಟ್ ಮಾಡಿದ್ದೆ. ಆದರೆ DMCA ನಿಯಮಗಳ ಅನುಸಾರ ನನ್ನ ಖಾತೆಯನ್ನು ನಿರ್ಬಂಧಿಸಿರುವುದಾಗಿ ಟ್ವಿಟ್ಟರ್ ಕಾರಣವನ್ನು ನೀಡಿದೆ. ಏಕಾಏಕಿ DMCA ಅತಿಯಾದ ನಿಬಂಧನೆಗಳು ಮತ್ತು ನಿರ್ಬಂಧಗಳನ್ನು ವಿಧಿಸುತ್ತಿದೆ ಎಂದು ಶಶಿ ತರೂರ್ ತಿಳಿಸಿದ್ದಾರೆ.

ಶಶಿ ತರೂರ್ ಅವರು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸದೀಯ ಸಮಿತಿ ಅಧ್ಯಕ್ಷರಾಗಿದ್ದು, ಸರ್ಕಾರದ ಹೊಸ ಕಾನೂನುಗಳ ಪಾಲನೆ ವಿಚಾರದಲ್ಲಿ ಟ್ವಿಟ್ಟರ್ ವಿರುದ್ಧ ವಿಚಾರಣೆಯನ್ನು ಸಂಸದೀಯ ಸಮಿತಿ ನಡೆಸುತ್ತಿದೆ.

ನಾನು ಸಂಸದೀಯ ಸಮಿತಿಯ ಅಧ್ಯಕ್ಷನಾಗಿ ಸಚಿವ ರವಿ ಶಂಕರ್ ಪ್ರಸಾದ್ ಮತ್ತು ತಮ್ಮ ಖಾತೆಯ ಮೇಲಿನ ತಾತ್ಕಾಲಿಕ ನಿರ್ಬಂಧಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ಇಂಡಿಯಾದಿಂದ ವಿವರಣೆಯನ್ನು ಪಡೆಯುವುದಾಗಿ ಶಶಿ ತರೂರ್ ತಿಳಿಸಿದ್ದಾರೆ.

ತಮ್ಮ ಖಾತೆಯ ಮೇಲಿನ ತಾತ್ಕಾಲಿಕ ನಿರ್ಬಂಧ IT ಕಾನೂನುಗಳಿಗೆ ವಿರುದ್ಧವಾಗಿದೆ. ಟ್ವಿಟ್ಟರ್ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್ ತಿಳಿಸಿದ್ದಾರೆ.


ಇದನ್ನೂ ಓದಿ :ಕಾನೂನು ಉಲ್ಲಂಘನೆ: ಸಚಿವ ರವಿಶಂಕರ್‌ ಪ್ರಸಾದ್ ಟ್ವಿಟರ್‌ ಅಕೌಂಟ್‌ಗೆ ಒಂದು ಗಂಟೆ ನಿರ್ಬಂಧ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...