Homeಅಂತರಾಷ್ಟ್ರೀಯಚೀನಾದ 1.7 ಲಕ್ಷ ಖಾತೆಗಳನ್ನು ಸ್ಥಗಿತಗೊಳಿಸಿದ ಟ್ವಿಟ್ಟರ್‌: ಕಾರಣವೇನು?

ಚೀನಾದ 1.7 ಲಕ್ಷ ಖಾತೆಗಳನ್ನು ಸ್ಥಗಿತಗೊಳಿಸಿದ ಟ್ವಿಟ್ಟರ್‌: ಕಾರಣವೇನು?

- Advertisement -
- Advertisement -

ಚೀನಾದ ಸರ್ಕಾರಕ್ಕೆ ಅನುಕೂಲಕರವಾಗಿ “ಭೌಗೋಳಿಕ ರಾಜಕೀಯ ನಿರೂಪಣೆಗಳನ್ನು ಹರಡಿದ್ದಕ್ಕಾಗಿ” ಅಲ್ಲಿನ 1,70,000 ಖಾತೆಗಳನ್ನು ಸ್ಥಗಿತಗೊಳಿಸಿದೆ ಎಂದು ಟ್ವಿಟ್ಟರ್ ಗುರುವಾರ ಪ್ರಕಟಿಸಿದೆ.

ಸಿಎನ್‌ಎನ್ ಪ್ರಕಾರ, ಟ್ವಿಟರ್‌ನೊಂದಿಗೆ ಕೆಲಸ ಮಾಡುವ ತಜ್ಞರು ಈ ಖಾತೆಗಳು ಹಾಂಗ್ ಕಾಂಗ್ ಪ್ರತಿಭಟನೆಗಳು, ಕೋವಿಡ್‌-19 ಮತ್ತು ಇತರ ವಿಷಯಗಳ ಸುತ್ತ ಮೋಸಗೊಳಿಸುವ ನಿರೂಪಣೆಗಳನ್ನು ನೀಡುತ್ತಿವೆ ಎಂದು ಆರೋಪಿಸಿದ್ದಾರೆ.

ಈ ಖಾತೆಗಳು “ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾಕ್ಕೆ ಅನುಕೂಲಕರವಾದ ಭೌಗೋಳಿಕ ರಾಜಕೀಯ ನಿರೂಪಣೆಗಳನ್ನು ಹರಡುತ್ತಿವೆ” ಎಂದು ಕಂಪನಿ ಹೇಳಿದೆ. ಅದು ಟ್ವಿಟ್ಟರ್‌ನ ಮ್ಯಾನಿಪುಲೇಶನ್ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವುಗಳನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದೆ.

ಚೀನಾದಲ್ಲಿ ಟ್ವಿಟ್ಟರ್ ಅನ್ನು ಅಧಿಕೃತವಾಗಿ ನಿರ್ಬಂಧಿಸಲಾಗಿದೆ, ಆದರೂ ದೇಶದ ಅನೇಕ ಜನರು ವಿಪಿಎನ್ ಬಳಸಿ ಅದನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.

ಚೀನಾದ ಈ ಅಭಿಯಾನದ ಗುರಿಗಳಲ್ಲಿ ಸಾಗರೋತ್ತರ ಚೀನಿಯರು ಪಕ್ಷ-ರಾಜ್ಯದ ಪ್ರಭಾವವನ್ನು ವಿಸ್ತರಿಸುವ ಸಾಮರ್ಥ್ಯವನ್ನು ಬಳಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ಆಸ್ಟ್ರೇಲಿಯನ್ ಸ್ಟ್ರಾಟೆಜಿಕ್ ಪಾಲಿಸಿ ಇನ್ಸ್ಟಿಟ್ಯೂಟ್ ತಿಳಿಸಿದ್ದು, ಅದರ ಒಂದು ಗುಂಪು ಟ್ವಿಟ್ಟರ್ ಖಾತೆಗಳನ್ನು ವಿಶ್ಲೇಷಿಸಲು ಕೆಲಸ ಮಾಡಿದೆ. ಈ ಖಾತೆಗಳು ಪ್ರಧಾನವಾಗಿ ಚೀನೀ ಭಾಷೆಗಳಲ್ಲಿ ವ್ಯವಹರಿಸಿದೆ ಎಂದು ಟ್ವಿಟರ್ ಹೇಳಿದೆ.

ಸ್ಟ್ಯಾನ್‌ಫೋರ್ಡ್ ಇಂಟರ್ನೆಟ್ ಅಬ್ಸರ್ವೇಟರಿಯ ಸಂಶೋಧನಾ ವ್ಯವಸ್ಥಾಪಕ ರೆನೀ ಡಿರೆಸ್ಟಾ, ಈ ಖಾತೆಗಳನ್ನು ಜನವರಿಯಲ್ಲಿ ಸ್ಥಾಪಿಸಲಾಗಿದೆ ಮತ್ತು ಕೋವಿಡ್ -19 ಬಗ್ಗೆ ಪೋಸ್ಟ್ ಮಾಡುವಲ್ಲಿ ನಿರತರಾಗಿದ್ದಾರೆ ಎಂದು ಹೇಳಿದ್ದಾರೆ. “ಈ ಖಾತೆಗಳು ಕೋವಿಡ್ -19 ವೈರಸ್‌ಗೆ ಚೀನಾದ ಪ್ರತಿಕ್ರಿಯೆಯನ್ನು ಶ್ಲಾಘಿಸಿವೆ. ಜೊತೆಗೆ ಯು.ಎಸ್ ಮತ್ತು ಹಾಂಗ್ ಕಾಂಗ್ ಕಾರ್ಯಕರ್ತರನ್ನು ದ್ವೇಷಿಸಲು ಸಾಂಕ್ರಾಮಿಕ ರೋಗವನ್ನು ಬಳಸಿಕೊಂಡಿವೆ ಎನ್ನಲಾಗಿದೆ”.

ಅವುಗಳಲ್ಲಿ 23,750 ಖಾತೆಗಳನ್ನು “ಹೆಚ್ಚು ತೊಡಗಿಸಿಕೊಂಡಿರುವ ಕೋರ್ ನೆಟ್‌ವರ್ಕ್” ಎಂದು ಗುರುತಿಸಲಾಗಿದೆ. ಇವು ಪ್ರಧಾನವಾಗಿ ಚೀನಾಕ್ಕೆ ಅನುಕೂಲಕರವಾದ ವಿಷಯವನ್ನು ಟ್ವೀಟ್ ಮಾಡುತ್ತವೆ. ಉಳಿದ ಇನ್ನೂ 150,000 ಖಾತೆಗಳು ಅವುಗಳನ್ನು ರೀಟ್ವೀಟ್‌ ಮಾಡಲು ಬಳಸಲಾಗುತ್ತಿತ್ತು ಎನ್ನಲಾಗಿದೆ.

23,750 ಖಾತೆಗಳು ಒಟ್ಟಾರೆಯಾಗಿ 3,48,608 ಬಾರಿ ಟ್ವೀಟ್ ಮಾಡಿವೆ ಎಂದು ಸ್ಟ್ಯಾನ್‌ಫೋರ್ಡ್ ಸಂಶೋಧಕರು ತಿಳಿಸಿದ್ದಾರೆ.

ಆಗಸ್ಟ್ 2019 ರಲ್ಲಿ, ಟ್ವಿಟರ್ “ಉದ್ದೇಶಪೂರ್ವಕವಾಗಿ ಮತ್ತು ನಿರ್ದಿಷ್ಟವಾಗಿ ಹಾಂಗ್ ಕಾಂಗ್‌ನಲ್ಲಿನ ರಾಜಕೀಯ ಭಿನ್ನಾಭಿಪ್ರಾಯವನ್ನು ಬಿತ್ತುವ ಪ್ರಯತ್ನಕ್ಕಾಗಿ” ಚೀನಾದ ಮುಖ್ಯ ಭೂಭಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ನಂಬಲಾದ ಸುಮಾರು 1,000 ಖಾತೆಗಳನ್ನು ತೆಗೆದುಹಾಕಿತ್ತು.


ಇದನ್ನೂ ಓದಿ: ಬಾಯ್ಕಟ್ ಚೀನಾ ಎಂಬ ಮಕ್ಕಳಾಟ: ಪ್ರಪಂಚವನ್ನು ಚೀನಾ ಆವರಿಸುತ್ತಿವುದು ಬಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...