Homeಮುಖಪುಟಮೋದಿ 100ನೇ 'ಮನ್ ಕಿ ಬಾತ್‌'ಗೆ ಸಂಸದೆ ಮೊಯಿತ್ರಾಯಿಂದ ಎರಡು ಪ್ರಶ್ನೆ

ಮೋದಿ 100ನೇ ‘ಮನ್ ಕಿ ಬಾತ್‌’ಗೆ ಸಂಸದೆ ಮೊಯಿತ್ರಾಯಿಂದ ಎರಡು ಪ್ರಶ್ನೆ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ ”ಮನ್ ಕಿ ಬಾತ್”ನ 100ನೇ ಸಂಚಿಕೆಯು ಇಂದು (ಏಪ್ರಿಲ್ 30ರ ಭಾನುವಾರದಂದು) ಪ್ರಸಾರವಾಗಲಿದೆ. ಈ 100ನೇ ಸಂಚಿಕೆಯು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನೇರ ಪ್ರಸಾರವಾಗಲಿದೆ, ಈ ನಡುವೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಒಂದೆರಡು ಪ್ರಶ್ನೆಗಳಿಗೆ ಉತ್ತರಿಸುವಂತೆ ಪ್ರಧಾನಿ ಮೋದಿ ಅವರನ್ನು ಕೇಳಿದ್ದಾರೆ.

”ಭಾರತದ ಮಹಿಳಾ ಕ್ರಿಡಾಪಟುಗಳನ್ನು ”ಬಿಜೆಪಿಯ ಪರಭಕ್ಷಕರಿಂದ” ಏಕೆ ರಕ್ಷಿಸಲು ಸಾಧ್ಯವಿಲ್ಲ?, ಸೆಬಿ ಅದಾನಿ ಅವರ ತನಿಖೆಯನ್ನು ಸುಪ್ರೀಂ ಕೋರ್ಟ್‌ನ ಕಾಲಮಿತಿ ಅಂದರೆ ಎರಡು ತಿಂಗಳೊಳಗೆ ಏಕೆ ಪೂರ್ಣಗೊಳಿಸಲು ಸಾಧ್ಯವಿಲ್ಲ?” ಎಂದು ಟ್ವಿಟರ್‌ನಲ್ಲಿ ಮೊಯಿತ್ರಾ ಪ್ರಧಾನಿ ಮೋದಿಗೆ ಕೇಳಿದ್ದಾರೆ.

ಈ ವಿಷಯದ ಬಗ್ಗೆ ಸೆಬಿಗೆ ಪತ್ರ ಬರೆದಿದ್ದೆ, ಅವರು ತನಿಖೆ ಮಾಡುತ್ತಿದೆ ಎಂದು ಈ ಹಿಂದೆ ಸೂಚಿಸಿದರು. ಅದಾನಿಗೆ ತನ್ನ ಕಾರ್ಯಗಳನ್ನು ಮುಚ್ಚಿಡಲು ಸೆಬಿ ಆರು ತಿಂಗಳು ಸಮಯ ನೀಡಲು ಬಯಸುತ್ತಿದೆ” ಎಂದು ಹೇಳಿದ್ದಾರೆ.

ಮೊಯಿತ್ರಾ ಅವರ ಮೊದಲ ಪ್ರಶ್ನೆಯು ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳನ್ನು ಉಲ್ಲೇಖಿಸುತ್ತದೆ. ಸಿಂಗ್ ವಿರುದ್ಧದ ಆರೋಪಗಳನ್ನು ಏಪ್ರಿಲ್ 25ರಂದು ಸುಪ್ರೀಂ ಕೋರ್ಟ್ “ಗಂಭೀರ” ಎಂದು ಪರಿಗಣಿಸಿತು ಮತ್ತು ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ಎಫ್‌ಐಆರ್ ನೋಂದಾಯಿಸದ ಪ್ರಕರಣವನ್ನು ಏಪ್ರಿಲ್ 28ರಂದು ವಿಚಾರಣೆಗೆ ನಿಗದಿಪಡಿಸಲಾಗಿತ್ತು.

ಇದನ್ನೂ ಓದಿ: ನಮ್ಮ ಉಡುಗೆ ಕೊಳಕಲ್ಲ, ನಿಮ್ಮ ಆಲೋಚನೆ ಕೊಳಕು: ಬಿಜೆಪಿ ನಾಯಕನಿಗೆ ಮೋಯಿತ್ರಾ ತಿರುಗೇಟು

ಎರಡನೇ ಪ್ರಶ್ನೆಯಾಗಿ, ಅದಾನಿ ಗ್ರೂಪ್‌ನ ಭದ್ರತಾ ಮಾರುಕಟ್ಟೆ ಕಾನೂನುಗಳು ಮತ್ತು ಅದರ ನಿಯಂತ್ರಣದ ಬಗ್ಗೆ ಬಹಿರಂಗಪಡಿಸುವಿಕೆಗಳಲ್ಲಿನ ಸಂಭವನೀಯ ಲೋಪದೋಷಗಳ ತನಿಖೆಯನ್ನು ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್‌ನಿಂದ ಆರು ತಿಂಗಳ ಅವಧಿ ಕೇಳಿರುವುದನ್ನು ಸೆಬಿಯನ್ನು ಮೊಯಿತ್ರಾ ಟೀಕಿಸಿದ್ದಾರೆ. ಸೆಬಿ ತನ್ನ ನೆಚ್ಚಿನ ಉದ್ಯಮಿ ಗೌತಮ್ ಅದಾನಿಗೆ ತನ್ನ ಕಾರ್ಯಗಳನ್ನು ಮುಚ್ಚಿಡಲು ಸಮಯ ನೀಡುವ ಮೂಲಕ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಮೊಯಿತ್ರಾ ಆರೋಪಿಸಿದ್ದಾರೆ.

ಅದಾನಿ ಕಂಪನಿಯ ಲೋಪಗಳನ್ನು ಬಹಿರಂಗಪಡಿಸುವ ವಿಚಾರಕ್ಕೆ ಆರು ತಿಂಗಳ ವಿಸ್ತರಣೆಗಾಗಿ ಸೆಬಿಯು ಸುಪ್ರೀಂ ಬಳಿ ಕೇಳಿರುವುದಕ್ಕೆ ಇತರ ವಲಯಗಳಿಂದ ಟೀಕೆಗಳು ಬರುತ್ತಿವೆ. ನಿಗದಿತ ಕಾಲಮಿತಿಯೊಳಗೆ ತನಿಖೆ ಪೂರ್ಣಗೊಳಿಸಲು ಸೆಬಿ ಅಸಮರ್ಥರಾಗಿರುವುದನ್ನು ಹಲವರು ಪ್ರಶ್ನಿಸುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...