Homeಅಂಕಣಗಳುಟ್ರಾನ್ಸ್‌ಜೆಂಡರ್ ಸಮುದಾಯದ ಅರಿವಿನ ಲೋಕ ವಿಸ್ತರಿಸುತ್ತಿರುವ ಉಮಾ

ಟ್ರಾನ್ಸ್‌ಜೆಂಡರ್ ಸಮುದಾಯದ ಅರಿವಿನ ಲೋಕ ವಿಸ್ತರಿಸುತ್ತಿರುವ ಉಮಾ

- Advertisement -
- Advertisement -

ಎಲೆಮರೆ – 16

ಇದೀಗ ಟ್ರಾನ್ಸ್‌ಜೆಂಡರ್ ಸಮುದಾಯ ಹಲವು ಕ್ಷೇತ್ರಗಳಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದೆ. ಈ ಸಮುದಾಯಕ್ಕೆ ಶಾಪವಾಗಿದ್ದ ಕಾಯ್ದೆ ಕಾನೂನುಗಳ ವಿರುದ್ಧ ಹೋರಾಟಕ್ಕೆ ಗೆಲುವು ಸಿಗುತ್ತಿದೆ. ಇಂತಹ ಹೋರಾಟ ಚಳವಳಿಯಲ್ಲಿ ಟ್ರಾನ್ಸ್‌ಜೆಂಡರ್ ಕಮುನಿಟಿಯ ಅನೇಕರು ಶ್ರಮಿಸುತ್ತಿದ್ದಾರೆ. ಆರಂಭದಿಂದಲೂ ಕರ್ನಾಟಕದಲ್ಲಿ ಸಂಗಮ ಸಂಸ್ಥೆಯ ಮನೋಹರ್ ಇಂತಹ ವಾತಾವರಣ ರೂಪಿಸುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಕೆಲಸ ಮಾಡಿ ಜಾಗೃತರಾದ ಟ್ರಾನ್ಸ್‍ಜೆಂಡರ್ ಸಮುದಾಯದ ಸದಸ್ಯರು ಇದೀಗ ಸ್ವತಂತ್ರವಾದ ಸಂಘಟನೆಗಳೊಂದಿಗೆ ಸಮುದಾಯಕ್ಕಾಗಿ ದುಡಿಯುತ್ತಿದ್ದಾರೆ.

ಇಂಥವರಲ್ಲಿ ಎದ್ದು ಕಾಣುವ ಹೆಸರು ಅಕ್ಕೈ ಪದ್ಮಶಾಲಿ, ಚಾಂದಿನಿ, ಮಲ್ಲಪ್ಪ ಮುಂತಾದವರನ್ನು ಒಳಗೊಂಡಂತೆ ಸಮರ, ಪಯಣ, ಒಂದೆಡೆ, ಕರ್ನಾಟಕ ಸೆಕ್ಷುವಲ್ ಮೈನಾರಿಟೀಸ್ ಫೋರಂ (ಕೆ.ಎಸ್.ಎಮ್.ಎಫ್) ಮುಂತಾದ ಸಂಘಟನೆಗಳನ್ನು ಹೆಸರಿಸಬಹುದು. ಈ ಸಂಘಟನೆಗಳ ಜತೆ ಜತೆ ಎಲೆಮರೆಯಂತೆ ಕೆಲಸ ಮಾಡುವ ಉಮಾ ಜನರಿಗೆ ಅಷ್ಟಾಗಿ ಗೊತ್ತಿಲ್ಲ. ಟ್ರಾನ್ಸ್ ಜೆಂಡರ್ ಕಮುನಿಟಿಯ ಹಕ್ಕೊತ್ತಾಯ ಮತ್ತು ಅವರ ಅಭಿವೃದ್ಧಿಯ ಬಗ್ಗೆ ದೂರದೃಷ್ಠಿಯ ವಿಷನ್ ಹೊಂದಿದ ಉಮಾ ಸಮುದಾಯದ ಜೊತೆಗಿದ್ದೂ, ತನ್ನದೇ ಆದ ಗುರುತು ಕಾಯ್ದುಕೊಂಡಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ಸಮೀಪದ ದೇವಿಪಾಳ್ಯ ಎಂಬ ಚಿಕ್ಕ ಹಳ್ಳಿ. ಈ ಹಳ್ಳಿಯಲ್ಲಿ ಇದ್ದ ಸ್ವಲ್ಪ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ಪುಟ್ಟ ಕುಟುಂಬ. ಈ ಕುಟುಂಬದಲ್ಲಿ ಮೂರು ಗಂಡು ಮಕ್ಕಳು. ಉಮೇಶ್ ಮೂರನೆಯವ. ತಾಯಿ ಬಾಲ್ಯದಲ್ಲಿ ಉದ್ದನೆ ಕೂದಲಿದ್ದ ಉಮೇಶನಿಗೆ ಜಡೆ ಹಾಕಿ ಹೂಮುಡಿಸಿ ಶಾಲೆಗೆ ಕಳಿಸುತ್ತಿದ್ದಳು. ಆದು ಮಗನಿಗೂ ಖುಷಿ ತಾಯಿಗೂ ಖುಷಿ. ಶಾಲೆಯಲ್ಲಿ ಉಮೇಶ್ ಹುಡುಗಿಯರೊಂದಿಗೆ ಇರತೊಡಗಿ ಗಂಡು ಹುಡುಗರು ಕಂಡರೆ ತುಸು ನಾಚುವ ಸ್ವಭಾನ ನಿಧಾನಕ್ಕೆ ಗರಿಗಟ್ಟಿತು. ಹೀಗೆ ಬಾಲಕನೊಳಗಿನ ಹೆಣ್ಣಿನ ಮೊಳಕೆ ಅಮ್ಮನನ್ನು ಹೊರತುಪಡಿಸಿ ಎಲ್ಲರಿಂದಲೂ ತಿರಸ್ಕಾರ, ಅವಮಾನಕ್ಕೆ ಕಾರಣವಾಯಿತು. `ನಾನೇಕೆ ಹೀಗೆ’ ಎನ್ನುವ ಪ್ರಶ್ನೆ ತೀವ್ರವಾಗಿ ಕಾಡಿ ಆತ್ಮಹತ್ಯೆಯ ತನಕ ಕರೆದೊಯ್ಯಿತು. ಈ ರೂಪಾಂತರವೊಂದು ನೋವಿನ ಕಥನ.

ಅಮ್ಮನ ಜತೆ ಬೆಂಗಳೂರಿನ ಸಂಬಂಧಿಕರ ಮನೆಗೆ ಬಂದಾಗ, ಬಸ್‍ಸ್ಟಾಂಡ್‍ನಲ್ಲಿ ತನ್ನಂಥಹದೇ ಭಾವನೆಗಳಿರುವವರನ್ನು ನೋಡಿ ಉಮೇಶ್ ಖುಷಿಯಾಗುತ್ತಾನೆ. ಅರೆ ನಾನು ಅವರ ಹಾಗೆ ಇರಬಹುದಲ್ಲವೇ? ಎನ್ನುವ ಯೋಚನೆ ಬದುಕುವ ಬರವಸೆ ಮೂಡಿಸುತ್ತದೆ. ಉಮೇಶ್ ಕೆಲವರನ್ನು ಮಾತಾಡಿಸಿ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾನೆ. ಇದರಿಂದಾಗಿ ಅಮ್ಮನ ಜತೆ ಊರಿಗೆ ಹೋದರೂ, ಮರಳಿ ಬೆಂಗಳೂರಿಗೆ ಬರುತ್ತಾನೆ. ತನ್ನ ಸಂಬಂಧಿಕರ ಮನೆಯಲ್ಲಿದ್ದುಕೊಂಡೆ ತನ್ನ ಸಮುದಾಯದ ಪರಿಚಯ ಸಂಪಾದಿಸುತ್ತಾನೆ. ನಿಧಾನಕ್ಕೆ ಉಮೇಶ್ ಉಮಾಳಾಗಿ ಬದಲಾಗುತ್ತಾನೆ. ತನ್ನವರಂತೆ ಭಿಕ್ಷೆ ಉಮಾಗೆ ಹಿಂಸೆ ಅನ್ನಿಸಿ, ಸೆಕ್ಸ್ ವರ್ಕ್‍ನಲ್ಲಿ ಉಮಾ ಎರಡು ವರ್ಷ ಕಳೆಯುತ್ತಾಳೆ.

2004 ರಲ್ಲಿ ಸಂಗಮ ಸಂಸ್ಥೆಯಲ್ಲಿ ಸೇರಿಕೊಳ್ಳುತ್ತಾರೆ. ವಾಲಂಟರಿಯಾಗಿ ಒಂದು ವರ್ಷ ಆ ಸಂಸ್ಥೆಯಲ್ಲಿ ಕೆಲಸ ಮಾಡಿ ನಂತರ ಕಮ್ಯುನಿಟಿ ಮೊಬಿಲೈಜರ್ ಆಗಿ ದುಡಿಯುತ್ತಾರೆ. ಈ ಸಂಸ್ಥೆಯಲ್ಲಿ ನಡೆಯುವ ಸಭೆ, ಮೀಟಿಂಗ್, ಓದು ಭಾಷಣಗಳಿಂದ ತನ್ನ ಅರಿವನ್ನು ವಿಸ್ತರಿಸಿಕೊಳ್ಳುತ್ತಾರೆ. ಸಂಗಮದಲ್ಲಿದ್ದೇ ಇತರರ ಜೊತೆಗೆ 2005 ದಲ್ಲಿ ಸಮರ ಎನ್ನುವ ಸಂಸ್ಥೆ ರೂಪಿಸುತ್ತಾರೆ. ಈ ಸಂಘಟನೆ ಸರಕಾರದ ಹೆಚ್.ಐ.ವಿ ಜಾಗೃತಿ ಕಾರ್ಯಕ್ರಮವನ್ನು ಪಡೆದು ಕೆಲಸ ಮಾಡುವುದಕ್ಕೆ ಶುರುಮಾಡುತ್ತದೆ.

ಎನ್.ಜಿ.ಓಗಳು ಒಂದು ಇಶ್ಶು ಬಿಟ್ಟು ದಿಡೀರ್ ಮತ್ತೊಂದು ಇಶ್ಶು ಎತ್ತಿಕೊಳ್ಳುತ್ತವೆ. ಹಾಗಾಗಿ ಎನ್.ಜಿ.ಓಗಳಿಗಿಂತ ಸಮುದಾಯದ ಒಳಗೇ ಒಂದು ಸಂಘಟನೆ, ಸಮುದಾಯಿಕ ಚಟುವಟಿಕೆಗಳು ಪ್ರಾರಂಭವಾಗಬೇಕು. ಹಾಗಾದಲ್ಲಿ ಸಮುದಾಯದ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬಹುದು ಎಂದರಿತು, 2007 ರಲ್ಲಿ ಕರ್ನಾಟಕ ಸೆಕ್ಷುವಲ್ ಮೈನಾರಿಟೀಸ್ ಫೋರಂ (ಕೆ.ಎಸ್.ಎಮ್.ಎಫ್) ಕಟ್ಟುತ್ತಾರೆ. ಹೀಗೆ ಬೇರೆ ಬೇರೆ ಸಂಘಟನೆಗಳ ಕೆಲಸದ ಕಾರಣ 2009 ರಲ್ಲಿ ಭಿನ್ನಾಭಿಪ್ರಾಯ ಬಂದು ಚಾಂದಿನಿ ಮತ್ತು ಉಮಾ `ಸಂಗಮ’ ತೊರೆಯುತ್ತಾರೆ. ಆಗ ಪಯಣ ಎನ್ನುವ ಸಂಸ್ಥೆ ಸ್ಥಾಪಿಸಿ ಅದರ ಮೂಲಕವೂ ಕೆಲಸ ಮಾಡುತ್ತಾರೆ.

ಪ್ರೀವೀಲ್ಸ್ ಇಂಡಿಯಾ ಪ್ರವೇಟ್ ಲಿಮಿಟೆಡ್ ಎನ್ನುವ ಕಂಪನಿಯಲ್ಲಿ ಟ್ರಾನ್ಸ್ ಜೆಂಡರ್ ಐಡೆಂಟಿಟಿ ಗೊತ್ತಿದ್ದೂ ಕೆಲಸ ಮಾಡಲು ಅವಕಾಶ ಕೊಡುತ್ತಾರೆ. ಇದರಲ್ಲಿ ಉಮಾ ಚಾಂದಿನಿ ಕೆಲಸಕ್ಕೆ ಸೇರುತ್ತಾರೆ. ಮುಖ್ಯವಾಗಿ ಆಟೋ ಡ್ರೈವರುಗಳ ಬಗ್ಗೆ ಅಧ್ಯಯನ ಮಾಡುತ್ತಾರೆ. ಹೀಗೆ 2 ವರ್ಷ ಕೆಲಸ ಮಾಡಿದ ಮೇಲೆ, ಸಮುದಾಯದ ಸಂಘಟನೆ ಹಿನ್ನೆಡೆಯಾಗುತ್ತದೆ. ಹೀಗಾಗಿ ಉಮಾ ಮತ್ತು ಚಾಂದಿನಿ ಈ ಕೆಲಸದಿಂದಲೂ ಹೊರಬರುತ್ತಾರೆ.

ಈಗಾಗಲೆ ಇರುವ ಸಂಘಟನೆಗಳು ಅವುಗಳದ್ದೇ ಚೌಕಟ್ಟುಗಳಲ್ಲಿ ಕೆಲಸ ಮಾಡುತ್ತಿವೆ. ಇವುಗಳು ಮಾಡದ ಕ್ಷೇತ್ರವನ್ನು ಆಯ್ದುಕೊಂಡು ಕೆಲಸ ಮಾಡಬೇಕೆಂದು ಉಮಾ ಟ್ರಾನ್ಸ್ ಸಮುದಾಯದ ಮಾನಸಿಕ ಸಮಸ್ಯೆಗಳನ್ನು ಆಧರಿಸಿ ಒಂದು ಪ್ರತ್ಯೇಕ ಫೋರಂ ರಚಿಸುತ್ತಾರೆ. ಅದುವೆ `ಜೀವ’ ಎನ್ನುವ ಸಂಸ್ಥೆ, ಅದು 2012ರಲ್ಲಿ ರೂಪು ತಳೆಯುತ್ತದೆ.

`ಜೀವ’ ಉಮಾ ಅವರ ಕನಸಿನ ಕೂಸು. ಜೀವನವೇ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಪ್ರಯತ್ನಿಸುವುದು, ಅಲ್ಕೋಹಾಲ್ ಒಳಗೊಂಡಂತೆ ಚಟಗಳಿಗೆ ಅಡಿಕ್ಟ್ ಆಗೋರ ಮನ ಪರಿವರ್ತನೆ ಮಾಡೋದು, ಪರ್ಯಾಯ ಬದುಕು ಕಟ್ಟಿಕೊಳ್ಳಲು ನೆರವಾಗೋದು ಈ ಸಂಸ್ಥೆಯ ಮುಖ್ಯ ಗುರಿ. ಹಾಗಾಗಿ ಈ ಸಂಸ್ಥೆಯ ಭಾಗವಾಗಿ `ಅನನ್ಯ’ ಎನ್ನುವ ಟ್ರಾನ್ಸ್ ಕಮುನಿಟಿಗೇ ಪ್ರತ್ಯೇಕವಾದ ಪತ್ರಿಕೆ ಆರಂಭಿಸಿದ್ದಾರೆ. ಈ ಪತ್ರಿಕೆ ಟ್ರಾನ್ಸ್‍ಜೆಂಡರುಗಳ ಹೋರಾಟ, ಚಟುವಟಿಕೆ, ಆತ್ಮಕಥನದ ಭಾಗಗಳನ್ನು ಪ್ರಕಟಿಸುತ್ತಿದೆ. ಇಷ್ಟೇ ಅಲ್ಲದೆ, 2011 ರಿಂದ ಕರ್ನಾಟಕದ ಸರಕಾರ ಜಾರಿಗೊಳಿಸಿದ್ದ ಟ್ರಾನ್ಸ್ ಕಮುನಿಟಿಯನ್ನು ಕಂಟ್ರೋಲ್ ಮಾಡುವ ಕರ್ನಾಟಕ 36 ಕಾಯ್ದೆಯನ್ನು ರದ್ದುಗೊಳಿಸುವಲ್ಲಿಯೂ, 1861 ರಿಂದ ಜಾರಿಯಾಗಿದ್ದ 377 ಆಕ್ಟ್ ವಿರುದ್ಧದ ಹೋರಾಟದಲ್ಲಿ ಉಮಾ, ಅಕ್ಕೈ, ಮತ್ತು ಸ್ವಾತಿ ಕರ್ನಾಟಕದಿಂದ ಪಿಟಿಷನ್ ಪೈಲ್ ಮಾಡಿದ್ದರು. 2018 ನಲ್ಲಿ ಸುಪ್ರೀಂಕೋರ್ಟ್ 377 ಸೆಕ್ಷನ್ ಅಸಂವಿಧಾನಿಕ ಎಂದು ಕಾಯ್ದೆಯನ್ನು ರದ್ದುಗೊಳಿದ್ದರಲ್ಲಿ ಉಮಾ ಅವರ ಪಾಲೂ ಇದೆ.

ಈಚೆಗೆ ನಾಲ್ಕು ತಿಂಗಳ ಹಿಂದಷ್ಟೇ ತನ್ನ 17 ವರ್ಷ ಜೊತೆ ಬಾಳಿದ ಸಂಗಾತಿ ಲಿವರ್ ತೊಂದರೆಯಿಂದ ಉಮಾ ಅವರನ್ನು ಅಗಲಿದ್ದಾರೆ. ಈ ದುಃಖವಿನ್ನೂ ಉಮಾ ಅವರಿಂದ ದೂರವಾಗಿಲ್ಲ. ಸಮಾಜದಲ್ಲಿ ಗಂಡು ಹೆಣ್ಣಾಗಿ ಮಾತ್ರವೇ ಬದುಕಬೇಕೇ? ಎರಡೂ ಭಾವದಲ್ಲಿಯೂ ನಮಗೆ ತೋಚಿದಂತೆ ಬದುಕಲು ಸಾಧ್ಯವಿಲ್ಲವೇ ಎನ್ನುವ ಜಿಜ್ಞಾಸೆ ಉಮಾ ಅವರನ್ನು ಕಾಡಿದೆ. ಹಾಗಾಗಿ ನಿರ್ವಾಣಹೊಂದಿ ಪೂರ್ಣ ಹೆಣ್ಣಾಗಿಯೂ ಜೀವಿಸದೆಯೆ, ಗಂಡಿನಂತೆಯೂ ತೋರಿಸಿಕೊಳ್ಳದೆ ತನ್ನ ಭಾವನೆಗೆ ಪೂರವಾದ ನಡೆನುಡಿಯನ್ನು ರೂಢಿಸಿಕೊಂಡಿದ್ದಾರೆ. ನನಗೆ ನನ್ನದೇ ಬಗೆಯ ವ್ಯಕ್ತಿತ್ವವಿದೆ. ಸಮಾಜ ನನ್ನನ್ನು ಹೇಗಾದರೂ ನೋಡಲಿ ಎನ್ನುವ ಖಚಿತತೆಯಲ್ಲಿ ಬದುಕುತ್ತಾರೆ. ಉಮಾ ಅವರ ಹೋರಾಟ, ಕಾಳಜಿ, ಬದ್ಧತೆಗಳಿಗೆ ಜಯ ಸಿಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...