Homeಮುಖಪುಟಸಮವಸ್ತ್ರ: ಕೋರ್ಟ್‌‌ನಲ್ಲಿ ಪ್ರಕರಣವಿರುವಾಗ ಸರ್ಕಾರದ ಆದೇಶ ಖಂಡನೀಯ- ಎಐಡಿಎಸ್ಓ

ಸಮವಸ್ತ್ರ: ಕೋರ್ಟ್‌‌ನಲ್ಲಿ ಪ್ರಕರಣವಿರುವಾಗ ಸರ್ಕಾರದ ಆದೇಶ ಖಂಡನೀಯ- ಎಐಡಿಎಸ್ಓ

- Advertisement -
- Advertisement -

ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ನೀತಿ ಸಂಹಿತೆ ಜಾರಿಗೊಳಿಸುವ ವಿಚಾರ ಸದ್ಯಕ್ಕೆ ನ್ಯಾಯಾಂಗದ ಅಂಗಳದಲ್ಲಿದ್ದು, ಅದರ ತೀರ್ಪು ಇನ್ನೇನು ಹೊರಬೀಳಬೇಕು ಎನ್ನುವಾಗಲೇ, ಕರ್ನಾಟಕದ ಬಿಜೆಪಿ ರಾಜ್ಯ ಸರ್ಕಾರವು ನ್ಯಾಯಾಲಯದ ತೀರ್ಪಿಗೆ ಕಾಯದೇ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವುದು ಖಂಡನೀಯ ಎಂದು ಆಲ್‌ ಇಂಡಿಯಾ ಡೆಮಕ್ರಟಿಕ್‌ ಸ್ಟುಡೆಂಟ್‌‌ ಆರ್ಗನೈಷನ್‌ (ಎಐಡಿಎಸ್ಓ) ರಾಜ್ಯ ಘಟಕ ತಿಳಿಸಿದೆ.

ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಪತ್ರಿಕಾ ಹೇಳಿಕೆ ನೀಡಿದ್ದು, “ಧರ್ಮವನ್ನು ಶಿಕ್ಷಣದಿಂದ ದೂರವಿಡಬೇಕೆಂಬುದು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಮಹಾನ್ ಹೋರಾಟಗಾರರಾದ ನೇತಾಜಿ, ಭಗತ್ ಸಿಂಗ್ ಮತ್ತಿತರರ ಆಶಯವಾಗಿತ್ತು. ಧರ್ಮ ಕೇವಲ ವ್ಯಕ್ತಿಯೊಬ್ಬನ ವೈಯಕ್ತಿಕ ನಂಬಿಕೆಯಾಗಿ ಉಳಿಯಬೇಕು ಎಂಬುದು ಅವರ ಚಿಂತನೆಯಾಗಿತ್ತು. ಆದರೆ ಸ್ವಾತಂತ್ರ್ಯಾ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಆದಿಯಾಗಿ ಯಾವ ಸರ್ಕಾರವೂ ಶಿಕ್ಷಣವನ್ನು ಧರ್ಮದಿಂದ ದೂರ ಇರಿಸಿಲ್ಲ, ಬದಲಿಗೆ ಹೆಚ್ಚೆಚ್ಚು ಬೆರೆಸಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಪ್ರಶ್ನೆ ಬರೀ ಹಿಜಾಬ್‌‌ದಲ್ಲ, ಶಾಲಾ ಕಾಲೇಜುಗಳಲ್ಲಿ ಜರುಗುವ ಧಾರ್ಮಿಕ ಆಚರಣೆಗಳಿಗೆ ಎಣೆಯೇ ಇಲ್ಲ. ಧರ್ಮನಿರಪೇಕ್ಷ , ಪ್ರಜಾತಾಂತ್ರಿಕ ಶಿಕ್ಷಣಕ್ಕಾಗಿ ಹೋರಾಡಿದ ಎಲ್ಲಾ ಹೋರಾಟಗಾರರ ಆಶಯಗಳಿಗೆ ದ್ರೋಹ ಬಗೆಯಲಾಗಿದೆ. ಈ ಸಮಸ್ಯೆಗೆ ಮಹಾನ್ ನೇತಾಜಿ ರವರು ಹೇಳಿದಂತೆ, “ಧಾರ್ಮಿಕ ಮತಾಂಧತೆಯ ವಿರುದ್ಧದ ಹೋರಾಟದಲ್ಲಿ ವೈಜ್ಞಾನಿಕ ಧರ್ಮನಿರಪೇಕ್ಷ ಶಿಕ್ಷಣವೇ ಪರಿಹಾರ”. ವೈಜ್ಞಾನಿಕ, ಧರ್ಮನಿರಪೇಕ್ಷ ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಶಿಕ್ಷಣದ ಮೇಲೆ ಸರ್ಕಾರಗಳ ದಾಳಿಗಳು ಅವ್ಯಾಹತವಾಗಿ ಜರುಗುತ್ತಿರುವಾಗ ವಿದ್ಯಾರ್ಥಿಗಳ ಐಕ್ಯತೆ ಹಿಂದೆಂದಿಗಿಂತಲೂ ಹೆಚ್ಚು ಅವಶ್ಯಕವಾಗಿರುವಾಗ ಜಾತಿ, ಧರ್ಮಗಳಂತಹ ಕೋಮುವಾದಿ ಗುಂಪುಗಳಾಗಿ ನಮ್ಮಲ್ಲೇ ಒಡಕುಗಳು ಉಂಟಾದರೆ ಲಾಭ ಯಾರಿಗೆ ಹಾಗೂ ನಷ್ಟ ಯಾರಿಗೆ ಎಂಬುದನ್ನು ವಿದ್ಯಾರ್ಥಿ ಸಮುದಾಯ ತಿಳಿಯಬೇಕಿದೆ ಎಂದು ಆಶಿಸಿದ್ದಾರೆ.

ಶಿಕ್ಷಣದ ವ್ಯಾಪಾರೀಕರಣದಂತಹ ಸಮಸ್ಯೆಗಳು ವಿದ್ಯಾರ್ಥಿಗಳನ್ನು ಕಾಡುತ್ತಿರುವಾಗ, ನಮ್ಮ ಒಗ್ಗಟ್ಟಿನ ಹೋರಾಟವನ್ನು ಮುರಿಯಲು ಇಂತಹ ವಿಭಜಕ ಶಕ್ತಿಗಳಿಗೆ ಸರ್ಕಾರಗಳೇ ಕುಮ್ಮಕ್ಕು ನೀಡುತ್ತವೆ ಎಂಬುದನ್ನು ಅರಿತು ಎಲ್ಲಾ ವಿಭಜಕ ಶಕ್ತಿಗಳನ್ನು ದೂರವಿಡಬೇಕು ಎಂದು ಅವರು ಮನವಿ ಮಾಡಿದ್ದಾರೆ.


ಇದನ್ನೂ ಓದಿರಿ: ‘ಪಿಯು ಹಂತದಲ್ಲಿ ಸಮವಸ್ತ್ರ ಕಾನೂನುಬಾಹಿರ’ ಎಂದಿದ್ದ ಪಿಯು ನಿರ್ದೇಶಕಿ ಸ್ನೇಹಲ್‌ ವರ್ಗಾವಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಪ್ರದೇಶ: ದಲಿತ ಬಾಲಕಿಯ ಸಜೀವ ದಹನ

0
ಬಯಲು ಶೌಚಾಲಯಕ್ಕೆ ತೆರಳಿದ್ದ 13 ವರ್ಷದ ದಲಿತ ಬಾಲಕಿಯನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಹರಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ಬಲರಾಂಪುರ್ ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ್ದ 13...