ಇಂದು 'ಬುಡಕಟ್ಟು ನಾಯಕ ಬಿರ್ಸಾ ಮುಂಡಾ' ಜನ್ಮದಿನ - #BirsaMunda ಟ್ವಿಟರ್‌ನಲ್ಲಿ ಟ್ರೆಂಡಿಂಗ್!

ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಜನ್ಮ ದಿನ ಇಂದು. ಇವರಿಗೆ ಗೌರವ ಸಲ್ಲಿಸುವ ಸಲುವಾಗಿ ಸಾವಿರಾರು ಜನ ಟ್ವಿಟ್ಟರ್‌ನಲ್ಲಿ #BirsaMunda ಎಂದು ಟ್ವೀಟ್ ಮಾಡುತ್ತಿದ್ದು, ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ಆಗುತ್ತಿದೆ.

ಭಾರತದ ಟ್ವಿಟ್ಟರ್‌ ಟ್ರೆಂಡಿಂಗ್‌ನಲ್ಲಿ 5 ನೇ ಸ್ಥಾನದಲ್ಲಿರುವ #BirsaMunda, ಈ ಹ್ಯಾಶ್‌ಟ್ಯಾಗ್ ಬಳಸಿ ಈ ವರದಿ ಬರೆಯುವ ವೇಳೆಗೆ 5000 ಕ್ಕೂ ಹೆಚ್ಚು ಜನ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿದೆ ‘ಪಾಕಿಸ್ತಾನ’: ಮರುನಾಮಕರಣಕ್ಕೆ ಗ್ರಾಮಸ್ಥರ ಆಗ್ರಹ..!

ದೇಶದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿ, “ಇಂದು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಜನ್ಮ ದಿನಾಚರಣೆ. ಇವರಿಗೆ ನನ್ನ ನಮನಗಳು. ಧರೆಯ ತಂದೆ ಎಂದೇ ಪ್ರಸಿದ್ಧಿ ಪಡೆದಿರುವ ಬಿರ್ಸಾ ಮುಂಡಾ ಬುಡಕಟ್ಟು ಸಮುದಾಯಗಳ ವಿರುದ್ಧದ ಬ್ರಿಟಿಷರ ನೀತಿಗಳ ವಿರುದ್ಧ ಹೋರಾಡಿದ್ದರು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್‌…

ಪ್ರಿನ್ಸು ಮೀನಾ ಎಂಬುವವರು ಟ್ವೀಟ್ ಮಾಡಿ, “ಸದಾ ಪ್ರಕೃತಿಯೊಟ್ಟಿಗೆ ನಿಲ್ಲುವ ಮತ್ತು ಅದರೊಟ್ಟಿಗೆ ಸಂವಾದ ನಡೆಸುತ್ತಾ ಬದುಕುತ್ತಿರುವ ಬುಡಕಟ್ಟು ಮತ್ತು ಆದಿವಾಸಿಗಳ ದೈವ ಬಿರ್ಸಾ ಮುಂಡಾ. ಇಂದು ಇವರ ಜನ್ಮ ದಿನವನ್ನು ನಾವು ಆಚರಿಸುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನೆರೆ ಪರಿಹಾರ ಕೊಡದಿದ್ದರೆ ರಾಜ್ಯದಾದ್ಯಂತ ತೀವ್ರ ಹೋರಾಟ – ಕರವೇ ಟಿ.ಎ.ನಾರಾಯಣಗೌಡರು

ಹೀಗೆ ಸಾವಿರಾರು ಜನ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಬುಡಕಟ್ಟು ನಾಯಕನಿಗೆ ಅವರಿಗೆ ಗೌರವ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

ಅಲ್ವಿನ್ ರೊಜಾರಿಯೋ ಎಂಬುವವರು ಅಲ್ಬಂ ಹಾಡೊಂದನ್ನು ಬಿಡುಗಡೆ ಮಾಡಿ ಬಿರ್ಸಾ ಮುಂಡಾ ಅವರಿಗೆ ಗೌರವ ಸಲ್ಲಿಸಿದ್ದಾರೆ.

ಯುವ ಸ್ವಾತಂತ್ರ್ಯ ಹೋರಾಟಗಾರ ಮತ್ತು ಬುಡಕಟ್ಟು ನಾಯಕರಾಗಿದ್ದ ಬಿರ್ಸಾ ಮುಂಡಾ, ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ತನ್ನ 25 ನೇ ವಯಸ್ಸಿನಲ್ಲಿಯೇ ವೀರ ಮರಣ ಹೊಂದಿದ್ದರು. ಹಾಗಾಗಿ 2000 ದಿಂದ ಇವರ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಬಿಜೆಪಿಯ ಫ್ಯಾಸಿಸ್ಟ್ ಆಕ್ರಮಣವನ್ನು ಹಿಮ್ಮೆಟ್ಟಿಸಲು ಹೋರಾಟಕ್ಕೆ ಸಿದ್ಧರಾಗಿ: ಬಿಹಾರದ ಮುಂಚೂಣಿ ಎಡಪಕ್ಷ ಸಿಪಿಐ(ಎಂಎಲ್) ಕರೆ

ಬಿಹಾರ ಮತ್ತು ಜಾರ್ಖಂಡ್‌ ಸುತ್ತಮುತ್ತಲಿನ ಛೋಟಾನಾಗ್ಪುರ್ ಪ್ರಸ್ಥಭೂಮಿ ಪ್ರದೇಶದ ಮುಂಡಾ ಬುಡಕಟ್ಟು ಸಮುದಾಯದಲ್ಲಿ ನವೆಂಬರ್ 15, 1875 ರಲ್ಲಿ ಹುಟ್ಟಿ ಬೆಳೆದ ಇವರು ತನ್ನ ಬಾಲ್ಯದ ಬಹುಭಾಗವನ್ನು ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಸ್ಥಳಾಂತರಗೊಳ್ಳುವುದರಲ್ಲಿಯೇ ಕಳೆದರು. ಅವರು ತಮ್ಮ ಶಿಕ್ಷಕ ಜೈಪಾಲ್ ನಾಗ್ ಅವರ ಮಾರ್ಗದರ್ಶನದಲ್ಲಿ ಸಲ್ಗಾದಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದರು. ಜೈಪಾಲ್ ನಾಗ್ ಅವರ ಶಿಫಾರಸ್ಸಿನ ಮೇರೆಗೆ, ಜರ್ಮನ್ ಮಿಷನ್ ಶಾಲೆಗೆ ಸೇರಲು ಇವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು.

ಆರಂಭದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರೂ ನಂತರದ ದಿನಗಳಲ್ಲಿ ತಮ್ಮದೇ ಆದ ‘ಬಿರ್ಸೈಟ್‌’ ಎನ್ನುವ ಪಂಥವನ್ನು ಸ್ಥಾಪಿಸಿದರು. ಅತೀ ಶೀಘ್ರದಲ್ಲೇ ಮುಂಡಾ ಮತ್ತು ಒರಾನ್ ಸಮುದಾಯದವರು ಈ ಪಂಥಕ್ಕೆ ಸೇರಲು ಪ್ರಾರಂಭಿಸಿದರು. ಇದು ಬ್ರಿಟಿಷರ ಮತಾಂತರ ಚಟುವಟಿಕೆಗಳಿಗೆ ಸವಾಲಾಗಿ ಪರಿಣಮಿಸಿತು.

ಇದನ್ನೂ ಓದಿ: ಹೋರಾಟಗಾರ ವರವರ ರಾವ್‌‌ಗೆ ಜಾಮೀನು ನಿರಾಕರಣೆ; ’ಹಾಸಿಗೆ ಹಿಡಿದಿದ್ದಾರೆ’ ಎಂದ ಕುಟುಂಬ!

1886 ರಿಂದ 1890 ರ ಅವಧಿಯಲ್ಲಿ ಇವರು ಮಿಷನರಿ ವಿರೋಧಿ ಮತ್ತು ಸರ್ಕಾರ ವಿರೋಧಿ ಕಾರ್ಯಕ್ರಮಗಳ ಭಾಗವಾದರು. ಅವರು 1890 ರಲ್ಲಿ ಚೈಬಾಸಾವನ್ನು ತೊರೆಯುವ ಹೊತ್ತಿಗೆ, ಬಿರ್ಸಾ ಬುಡಕಟ್ಟು ಸಮುದಾಯಗಳ ಮೇಲಿನ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧದ ಚಳವಳಿಯಲ್ಲಿ ಬಿರ್ಸಾ ಮುಂಡಾ ತೀವ್ರವಾಗಿ ತೊಡಗಿಸಿಕೊಂಡರು.

ಮಾರ್ಚ್ 3, 1900 ರಂದು, ಬಿರ್ಸಾ ಮುಂಡಾ ತನ್ನ ಬುಡಕಟ್ಟು ಗೆರಿಲ್ಲಾ ಸೈನ್ಯದೊಂದಿಗೆ ಚಕ್ರಧರಪುರದ ಜಮ್ಕೋಪೈ ಕಾಡಿನಲ್ಲಿ ವಿಶ್ರಾಂತಿಯಲ್ಲಿದ್ದಾಗ ಬ್ರಿಟಿಷ್ ಪೊಲೀಸರು ಅವರನ್ನು ಬಂಧಿಸಿದರು. ನಂತರ ಜೂನ್ 9, 1900 ರಂದು 25 ನೇ ವಯಸ್ಸಿನಲ್ಲಿ ರಾಂಚಿ ಜೈಲಿನಲ್ಲಿ ನಿಧನರಾದರು. ಹೀಗೆ ಈ ಬುಡಕಟ್ಟು ಮತ್ತು ಆದಿವಾಸಿ ಸಮುದಾಯಗಳ ದೈವವಾಗಿ, ಅಲ್ಲಿನ ಸಮುದಾಯಗಳಲ್ಲಿ ಇಂದಿಗೂ ಒಂದು ದಂತಕಥೆಯಾಗಿ ಉಳಿದಿದ್ದಾರೆ.


ಇದನ್ನೂ ಓದಿ: ಬುಡಕಟ್ಟು ನಾಯಕ ಬಿರ್ಸಾ ಮುಂಡಾಗೆ ಅಮಿತ್ ಶಾ ಅವಮಾನ: ಟಿಎಂಸಿ ಆಕ್ರೋಶ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here