Homeಮುಖಪುಟದೇಶದ ಮೊಟ್ಟಮೊದಲ ಶ್ರೀಗಂಧದ ವಸ್ತು ಸಂಗ್ರಹಾಲಯ ಮೈಸೂರು ಅರಮನೆಯಲ್ಲಿ!

ದೇಶದ ಮೊಟ್ಟಮೊದಲ ಶ್ರೀಗಂಧದ ವಸ್ತು ಸಂಗ್ರಹಾಲಯ ಮೈಸೂರು ಅರಮನೆಯಲ್ಲಿ!

ಮೈಸೂರು ನಗರವು ಈಗಾಗಲೇ ಶ್ರೀಗಂಧದ ಸಾಬೂನುಗಳು, ಶ್ರೀಗಂಧದ ಎಣ್ಣೆ, ಧೂಪದ್ರವ್ಯದ ಕೋಲುಗಳು ಇತ್ಯಾದಿಗಳಿಗೆ ಹೆಸರುವಾಸಿಯಾಗಿದೆ

- Advertisement -
- Advertisement -

ಭಾರತದಲ್ಲಿ ನೂರಾರು ವಸ್ತುಸಂಗ್ರಹಾಲಯಗಳಿದ್ದು ಪ್ರತಿಯೊಂದೂ ಕೂಡಾ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಈ ಸಾಲಿಗೆ ಈಗ ದೇಶದ ಮೊಟ್ಟಮೊದಲ ಶ್ರೀಗಂಧದ ವಸ್ತು ಸಂಗ್ರಹಾಲಯವೂ ಸೇರಿಕೊಳ್ಳುತ್ತಿದ್ದು, ಇದು ಮೈಸೂರಿನಲ್ಲಿ ತಲೆಯೆತ್ತಲಿದೆ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಅದರಲ್ಲೂ ಈ ವಸ್ತು ಸಂಗ್ರಹಾಲಯವು ವಿಶ್ವ ವಿಖ್ಯಾತ ಮೈಸೂರು ಅರಮನೆಯಲ್ಲಿ ನಿರ್ಮಾಣವಾಗಲಿದೆ ಎನ್ನುವುದು ಈ ವಿಷಯಕ್ಕೆ ಮತ್ತಷ್ಟು ಮೆರುಗು ನೀಡಿದೆ.

ಮೈಸೂರು ನಗರವು ಈಗಾಗಲೇ ಗಂಧದ ಸಾಬೂನುಗಳು, ಗಂಧದ ಎಣ್ಣೆ, ಧೂಪದ್ರವ್ಯದ ಕೋಲುಗಳು ಇತ್ಯಾದಿಗಳಿಗೆ ಹೆಸರುವಾಸಿಯಾಗಿದೆ. ಈಗ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪನವರು ದೇಶದ ಮೊದಲ ಶ್ರೀಗಂಧದ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸುವ ಭರವಸೆ ನೀಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಟಿಪ್ಪು ಜನ್ಮ ದಿನಾಚರಣೆ: ಮೈಸೂರು ಹುಲಿ ಟಿಪ್ಪುವಿನ ಪುಸ್ತಕ ಪ್ರೇಮ!

ವರದಿಗಳ ಪ್ರಕಾರ ಈ ವಸ್ತುಸಂಗ್ರಹಾಲಯವನ್ನು, ಇತಿಹಾಸದ ಬಗ್ಗೆ ಮತ್ತು ಶ್ರೀಗಂಧದ ಉತ್ಪನ್ನಗಳ ಕೃಷಿಯ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುವ ರೀತಿಯಲ್ಲಿ ರಚಿಸಲು ಯೋಜನೆ ಮಾಡಲಾಗಿದೆ. ಜೊತೆಗೆಳ ಸೌಂದರ್ಯ ಮತ್ತು ವೈವಿಧ್ಯತೆಯನ್ನು ವೀಕ್ಷಿಸಲು ಇದು ಸಂದರ್ಶಕರಿಗೆ ಅವಕಾಶ ನೀಡುತ್ತದೆ.

ನವೆಂಬರ್ 25 ರ ನಂತರ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸುವ ಸಾಧ್ಯತೆಯಿದ್ದು, ನಂತರ ಇದನ್ನು ಪ್ರಸಿದ್ಧ ಮೈಸೂರು ಅರಮನೆಗೆ ಸ್ಥಳಾಂತರಿಸಲಾಗುವುದು.

ಇದನ್ನೂ ಓದಿ: ಕರ್ನಾಟಕದಲ್ಲಿ ಸಂಗೀತ ಮತ್ತು ಮೈಸೂರು ದಸರಾ – ಡಾ. ಶಶಿಕಾಂತ್ ಕೌಡೂರ್

ಪ್ರಸ್ತುತ ಈ ವಸ್ತುಸಂಗ್ರಹಾಲಯವನ್ನು ಮೈಸೂರು ಅರಣ್ಯ ವಿಭಾಗವು ತನ್ನ ಆವರಣದಲ್ಲಿ ಸ್ಥಾಪಿಸಿದೆ ಎಂದು ಅನೇಕ ವರದಿಗಳು ಉಲ್ಲೇಖಿಸಿವೆ.

ಈ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವವರಿಗೆ ಶ್ರೀ ಗಂಧದ ವರ್ಗೀಕರಣ, ಶ್ರೀಗಂಧದ ಕೃಷಿ ತಂತ್ರಗಳು ಮತ್ತು ಹಲವಾರು ಬಗೆಯ ಶ್ರೀಗಂಧದ ಮರಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಇದು ಒಂದು ವೇದಿಕೆಯಾಗಿದೆ.

ಇದನ್ನೂ ಓದಿ: ಕರ್ನಾಟಕ ಸಂಗೀತ, ಕನ್ನಡ ಮತ್ತು ಕನ್ನಡಿಗರು: ಹತ್ತೊಂಬತ್ತನೇ ಶತಮಾನದ ಮೈಸೂರು ಸಂಸ್ಥಾನದ ಕೆಲವು ನೋಟಗಳು

ವಸ್ತುಸಂಗ್ರಹಾಲಯದಲ್ಲಿ ಸಭಾಂಗಣ, ಪ್ರೊಜೆಕ್ಟರ್ ಪರದೆ ಮತ್ತು ಆರಾಮದಾಯಕ ಆಸನ ವ್ಯವಸ್ಥೆ ಇರುತ್ತದೆ. ಇಲ್ಲಿ ಶ್ರೀಗಂಧದ ಮರಕ್ಕೆ ಸಂಬಂಧಿಸಿದ ಆಡಿಯೋ ಮಾಹಿತಿಯನ್ನು ಪ್ರವಾಸಿಗರಿಗೆ ನೀಡಲಾಗುವುದು.

ಹತ್ತಾರು ಕಾರಣಗಳಿಗೆ ಪ್ರವಾಸಿಗರಿಂದ ಮೆಚ್ಚುಗೆ ಪಡೆದಿರುವ ಮೈಸೂರು, ಇದೀಗ ಮತ್ತೊಂದು ವಿಶೇಷತೆಯನ್ನು ತನ್ನ ಮಡಿಲಿಗೆ ಸೇರಿಸಿಕೊಳ್ಳಲಿದೆ. ಇನ್ನುಮುಂದೆ ಪ್ರವಾಸಕ್ಕೆಂದು ಮೈಸೂರಿಗೆ ಬರುವವರು ಈ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಬಹುದು.


ಇದನ್ನೂ ಓದಿ: ಮೈಸೂರು ವಿವಿಯಲ್ಲೊಂದು `ವೇಮುಲ’ ಪ್ರಕರಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...