ದೆಹಲಿ ಹೈಕೋರ್ಟ್‌ನಲ್ಲಿ ಸಲಿಂಗ ವಿವಾಹವನ್ನು ವಿರೋಧಿಸಿದ ಒಕ್ಕೂಟ ಸರ್ಕಾರ | Naanu gauri

ಒಕ್ಕೂಟ ಸರ್ಕಾರವು ದೆಹಲಿ ಹೈಕೋರ್ಟ್‌ನಲ್ಲಿ ಸಲಿಂಗ ವಿವಾಹವನ್ನು ವಿರೋಧಿಸಿದೆ. ಕಾನೂನಿನಡಿಯಲ್ಲಿ ಸಲಿಂಗ ವಿವಾಹಗಳನ್ನು ಗುರುತಿಸಲು ಮತ್ತು ನೋಂದಾಯಿಸಲು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ “ವಿವಾಹವು ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯ ನಡುವೆ ನಡೆಯುತ್ತದೆ” ಎಂದು ಹೇಳಿದೆ.

ಒಕ್ಕೂಟ ಸರ್ಕಾರವು ವಿಚಾರಣೆಯ ಸಂದರ್ಭದಲ್ಲಿ ‘ಸಂಗಾತಿ’ ಎಂದರೆ ಗಂಡ ಅಥವಾ ಹೆಂಡತಿ ಮತ್ತು ‘ಮದುವೆ’ ಎಂಬುದು ಭಿನ್ನಲಿಂಗೀಯ ದಂಪತಿಗಳಿಗೆ ಸಂಬಂಧಿಸಿದ ಪದವಾಗಿದೆ ಎಂದು ಸೋಮವಾರ ಪ್ರತಿಪಾದಿಸಿದೆ.

ಇದನ್ನೂ ಓದಿ: ನಾನು ಜಾತಿವಾದಿ.. ಏನೀಗ?: ಬಿಜೆಪಿ ಟ್ವೀಟ್‌ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ

ದೆಹಲಿ ಹೈಕೋರ್ಟ್‌ನಲ್ಲಿ ಸಲಿಂಗ ವಿವಾಹದ ಪರಿಕಲ್ಪನೆಯನ್ನು ವಿರೋಧಿಸಿ, ಒಕ್ಕೂಟ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ವಿವಾಹವು ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯ ನಡುವೆ ನಡೆಯುತ್ತದೆ” ಎಂದು ಪ್ರತಿಪಾದಿಸಿದ್ದಾರೆ.

ಸಮ್ಮತ ಸಲಿಂಗಕಾಮಿ ಕೃತ್ಯಗಳನ್ನು ಅಪರಾಧಿಗೊಳಿಸುವ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಅರ್ಜಿದಾರರಿಗೆ ಕೆಲವು ತಪ್ಪು ಕಲ್ಪನೆಗಳಿವೆ ಎಂದು ಅವರು ಹೇಳಿದ್ದಾರೆ.

“ಸಲಿಂಗಕಾಮಿ ದಂಪತಿಗಳ ನಡುವೆ ಮದುವೆಗೆ ಅನುಮತಿ ಇದೆಯೇ ಎಂಬುದು ಇಲ್ಲಿ ಸಮಸ್ಯೆಯಾಗಿದೆ. ಇದನ್ನು ನ್ಯಾಯಾಲಯ ಗಮನಿಸಬೇಕು. ನವತೇಜ್ ಸಿಂಗ್ ಜೋಹರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ತಪ್ಪು ಕಲ್ಪನೆಗಳಿವೆ. ಇದು ಕೇವಲ ಒಮ್ಮತದ ಸಲಿಂಗಕಾಮಿ ಕ್ರಿಯೆಗಳನ್ನು ಅಪರಾಧವಲ್ಲ ಎಂದು ಹೇಳುತ್ತದೆ. ಇದು ಮದುವೆಯ ಬಗ್ಗೆ ಮಾತನಾಡುವುದಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ: ಮಾರ್ಚ್‌ನಿಂದ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದು ಬರೋಬ್ಬರಿ 27 ಶಾಸಕರು!

LEAVE A REPLY

Please enter your comment!
Please enter your name here