Homeಮುಖಪುಟಮಹಾರಾಷ್ಟ್ರ ಸರ್ಕಾರ ರಚನೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

ಮಹಾರಾಷ್ಟ್ರ ಸರ್ಕಾರ ರಚನೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

- Advertisement -
- Advertisement -

ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿಕೂಟವು ಮಹಾರಾಷ್ಟ್ರವನ್ನು “ಹಿಂಬಾಗಿಲಿನ” ಮೂಲಕ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.

ಜನಾದೇಶವು ಬಿಜೆಪಿಯ ಪರವಾಗಿ ಸ್ಪಷ್ಟವಾಗಿ ಇರುವುದರಿಂದ ಈ ಅಪವಿತ್ರ ಮೈತ್ರಿಯನ್ನು ಏಕೆ ನಿಲ್ಲಿಸಬಾರದೆಂದು ಮಹಾರಾಷ್ಟ್ರದ ಜನರು ಪ್ರಶ್ನೆಗಳನ್ನು ಕೇಳುತ್ತಿದ್ದರು ಹಾಗಾಗಿ ಜನಾದೇಶವನ್ನು ಗೌರವಿಸಿ ಸರ್ಕಾರವನ್ನು ರಚಿಸಿದ್ದೇವೆ ಎಂದು ಅವರು ಸರ್ಕಾರದ ರಚನೆಯ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಮತ್ತು ಶಿವಸೇನೆ ಆಡಳಿತ ನಡೆಸುವ ಬಹುಮತವನ್ನು ಪಡೆದಿದೆ. ಚುನಾವಣಾ ಪೂರ್ವದಲ್ಲಿಯೇ ನಾವು ಮೈತ್ರಿ ಮಾಡಿಕೊಂಡಿದ್ದೆವು. ಜೊತೆಗೆ ಎನ್‌ಸಿಪಿಯ ಶರದ್‌ ಪವಾರ್‌ ಮತ್ತು ಕಾಂಗ್ರೆಸ್‌ ಮುಖಂಡರು ’ಜನ ನಮಗೆ ವಿಪಕ್ಷದಲ್ಲಿರುವಂತೆ ಆದೇಶ ನಿಡಿದ್ದಾರೆ ಎಂದು’ ಬಹಳ ಸಲ ಹೇಳಿದ್ದರು. ಅವರ್‍ಯಾಕೆ ಹಿಂಬಾಗಿಲ ಮೂಲಕ ಅಧಿಕಾರವಿಡಿಯಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರವು ಭಾರತದ ಆರ್ಥಿಕತೆಯ ರಾಜಧಾನಿಯಾಗಿದೆ. ಹಾಗಾಗಿ ಅದನ್ನು ತಮ್ಮ ಕೈವಶ ಮಾಡಿಕೊಳ್ಳಲು  ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿಕೂಟ ಹೊರಟಿತ್ತು. ಅದನ್ನು ನಾವು ವಿಫಲಗೊಳಿಸಿದ್ದೇವೆ ಎಂದಿದ್ದಾರೆ.

ಭಾಳಾಸಾಹೇಬ್‌ ಠಾಕ್ರೆಯವರ ಪರಂಪರೆಗೆ ಮಸಿ ಬಳಿಯುವ ಕೆಲಸವನ್ನು ಶಿವಸೇನೆ ಮಾಡುತ್ತಿದೆ ಎಂದ ಅವರು ಶಿವಸೇನೆಯು ಪ್ರಧಾನಿ ಮೋದಿಯವರ ಬಗ್ಗೆ ಆಡಿರುವ ಮಾತುಗಳು ನೋವು ತಂದಿದ್ದವು ಎಂದಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್‌ರವರು ಶುದ್ದ ಹಸ್ತರಾಗಿದ್ದು, ಈಗ ಬಿಜೆಪಿ ಸರ್ಕಾರ ರಚಿಸುವ ಮೂಲಕ ಜನರಿಗೆ ನ್ಯಾಯ ನೀಡಿದೆ ಎಂದಿದ್ದಾರೆ.

ಇನ್ನು ಮತ್ತೊರ್ವ ಸಚಿವ ನಿತಿನ್‌ ಗಡ್ಕರಿ ಮಾತನಾಡಿ “ಕ್ರಿಕೆಟ್ ಮತ್ತು ರಾಜಕೀಯಲ್ಲಿ ಏನು ಬೇಕಾದರೂ ಆಗಬಹುದು. ಈ ಕುರಿತು ಮೊದಲೇ ಹೇಳಿಕೆ ನೀಡಿದ್ದೆ, ಅದೀಗ ಇಜವಾಗಿದೆ ಎಂದಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮಗಳ ಪರೀಕ್ಷೆ, ಸಂತ್ರಸ್ತರಿಗೆ ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

0
ಔಷಧೀಯ ಕಂಪನಿ ಅಸ್ಟ್ರಾಜೆನೆಕಾ ತನ್ನ ಕೋವಿಶೀಲ್ಡ್ ಲಸಿಕೆ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಒಪ್ಪಿಕೊಂಡ ಹಿನ್ನೆಲೆ, ವಕೀಲರೊಬ್ಬರು ಈ ಲಸಿಕೆಯ ಅಡ್ಡ ಪರಿಣಾಮಗಳು ಮತ್ತು ಅಪಾಯದ ಅಂಶಗಳನ್ನು ಪರೀಕ್ಷಿಸಲು ವೈದ್ಯಕೀಯ...