Homeಮುಖಪುಟಇಸ್ರೇಲ್‌- ಪ್ಯಾಲೆಸ್ತೀನ್‌ ಸಂಘರ್ಷ ತಡೆಗೆ ನಿರ್ಣಯ ಅಂಗೀಕರಿಸಲು ಯುಎನ್ ಭದ್ರತಾ ಮಂಡಳಿ ವಿಫಲ

ಇಸ್ರೇಲ್‌- ಪ್ಯಾಲೆಸ್ತೀನ್‌ ಸಂಘರ್ಷ ತಡೆಗೆ ನಿರ್ಣಯ ಅಂಗೀಕರಿಸಲು ಯುಎನ್ ಭದ್ರತಾ ಮಂಡಳಿ ವಿಫಲ

- Advertisement -
- Advertisement -

ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವನ್ನು ಕೊನೆಗೊಳಿಸುವ ಸಲುವಾಗಿ ಯುಎನ್ ಭದ್ರತಾ ಮಂಡಳಿಯು ಕರಡು ನಿರ್ಣಯವನ್ನು ಅಂಗೀಕರಿಸಲು ಮತ್ತೊಮ್ಮೆ ವಿಫಲವಾಗಿದೆ.

ಸೋಮವಾರ ಎನ್ ಭದ್ರತಾ ಮಂಡಳಿ ಸಭೆಯಲ್ಲಿ 2 ಗಂಟೆಗಳ ಕಾಲ ಚರ್ಚೆಗಳು ನಡೆದಿದ್ದು, ಆದರೂ ಭಿನ್ನಾಭಿಪ್ರಾಯಗಳು ಮುಂದುವರಿದಿದೆ. ಕೌನ್ಸಿಲ್‌ನ ಸದಸ್ಯರು ಕದನ ವಿರಾಮಕ್ಕೆ ಒತ್ತಾಯಿಸಿದ್ದು, ಅಗತ್ಯವಿರುವ ಸಹಾಯವನ್ನು ನೀಡಿ ಗಾಝಾದಲ್ಲಿ ಹೆಚ್ಚಿನ ನಾಗರಿಕರ ಸಾವುಗಳನ್ನು ತಡೆಯಲು ಒತ್ತಾಯಿಸಿದ್ದಾರೆ.

ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಸುದ್ದಿಗಾರರ ಜೊತೆ ಮಾತನಾಡಿದ್ದು, ಗಾಝಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ಆಗ್ರಹಿಸಿದ್ದಾರೆ. ನಾಗರಿಕರ ರಕ್ಷಣೆ ಕುರಿತ ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗುತ್ತಿದೆ ಎಂದು ಗುಟೆರೆಸ್ ಹೇಳಿದ್ದಾರೆ.

ಭದ್ರತಾ ಮಂಡಳಿಯ 10 ಶಾಶ್ವತವಲ್ಲದ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ E-10 ರಾಷ್ಟ್ರಗಳು ನಿರ್ಣಯವನ್ನು ಮುಂದಿಟ್ಟಿದ್ದಾರೆ. ಆದರೆ ಖಾಯಂ ಕೌನ್ಸಿಲ್ ಸದಸ್ಯರು ವೀಟೋ ಅಧಿಕಾರವನ್ನು ಹೊಂದಿರುವ US ಮತ್ತು UK UNSC ಅಧಿವೇಶನದಲ್ಲಿ ಸೋಮವಾರ ಇದನ್ನು ವಿರೋಧಿಸಿದರು.

ಈ ಹಂತದಲ್ಲಿ ಯಾವುದೇ ಒಪ್ಪಂದವಿಲ್ಲ ಎಂದು ರಾಬರ್ಟ್ ವುಡ್ ಹೇಳಿದರು. ಆದರೆ ಇಲ್ಲಿ ಮಾನವೀಯ ನೆರವಿಗೆ ತಡೆ ನೀಡಿರುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಒಪ್ಪಿಕೊಂಡರು. ಅದು ಸ್ವೀಕಾರಾರ್ಹವೇ ಎಂಬ ಬಗ್ಗೆ ಭದ್ರತಾ ಮಂಡಳಿಯಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಅವರು ಹೇಳಿದರು.

ಚೀನಾದ ಯುಎನ್ ರಾಯಭಾರಿ ಜುನ್ ಜಾಂಗ್ ಅವರು ಗಾಝಾಕ್ಕೆ ಮಾನವೀಯ ನೆರವು ತಲುಪಿಸಲು ಅನುಕೂಲವಾಗುವಂತೆ ತುರ್ತು ಕದನ ವಿರಾಮಕ್ಕೆ ಕರೆ ನೀಡಿದ್ದಾರೆ. ನಾವು ಮಾತನಾಡುತ್ತಿರುವಂತೆ ಪ್ಯಾಲೆಸ್ತೀನ್‌ ನಾಗರಿಕರು ಕೊಲ್ಲಲ್ಪಡುತ್ತಿದ್ದಾರೆ. ಹಲವಾರು ಅಧಿಕಾರಿಗಳು ಈಗಾಗಲೇ ಹೇಳಿದಂತೆ ಗಾಝಾ, ಮಕ್ಕಳ ಸ್ಮಶಾನವಾಗುತ್ತಿದೆ. ಯಾರೂ ಸುರಕ್ಷಿತವಾಗಿಲ್ಲ ಎಂದು ಚೀನಾ ರಾಯಭಾರಿಯನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಯಭಾರಿ ಲಾನಾ ಝಕಿ ನುಸ್ಸೆಬೆಹ್, ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಅ.7ರ ದಾಳಿಯನ್ನು ನಾವು ಖಂಡಿಸುತ್ತೇವೆ. ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ವಿವೇಚನಾರಹಿತ ದಾಳಿಯನ್ನು ಕೂಡ ನಾವು ಖಂಡಿಸುತ್ತೇವೆ. ಎಲ್ಲಾ ಒತ್ತೆಯಾಳುಗಳನ್ನು ತಕ್ಷಣದ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ ಜೊತೆಗೆ ಸುರಕ್ಷತೆ, ಯೋಗಕ್ಷೇಮ ಮತ್ತು ಅಂತರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಮಾನವೀಯ ನೆರವು ನೀಡುತ್ತೇವೆ ಎಂದು ನುಸ್ಸೆಬೆಹ್ ಹೇಳಿದರು.

ಮಕ್ಕಳನ್ನು ಕೊಲ್ಲುವುದು ಮತ್ತು ಅಂಗವಿಕಲಗೊಳಿಸುವುದು, ಶಾಲೆಗಳು ಮತ್ತು ಆಸ್ಪತ್ರೆಗಳು ಮತ್ತು ಗಾಝಾ ಪಟ್ಟಿಯ ಮೇಲಿನ ದಾಳಿ ನಡೆಸುವುದು, ಮಕ್ಕಳಿಗೆ ಮಾನವೀಯ ಸಹಾಯ ನೀಡುವುದನ್ನು ತಡೆಯುವುದು  ಅತ್ಯಂತ ಗಂಭೀರ ಕಾನೂನುಗಳ ಉಲ್ಲಂಘನೆಗಳಾಗಿವೆ ಎಂದು ಹೇಳಿದ್ದಾರೆ. ಸಭೆಯಲ್ಲಿ ಯುಎನ್ ಅಧಿಕಾರಿಗಳು ಈ ಪ್ರದೇಶದಲ್ಲಿನ ಭೀಕರ ಪರಿಸ್ಥಿತಿಯ ಬಗ್ಗೆ ಭದ್ರತಾ ಮಂಡಳಿಗೆ ವಿವರಿಸಿದ್ದರು.

ಇದನ್ನು ಓದಿ: ಅಲಿಘರ್ ನಗರದ ಹೆಸರು ಹರಿಘರ್ ಎಂದು ಬದಲಾಯಿಸಲು ಅನುಮೋದನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪ| ತಾನು ನಿರ್ದೋಷಿ ಎಂದ ಬ್ರಿಜ್ ಭೂಷಣ್ ಸಿಂಗ್: ವಿಚಾರಣಾ ಹಂತ...

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದು ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಂಗಳವಾರ...