Homeಮುಖಪುಟಉತ್ತರ ಪ್ರದೇಶ: ರಕ್ತ ವರ್ಗಾವಣೆಯ ನಂತರ 14 ಮಕ್ಕಳಿಗೆ ಎಚ್‌ಐವಿ, ಹೆಪಟೈಟಿಸ್ ಸೋಂಕು

ಉತ್ತರ ಪ್ರದೇಶ: ರಕ್ತ ವರ್ಗಾವಣೆಯ ನಂತರ 14 ಮಕ್ಕಳಿಗೆ ಎಚ್‌ಐವಿ, ಹೆಪಟೈಟಿಸ್ ಸೋಂಕು

- Advertisement -
- Advertisement -

ಉತ್ತರ ಪ್ರದೇಶದ ಕಾನ್ಪುರದ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆಗೆ ಒಳಗಾಗಿದ್ದ 14 ಮಕ್ಕಳಿಗೆ ಎಚ್‌ಐವಿ, ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ಯಂತಹ ಸೋಂಕು ತಗುಲಿದೆ ಎಂದರದಿಯಾಗಿದೆ.

ಈಗಾಗಲೇ ತಲಸ್ಸೆಮಿ ಯಾ ರಕ್ತದ ಕಾಯಿಲೆಯಿಂದ ಬಳಲುತ್ತಿದ್ದ ಮಕ್ಕಳು ಕಾನ್ಪುರ ನಗರ, ಇಟಾವಾ ಮತ್ತು ಕನ್ನೌಜ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ರಕ್ತ ವರ್ಗಾವಣೆಗೆ ಬಂದಿದ್ದರು. ಈ ಮಕ್ಕಳ 6 ವರ್ಷದಿಂದ 16 ವರ್ಷದವರಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಅರುಣ್ ಆರ್ಯ ಅವರು, ”ಈ ಪೈಕಿ ಏಳು ಮಕ್ಕಳಲ್ಲಿ ಹೆಪಟೈಟಿಸ್ ಬಿ, ಐದು ಹೆಪಟೈಟಿಸ್ ಸಿ ಮತ್ತು ಇಬ್ಬರಿಗೆ ಎಚ್‌ಐವಿ ಧನಾತ್ಮಕ ಪರೀಕ್ಷೆಯಾಗಿದೆ” ಎಂದು ತಿಳಿಸಿದರು.

”ನಿಖರವಾದ ಕಾರಣ ಅಸ್ಪಷ್ಟವಾಗಿದ್ದರೂ, ರಕ್ತ ವರ್ಗಾವಣೆಯು “ವಿಂಡೋ ಪೀರಿಯಡ್” ಸಮಯದಲ್ಲಿ ಸಂಭವಿಸಿರಬಹುದು” ಎಂದು ಆರ್ಯ ಹೇಳಿದ್ದಾರೆ.

”ರಕ್ತವನ್ನು ದಾನ ಮಾಡಿದಾಗ, ರಕ್ತ ವರ್ಗಾವಣೆಗೆ ಸುರಕ್ಷಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅದನ್ನು ಪರೀಕ್ಷಿಸಲಾಗುತ್ತದೆ. ಆದಾಗ್ಯೂ, ದಾನಿಗಳಿಗೆ ವೈರಸ್ ಸೋಂಕು ತಗುಲಿದ ಕೆಲವೇ ಸಮಯದ ನಂತರ ಪರೀಕ್ಷೆಗಳನ್ನು ನಡೆಸಿದರೆ, ಅವರು ರೋಗಕಾರಕವನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಈ ಅವಧಿಯನ್ನು ವಿಂಡೋ ಅವಧಿ ಎಂದು ಕರೆಯಲಾಗುತ್ತದೆ” ಎಂದು ವಿವರಿಸಿದರು.

”ಇದು ಹಾಗೆ ತೋರುತ್ತದೆ… ಮಕ್ಕಳು ಈಗಾಗಲೇ ಗಂಭೀರ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ ಮತ್ತು ಈಗ ಹೆಚ್ಚಿನ ಆರೋಗ್ಯ ಅಪಾಯದಲ್ಲಿದ್ದಾರೆ” ಎಂದರು.

”ಜಿಲ್ಲಾ ಅಧಿಕಾರಿಗಳು ಈಗ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಸೋಂಕಿನ ಕಾರಣವನ್ನು ಗುರುತಿಸಲು ಪ್ರಯತ್ನಿಸುತ್ತಾರೆ” ಎಂದು ರಾಜ್ಯದ ರಾಷ್ಟ್ರೀಯ ಆರೋಗ್ಯ ಮಿಷನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: 2017ರಲ್ಲಿ ಆದಿತ್ಯನಾಥ್‌ ಅಧಿಕಾರ ವಹಿಸಿಕೊಂಡ ಬಳಿಕ 190 ಜನರ ಎನ್‌ಕೌಂಟರ್‌: ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...