ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಐದನೇ ಹಂತದ ಮತದಾನಕ್ಕೆ ಮುನ್ನ, ಮತದಾನದ ಹಕ್ಕನ್ನು ಚಲಾಯಿಸಲು ಜನರಲ್ಲಿ ಜಾಗೃತಿ ಮೂಡಿಸಲು ವಾರಣಾಸಿಯ ಶಿಕ್ಷಕಿಯರು ವಾರಣಾಸಿಯಲ್ಲಿ ‘ಪಿಂಕ್ ಸ್ಕೂಟಿ ರ್‍ಯಾಲಿ’ ನಡೆಸಿದ್ದಾರೆ.
ಇಡೀ ಜಿಲ್ಲೆಯ ಶಿಕ್ಷಕಿಯರು ಪಿಂಕ್ ಸ್ಕೂಟಿ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಜಾಗೃತಿ ರ್‍ಯಾಲಿಯಲ್ಲಿ ಭಾಗವಹಿಸಿದ್ದ ಎಲ್ಲಾ ಮಹಿಳೆಯರು ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ ಮತದಾರರಿಗೆ, ವಿಶೇಷವಾಗಿ ಮಹಿಳಾ ಮತದಾರರಿಗೆ ಮತದಾನದ ಶಕ್ತಿಯ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿದರು. ಅತ್ಯಧಿಕ ಸಂಖ್ಯೆಯಲ್ಲಿ ಮತ ಚಲಾಯಿಸಲು ಕರೆ ನೀಡಿದ್ದಾರೆ.
ವಾರಣಾಸಿಯ ಪೊಲೀಸ್ ಲೈನ್ ಕ್ರಾಸ್‌ರೋಡ್‌ನಿಂದ ಪ್ರಾರಂಭವಾದ ಈ ಸ್ಕೂಟಿ ರ್‍ಯಾಲಿ ಸುಮಾರು 10 ಕಿಲೋಮೀಟರ್‌ಗಳನ್ನು ಕ್ರಮಿಸಿ ಕೊನೆಗೊಂಡಿತ್ತು. ಪೋಸ್ಟರ್‌ಗಳು, ಭಿತ್ತಿಪತ್ರಗಳನ್ನು ಹಿಡಿದು ಘೊಷಣೆ ಕೂಗುತ್ತಾ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ: ಬಹುಜನ ಭಾರತ; ಬಿಜೆಪಿಗೆ ಉಳಿಗಾಲವಿಲ್ಲವೇ ಯುಪಿಯಲ್ಲಿ?
UP | 'Pink Mahila Scooty Rally' was conducted in Varanasi to encourage women voters. "We want to convey through this rally that all of us are equal and women have the right to participate in polls. They should cast their votes in as many numbers as possible," says a woman pic.twitter.com/6sIpXKz8TM
— ANI UP/Uttarakhand (@ANINewsUP) February 24, 2022
ಶಿಕ್ಷಕರೊಬ್ಬರು ಎಎನ್‌ಐ ಜೊತೆ ಮಾತನಾಡುತ್ತಾ, “ಮಹಿಳಾ ಮತದಾರರು ಸಾಮಾನ್ಯವಾಗಿ ಕಡಿಮೆ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ. ಆದ್ದರಿಂದ ಮಹಿಳೆಯರನ್ನು ಹೊರಗೆ ಬಂದು ಮತದಾನ ಮಾಡಲು ಪ್ರೇರೇಪಿಸಲು ಈ ರ್‍ಯಾಲಿ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಮತ್ತೊಬ್ಬ ಶಿಕ್ಷಕಿ,”ನಾವೆಲ್ಲರೂ ಸಮಾನರು. ಮಹಿಳೆಯರಿಗೆ ಮತದಾನದಲ್ಲಿ ಭಾಗವಹಿಸುವ ಹಕ್ಕಿದೆ ಎಂಬುದನ್ನು ನಾವು ಈ ರ‍್ಯಾಲಿಯ ಮೂಲಕ ತಿಳಿಸಲು ಬಯಸುತ್ತೇವೆ. ಅವರು ಸಾಧ್ಯವಾದಷ್ಟು ಸಂಖ್ಯೆಯಲ್ಲಿ ಮತ ಚಲಾಯಿಸಬೇಕು” ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ನಾಲ್ಕು ಹಂತಗಳು ಮುಕ್ತಾಯಗೊಂಡಿವೆ. ಉಳಿದ ಮೂರು ಹಂತಗಳು ಫೆಬ್ರವರಿ 27, ಮಾರ್ಚ್ 3 ಮತ್ತು 7 ರಂದು ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ಯುಪಿ ಸಿಎಂ ರ್‍ಯಾಲಿ ನಡೆಯುವ ಮೈದಾನಕ್ಕೆ ಬಿಡಾಡಿ ದನಗಳನ್ನು ಬಿಟ್ಟ ರೈತರು!


