Homeಮುಖಪುಟವರುಣ್ ಗಾಂಧಿಗೆ ಬಿಜೆಪಿ ಟಿಕೆಟ್ ನಿರಾಕರಣೆ; ಕಾಂಗ್ರೆಸ್‌ಗೆ ಆಹ್ವಾನಿಸಿದ ಅಧೀರ್ ರಂಜನ್ ಚೌಧರಿ

ವರುಣ್ ಗಾಂಧಿಗೆ ಬಿಜೆಪಿ ಟಿಕೆಟ್ ನಿರಾಕರಣೆ; ಕಾಂಗ್ರೆಸ್‌ಗೆ ಆಹ್ವಾನಿಸಿದ ಅಧೀರ್ ರಂಜನ್ ಚೌಧರಿ

- Advertisement -
- Advertisement -

ಉತ್ತರ ಪ್ರದೇಶದ ಪಿಲಿಭಿತ್‌ನ ಹಾಲಿ ಬಿಜೆಪಿ ಸಂಸದ ವರುಣ್ ಗಾಂಧಿ ಅವರಿಗೆ ಮುಂಬರುವ ಲೋಕಸಭೆ ಚುನಾವಣೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿದೆ. ಪಕ್ಷವು ಅವರ ಬದಲಿಗೆ ಮಾಜಿ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ ಅವರನ್ನು ಹೆಸರು ಘೋಷಣೆ ಮಾಡಿದ್ದು, ಕೇಸರಿ ಟಿಕೆಟ್ ಕೈತಪ್ಪಿದ ಕಾರಣ ಸಂಸದರು ಚುನಾವಣೆಯಲ್ಲಿ ಸ್ಪರ್ಧಿಸದೇ ಇರಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಬಿಜೆಪಿಯು ತನ್ನ ಐದನೇ ಅಭ್ಯರ್ಥಿಗಳ ಪಟ್ಟಿಯಲ್ಲಿ, ಪಿಲಿಭಿತ್ ಲೋಕಸಭಾ ಕ್ಷೇತ್ರದಿಂದ ವರುಣ್ ಗಾಂಧಿಯನ್ನು ಕೈಬಿಟ್ಟಿತು. ಆದರೆ, ಉತ್ತರ ಪ್ರದೇಶದ ಸುಲ್ತಾನ್‌ಪುರದಿಂದ ಅವರ ತಾಯಿ ಮೇನಕಾ ಗಾಂಧಿ ಅವರಿಗೆ ಟಿಕೆಟ್ ನೀಡಿದೆ. 2021ರಲ್ಲಿ ಬಿಜೆಪಿ ಸೇರಿದ ಮಾಜಿ ಕಾಂಗ್ರೆಸ್ ನಾಯಕ ಜೀತನ್ ಪ್ರಸಾದ ಅವರಿಗೆ ವರುಣ್ ಗಾಂಧಿ ಬದಲಿಗೆ ಪಿಲಿಭಿತ್‌ನಿಂದ ಟಿಕೆಟ್ ನೀಡಲಾಯಿತು.

ಬಿಜೆಪಿ ನಡೆಯಿಂದ ನೊಂದಿರುವ ವರುಣ್, ನಾಮಪತ್ರ ಸಲ್ಲಿಸಲು ಪಿಲಿಭಿತ್‌ ಕ್ಷೇತ್ರಕ್ಕೆ ಬರುವುದಿಲ್ಲ ಎನ್ನಲಾಗಿದೆ. ‘ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’ ಎಂದು ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ವರುಣ್ ಗಾಂಧಿ ತಮ್ಮ ಮುಂದಿನ ಚುನಾವಣಾ ನಡೆಗಳ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

44 ವರ್ಷದ ಬಿಜೆಪಿ ನಾಯಕ ಇತ್ತೀಚೆಗೆ ತನ್ನ ಸಹಚರರ ಮೂಲಕ ನಾಲ್ಕು ಸೆಟ್ ನಾಮಪತ್ರಗಳನ್ನು ಖರೀದಿಸಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಪಿಲಿಭಿತ್‌ನ ಪ್ರತಿ ಹಳ್ಳಿಯಲ್ಲಿ ಎರಡು ವಾಹನಗಳು ಮತ್ತು 10 ಮೋಟಾರ್‌ಸೈಕಲ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಅವರ ಎಲ್ಲ ಪಕ್ಷದ ಕಾರ್ಯಕರ್ತರಿಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಪ್ರಸಾದ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದಾಗಿನಿಂದ ವರುಣ್ ಗಾಂಧಿ ಪಾಳಯದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಮಾಜಿ ಕಾಂಗ್ರೆಸ್ ನಾಯಕ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಮಾರ್ಚ್ 27 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ವರುಣ್ ಗಾಂಧಿ ಇನ್ನೂ ನಾಮಪತ್ರ ಸಲ್ಲಿಸದ ಕಾರಣ, ಅವರು ಸ್ಪರ್ಧಿಸುವುದಿಲ್ಲ ಎಂಬ ಊಹಾಪೋಹ ಹೆಚ್ಚಾಗಿದೆ.

ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟ ನಂತರ, ಪ್ರಸಾದ್ ಅವರು ಸೋಮವಾರ ಮೊದಲ ಬಾರಿಗೆ ಪಿಲಿಭಿತ್‌ಗೆ ಭೇಟಿ ನೀಡಿದ್ದರು. ಸಿಖ್ ಸಮುದಾಯದೊಂದಿಗೆ ಸಭೆ ನಡೆಸಿದರು, “ಯಾವುದೇ ಪರಿಸ್ಥಿತಿಯಲ್ಲಿ” ನಾನು ಅವರ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ಹಲವು ಸಂದರ್ಭಗಳಲ್ಲಿ ಟೀಕಿಸಿದ ನಂತರ ವರುಣ್ ಗಾಂಧಿ, ಬಿಜೆಪಿಯ ವಿರುದ್ಧವಾಗಿ ನಿಂತಿದ್ದಾರೆ ಎಂದು ಆರೋಪಿಸಲಾಗಿದೆ.

‘ವರುಣ್ ಗಾಂಧಿಗೆ ಸ್ವಾಗತ..’; ಕಾಂಗ್ರೆಸ್‌ಗೆ ಆಹ್ವಾನಿಸಿದ ಅಧೀರ್

ವರುಣ್ ಗಾಂಧಿಯವರನ್ನು ಕಾಂಗ್ರೆಸ್‌ ಪಕ್ಷ ಸೇರುವಂತೆ ಲೋಕಸಭಶ ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಆಹ್ವಾನಿಸಿದ್ದಾರೆ.

ಉತ್ತರ ಪ್ರದೇಶದ ಪಿಲಿಭಿತ್‌ನ ಹಾಲಿ ಸಂಸದ ವರುಣ್ ಗಾಂಧಿ ಅವರನ್ನು ಬಿಜೆಪಿ ತನ್ನ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯಿಂದ ಕೈಬಿಟ್ಟ ನಂತರ, ಕಾಂಗ್ರೆಸ್ ಅವರಿಗೆ ಆಫರ್ ನೀಡಿದೆ. ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಮಂಗಳವಾರ ವರುಣ್ ಗಾಂಧಿ ಅವರು ಹಳೆಯ ಪಕ್ಷಕ್ಕೆ ಸೇರಲು “ಆತ್ಮೀಯ ಸ್ವಾಗತ” ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಧೀರ್ ಚೌಧರಿ, ಬಿಜೆಪಿ 44 ವರ್ಷದ ವರುಣ್ ಅವರನ್ನು ಚುನಾವಣಾ ಕಣದಿಂದ ಕೈಬಿಟ್ಟಿರುವುದಕ್ಕೆ ಗಾಂಧಿ ಕುಟುಂಬದಲ್ಲಿನ ಅವರ ಕುಟುಂಬದ ಬೇರುಗಳು ಕಾರಣ ಎಂದು ಆರೋಪಿಸಿದರು.

“ಅವರು (ವರುಣ್ ಗಾಂಧಿ) ಕಾಂಗ್ರೆಸ್ ಸೇರಬೇಕು, ಅವರು ಸೇರಿದರೆ ನಮಗೆ ಸಂತೋಷವಾಗುತ್ತದೆ. ಅವರು ಎತ್ತರದ ನಾಯಕ ಮತ್ತು ಸುಶಿಕ್ಷಿತ ರಾಜಕಾರಣಿ. ಅವರ ಇಮೇಜ್ ಪಾರದರ್ಶಕತೆಯನ್ನು ಹೊರಹಾಕುತ್ತದೆ. ಅವರು ಗಾಂಧಿ ಕುಟುಂಬದೊಂದಿಗೆ ಸಂಬಂಧ ಹೊಂದಿದ್ದಾರೆ. ಅವರಿಗೆ ಟಿಕೆಟ್ ಕೈತಪ್ಪಲೂ ಇದೂ ಒಂದು ಕಾರಣವಾಗಿದೆ. ಬಿಜೆಪಿ ಅವರಿಗೆ ಟಿಕೆಟ್ ನೀಡಲಿಲ್ಲ, ವರುಣ್ ಗಾಂಧಿ ಈಗ ಕಾಂಗ್ರೆಸ್ ಸೇರಬೇಕೆಂದು ನಾವು ಬಯಸುತ್ತೇವೆ” ಎಂದು ಚೌಧರಿ ಹೇಳಿದರು.

ಬಿಜೆಪಿ ತನ್ನ ಐದನೇ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ (ಮಾರ್ಚ್ 24) ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದಿಂದ ಹಾಲಿ ಸಂಸದ ವರುಣ್ ಗಾಂಧಿ ಅವರನ್ನು ಕೈಬಿಟ್ಟಿದೆ. ಆದರೆ, ಪಕ್ಷವು ಅವರ ತಾಯಿ ಮೇನಕಾ ಗಾಂಧಿ ಅವರನ್ನು ಸುಲ್ತಾನ್‌ಪುರ ಕ್ಷೇತ್ರದಿಂದ ಉಳಿಸಿಕೊಂಡಿದೆ.

ಇದನ್ನೂ ಓದಿ; ಬಿಜೆಪಿ ಅಭ್ಯರ್ಥಿ ಕಂಗನಾ ಕುರಿತು ವಿವಾದಾತ್ಮಕ ಪೋಸ್ಟ್; ಸ್ಪಷ್ಟನೆ ನೀಡಿದ ಕಾಂಗ್ರೆಸ್ ನಾಯಕಿ ಸುಪ್ರಿಯಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಎಎಪಿಯನ್ನು ಹತ್ತಿಕ್ಕಲು ಬಿಜೆಪಿ ಆಪರೇಷನ್ ಜಾದು ಆರಂಭಿಸಿದೆ..’; ಅರವಿಂದ್ ಕೇಜ್ರಿವಾಲ್

0
"ಪ್ರಧಾನಿ ನರೇಂದ್ರ ಮೋದಿ ಅವರು ಯಾರನ್ನಾದರೂ ಜೈಲಿಗೆ ಕಳುಹಿಸಬಹುದು" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕರೊಂದಿಗೆ ಇಂದು ಬಿಜೆಪಿ ಕೇಂದ್ರ ಕಚೇರಿಗೆ ಯೋಜಿತ...