Homeಮುಖಪುಟಕಾರ್ಮಿಕರಿಗೆ ಪಡಿತರ ವಿತರಿಸುತ್ತಿದ್ದ ಸ್ವರಾಜ್ ಅಭಿಯಾನದ ಕಾರ್ಯಕರ್ತರ ಮೇಲೆ RSS ಬೆಂಬಲಿಗರಿಂದ ಹಲ್ಲೆ - ಆರೋಪ

ಕಾರ್ಮಿಕರಿಗೆ ಪಡಿತರ ವಿತರಿಸುತ್ತಿದ್ದ ಸ್ವರಾಜ್ ಅಭಿಯಾನದ ಕಾರ್ಯಕರ್ತರ ಮೇಲೆ RSS ಬೆಂಬಲಿಗರಿಂದ ಹಲ್ಲೆ – ಆರೋಪ

- Advertisement -
- Advertisement -

ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್‌ ಭೂಷಣ್‌ ಅವರು ಸ್ಥಾಪಿಸಿರುವ ಸ್ವರಾಜ್ ಅಭಿಯಾನ್‌ ಸಂಘಟನೆಯ ಕಾರ್ಯಕರ್ತರು ಬೆಂಗಳೂರಿನಲ್ಲಿ ಲಾಕ್‌ಡೌನ್‌ನಿಂದ ಸಂತ್ರಸ್ತರಾದ ಕಾರ್ಮಿಕರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸುವಾಗ ಆರ್‌ಎಸ್‌ಎಸ್ ಬೆಂಬಲಿಗರು ಹಲ್ಲೆ ನಡೆಸಿರುವ ಘಟನೆ ಜರುಗಿದೆ.

ಕಳೆದ ವಾರ ಏಪ್ರಿಲ್ 04 ರಂದು ಬೆಂಗಳೂರಿನ ದಾಸರಹಳ್ಳಿಯಲ್ಲಿ ಕೊರೊನಾ ಲಾಕ್‌ಡೌನ್ ಮಧ್ಯೆ ಪರಿಹಾರ ಸಾಮಗ್ರಿಗಳನ್ನು ವಿತರಿಸುವಾಗ ಈ ಘಟನೆ ನಡೆದಿದೆ. ಅಪರಿಚಿತ ಜನರು ಸ್ವರಾಜ್ ಅಭಿಯಾನದ ಕಾರ್ಯಕರ್ತೆಯಾದ ಝರೀನ್ ತಾಜ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು “ದಿ ಹಿಂದೂ” ವರದಿ ಮಾಡಿದೆ. ದಾಳಿಕೋರರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಎಂದು ತಾಜ್ ಆರೋಪಿಸಿದ್ದಾರೆ.

ಈ ಘಟನೆಯಲ್ಲಿ ಅವರ ಮಗ ಮತ್ತು ಅವನ ಸ್ನೇಹಿತ ಸೇರಿದಂತೆ ನಾಲ್ವರು ಕುಟುಂಬ ಸದಸ್ಯರು ಗಾಯಗೊಂಡಿದ್ದಾರೆ ಎಂದು ತಾಜ್ ಹೇಳಿದ್ದಾರೆ. “ಆರೋಗ್ಯ ಇಲಾಖೆಯು ಪರಿಶೀಲನೆ ನಡೆಸಿ ಇದನ್ನು ಸುರಕ್ಷಿತವೆಂದು ಪ್ರಮಾಣಗೊಳಿಸುವವರೆಗೂ ಪಡಿತರವನ್ನು ವಿತರಿಸಲು ಬಿಡುವುದಿಲ್ಲ ಎಂದು ಧಮಕಿ ಹಾಕಿದ ಆರ್‌ಎಸ್‌ಎಸ್‌ ಕಾರ್ಯಕರ್ತರು ನಾವು ಉದ್ದೇಶಪೂರ್ವಕವಾಗಿ ವೈರಸ್ ಹರಡುತ್ತಿದ್ದೇವೆ ಎಂದು ನಿಂದಿಸಿದ್ದಾರೆ” ಎಂದು ತಾಜ್ ಕಿಡಿಕಾರಿದ್ದಾರೆ. ದಾಳಿ ಮಾಡಿದ ನಂತರ ನಮ್ಮ ಮೇಲೆಯೇ ಪಡಿತರ ವಿತರಿಸುವಾಗ ಸಾಮಾಜಿಕ ಅಂತರವನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿ ದೂರು ಸಹ ದಾಖಲಿಸಿದ್ದಾರೆ ಎಂದು ತಾಜ್‌ ತಿಳಿಸಿದ್ದಾರೆ.

ಈ ಬಗ್ಗೆ ಸ್ವರಾಜ್ ಅಭಿಯಾನ ಮುಖ್ಯಸ್ಥರಾರ ಯೋಗೇಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ.

ಹಲ್ಲೆಗೊಳಗಾದವರನ್ನು ಝರೀನ್ ತಾಜ್ ಅವರ ಪುತ್ರ ಹಾಗೂ ಸ್ವರಾಜ್ ಅಭಿಯಾನದ ಬೆಂಗಳೂರು ಜಿಲ್ಲಾ ಕಾರ್ಯದರ್ಶಿಯಾದ ಸೈಯದ್ ತಬ್ರೆಜ್, ಕಿರಣ್, ಜುನೈದ್, ರಿಯಾಜ್, ಫಿರೋಜ್ ಮತ್ತು ಅಮ್ಜದ್ ಎಂದು ಗುರುತಿಸಲಾಗಿದೆ.

ಈ ಕುರಿತು ಝರಿನಾ ತಾಜ್‌ರವರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಂದಕ್ಕೆ ಇಂತಹ ಅಡೆತಡೆಗಳು ನಡೆಯದಂತೆ ಕ್ರಮಕೈಗೊಳ್ಳುತ್ತೇವೆ ಎಂದು ಪೋಲಿಸರು ಭರವಸೆ ನೀಡಿದ್ದರು, ಆದರೆ ಸೋಮವಾರವೂ ಸಹ ಅವರು ಪಡಿತರವನ್ನು ವಿತರಿಸುವಾಗ, ಏಪ್ರಿಲ್ 4 ರಂದು ಎದುರಿಸಿದವರಿಗಿಂತ ಭಿನ್ನವಾದ ಆರು ಜನರ ಗುಂಪು ಕ್ರಿಕೆಟ್ ಬ್ಯಾಟ್ ಗಳಿಂದ ಹಲ್ಲೆ ಮಾಡಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಮತ್ತೊಂದು ದೂರು ನೀಡಲು ಹೋದರೆ ಪೊಲೀಸರು ರಾಜಿ ಮಾಡಿಕೊಳ್ಳಿ ಎಂದು ಒತ್ತಡ ಮಾಡುತ್ತಿದ್ದಾರೆ ಅವರು ಆರೋಪಿಸಿದ್ದಾರೆ.

“ನಮ್ಮಲ್ಲಿ ಐದು ಜನರು ತೀವ್ರವಾಗಿ ಗಾಯಗೊಂಡಿದ್ದೇವೆ, ನಾವು ಹಸಿದವರಿಗೆ ಸಹಾಯ ಮಾಡಲು ಬಯಸುವುದು ತಪ್ಪೇ?” ಎಂದು ತಾಜ್ ಹೇಳಿದ್ದಾರೆ.

“ಮುಸ್ಲಿಮರು ಪಡಿತರದಲ್ಲಿ ವಿಷವನ್ನು ನೀಡುತ್ತಿದ್ದಾರೆ, ನೀವು ಇಲ್ಲಿ ಆಹಾರವನ್ನು ತಲುಪಿಸುವಂತಿಲ್ಲ, ಕೂಡಲೆ ನೀವು ಕೊಳೆಗೇರಿ ಬಿಟ್ಟು ಬೇರೆಡೆಗೆ ಹೋಗಬೇಕು” ಎಂದು ಹಲ್ಲೆ ನಡೆಸಿದವರು ಹೇಳಿದ್ದಾರೆ ಎಂದು ತಾಜ್ ಆರೋಪಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಶಾಂಪುರದ ಡಾ.ಅಂಬೇಡ್ಕರ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಕೋಮು ದ್ವೇಷವನ್ನು ಹರಡುವ ಯಾರೊಬ್ಬನ್ನೂ ಪೊಲೀಸರು ಸಹಿಸುವುದಿಲ್ಲ ಎಂದು ಬೆಂಗಳೂರು ಉಪ ಪೊಲೀಸ್ ಆಯುಕ್ತ (ಈಶಾನ್ಯ) ಭೀಮಾಶಂಕರ್ ಗುಳೆದ್‌ ಹೇಳಿದ್ದಾರೆ. ಈ ವಿಷಯದಲ್ಲಿ ಪ್ರಕರಣ ದಾಖಲಿಸಿ ಮತ್ತು ಆರೋಪಿಗಳನ್ನು ಬಂಧಿಸಲಾಗುವುದು ಎಂದಿದ್ದಾರೆ. ಇದನ್ನು ಮೊದಲು ಏಕೆ ಮಾಡಲಾಗಿಲ್ಲ ಎಂದು ಪ್ರಶ್ನಿಸಿದಾಗ, ಸಂತ್ರಸ್ತರು ಪ್ರಕರಣ ದಾಖಲಿಸಲು ಬಯಸಿರಲಿಲ್ಲ ಎಂದು ಗುಳೆದ್‌ ಹೇಳಿದ್ದಾರೆ.

ಕಳೆದ ವಾರ, ಮುಸ್ಲಿಂ ಸಮುದಾಯದ ನಿಯೋಗವು, ಎಲ್ಲಾ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದ್ವೇಷದ ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡುವಂತೆ, ಮಹಾನಿರ್ದೇಶಕರು ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಪ್ರವೀಣ್ ಸೂದ್ ಅವರಿಗೆ ಮನವಿ ಮಾಡಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...