Homeನಿಜವೋ ಸುಳ್ಳೋನಾವು ಮೋದಿಯವರ ಕ್ರಮವನ್ನು ಬೆಂಬಲಿಸಿ, ಅನುಸರಿಸುತ್ತೇವೆ - ಚಿದಂಬರಂ: ಈ ಸುದ್ದಿ ನಿಜವೇ?

ನಾವು ಮೋದಿಯವರ ಕ್ರಮವನ್ನು ಬೆಂಬಲಿಸಿ, ಅನುಸರಿಸುತ್ತೇವೆ – ಚಿದಂಬರಂ: ಈ ಸುದ್ದಿ ನಿಜವೇ?

- Advertisement -
- Advertisement -

ಏಪ್ರಿಲ್ 14ರಂದು ನರೇಂದ್ರ ಮೋದಿಯವರು ಲಾಕ್‌ಡೌನ್ ಕುರಿತು ದೇಶವನ್ನು ಉದ್ದೇಶಿಸಿ ಮಾತನಾಡಿದರು. ಮೇ 03ರವರೆಗ ಲಾಕ್‌ಡೌನ್ ವಿಸ್ತರಿಸುವುದಾಗಿ ಘೋಷಿಸಿದರು.

ಕೂಡಲೇ ಕನ್ನಡದ ಫೇಕ್‌ನ್ಯೂಸ್ ಹರಡುವ ಪೋಸ್ಟ್‌ಕಾರ್ಡ್ ಕನ್ನಡ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರ ಉತ್ತಮವಾಗಿದೆ. ನಾವು ಮೋದಿಯವರ ಕ್ರಮವನ್ನು ಬೆಂಬಲಿಸಿ ಅನುಸರಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದಾರೆ ಎಂಬ ಸುಳನ್ನು ಪ್ರಸಾರ ಮಾಡಿತು.

ಈ ಕುರಿತು ನಾನುಗೌರಿ.ಕಾಂ ಫ್ಯಾಕ್ಟ್‌ ಚೆಕ್‌ ಮಾಡಿತು. ಚಿದಂಬರಂರವರ ಪತ್ರಿಕಾ ಹೇಳಿಕೆಗಳು, ಟ್ವೀಟ್‌ಗಳನ್ನು ಪರಿಶೀಲಿಸಿತು.

ಸತ್ಯ: ಚಿದಂಬರಂರವರು ಮೋದಿಯವರು ಬಡವರಿಗಾಗಿ ಏನನ್ನು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ವ್ಯಂಗ್ಯವಾಡಿದ್ದಾರೆ. ಅದನ್ನೇ ಪೋಸ್ಟ್ ಕಾರ್ಡ್ ಕನ್ನಡ ತಿರುಚಿ ಸುದ್ದಿ ಮಾಡಿದೆ. ಚಿದಂಬರಂ ಹೇಳಿದ್ದು ಕೆಳಗಿದೆ ನೋಡಿ.

ಆಹಾರಕ್ಕಾಗಿ ಕೋರುವುದು ಸೇರಿದಂತೆ 21+19 ದಿನಗಳವರೆಗೆ ಬಡವರು ತಮ್ಮನ್ನು ತಾವು ಕಾಪಾಡಿಕೊಳ್ಳಲು ಬಿಡಲಾಗಿದೆ. ಹಣವಿದೆ, ಆಹಾರವಿದೆ, ಆದರೆ ಸರ್ಕಾರ ಹಣ ಅಥವಾ ಆಹಾರವನ್ನು ಬಿಡುಗಡೆ ಮಾಡುವುದಿಲ್ಲ.

ಸಿಎಂಗಳ ಹಣದ ಬೇಡಿಕೆಯ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಮಾರ್ಚ್ 25, 2020ರ ಕೆಟ್ಟ ಪ್ಯಾಕೇಜ್‌ಗೆ ಒಂದು ರೂಪಾಯಿ ಕೂಡ ಸೇರಿಸಲಾಗಿಲ್ಲ

ರಘುರಾಮ್ ರಾಜನ್‌ರಿಂದ ಜೀನ್ ಡ್ರೆಜ್, ಪ್ರಭಾತ್ ಪಟ್ನಾಯಕ್‌ರಿಂದ ಅಭಿಜಿತ್ ಬ್ಯಾನರ್ಜಿವರೆಗೆ ಅವರ ಸಲಹೆಗಳು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ.

ನಾವು ಪ್ರಧಾನಿಯವರ ಹೊಸ ವರ್ಷದ ಶುಭಾಶಯಗಳನ್ನು ಪರಸ್ಪರ ತಿಳಿಸುತ್ತೇವೆ. ಲಾಕ್‌ಡೌನ್ ವಿಸ್ತರಿಸುವ ಕಡ್ಡಾಯವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಾವು ನಿರ್ಧಾರವನ್ನು ಬೆಂಬಲಿಸುತ್ತೇವೆ ಎಂದು ವ್ಯಂಗ್ಯ ಮತ್ತು ಸಿಟ್ಟಿನಿಂದ ಬರೆದಿದ್ದಾರೆ.

ಇನ್ನೂ ಮುಂದುವರೆದು ಪಿ.ಚಿದಂಬರಂರವರು ದೇಶದ ಬಡಜನರ ಪರಿಸ್ಥಿತಿ ಕುರಿತು “ಪ್ರೀತಿಯ ದೇಶವೇ ಅತ್ತು ಬಿಡು” ಎಂದು ಹೇಳಿದ್ದಾರೆ.


ಇದನ್ನೂ ಓದಿ: Fact Check: ಸೋನಿಯಾ ಗಾಂಧಿ 4ನೇ ಶ್ರೀಮಂತ ಮಹಿಳಾ ರಾಜಕಾರಣಿ ಅಲ್ಲ. ಆದರೂ ಸುಳ್ಳು ಹರಡಿದ ಪೋಸ್ಟ್‌ ಕಾರ್ಡ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...