Homeಮುಖಪುಟಸಾಯುತ್ತೇವೆ ವಿನಃ ಹೋರಾಟದಿಂದ ಹಿಂದೆ ಸರಿಯುವುದಿಲ್ಲ: ಲಾಲು ಪ್ರಸಾದ್ ಯಾದವ್

ಸಾಯುತ್ತೇವೆ ವಿನಃ ಹೋರಾಟದಿಂದ ಹಿಂದೆ ಸರಿಯುವುದಿಲ್ಲ: ಲಾಲು ಪ್ರಸಾದ್ ಯಾದವ್

- Advertisement -
- Advertisement -

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌‌ ಯಾದವ್ ಜೈಲಿನಿಂದ ಬಡುಗಡೆಯಾದ ನಂತರ ತಮ್ಮ ಮೊದಲ ಸಾರ್ವಜನಿಕ ಭಾಷಣದಲ್ಲಿ, ತಮ್ಮ ಮಗ ತೇಜಸ್ವಿ ಯಾದವ್ ಅವರ ಕಾರಣದಿಂದಾಗಿ ತಾನು ಜೀವಂತವಾಗಿದ್ದೇನೆ ಎಂದು ಹೇಳಿದ್ದಾರೆ. ತಾನು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧದ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.

ತಾನು ಸ್ಥಾಪಿಸಿದ ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ಪಕ್ಷದ 25 ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಲಾಲು ಪ್ರಸಾದ್‌ ಯಾದವ್‌‌, ಕಳೆದ ವರ್ಷ ಬಿಹಾರ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ ರೀತಿಗೆ, ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಬಿಹಾರ: ನನ್ನವರೇ ನನಗೆ ದ್ರೋಹ ಬಗೆದಿದ್ದಾರೆ ಎಂದ ಚಿರಾಗ್ ಪಾಸ್ವಾನ್

“ನಿಜವಾಗಿಯು ಹೇಳಬೇಕೆಂದರೆ, ನಾನು ಇದನ್ನು ತೇಜಸ್ವಿಯಿಂದ ಎಂದಿಗೂ ನಿರೀಕ್ಷಿಸಿರಲಿಲ್ಲ. ತೇಜಸ್ವಿ ಸುರಕ್ಷಿತವಾಗಿ ಆರ್‌ಜೆಡಿಯ ದೋಣಿಯನ್ನು ಮುನ್ನಡೆಸಿದ. ಆರ್‌ಜೆಡಿಗೆ ಉಜ್ವಲ ಭವಿಷ್ಯವಿದೆ” ಎಂದು ಲಾಲು ಪ್ರಸಾದ್ ಹೇಳಿದ್ದಾರೆ.

ತಾನು ಶೀಘ್ರದಲ್ಲೇ ರಾಜಕೀಯಕ್ಕೆ ಮರಳಲಿದ್ದೇನೆ ಎಂದು ತಮ್ಮ ಪಕ್ಷಕ್ಕೆ ಭರವಸೆ ನೀಡಿದ ಅವರು, “ನಾವು ಸಾಯುತ್ತೇವೆ ವಿನಃ ಹೋರಾಟದಿಂದ ಹಿಂದೆ ಸರಿಯುವುದಿಲ್ಲ” ಎಂದು ಘೋಷಿಸಿದ್ದಾರೆ.

ಲಾಲು ಪ್ರಸಾದ್‌ ಇಲ್ಲದೆ ಮೊದಲ ಬಾರಿಗೆ ಚುನಾವಣೆಯಲ್ಲಿ ಹೋರಾಡಿದ ಆರ್‌ಜೆಡಿ, ಬಿಹಾರ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನವನ್ನು ಗಳಿಸಿತ್ತು. ಆದರೆ ಬಹುಮತವಿಲ್ಲದೆ ಇದ್ದರಿಂದ ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರ ಎನ್‌ಡಿಎ ಒಕ್ಕೂಟವು ಸರ್ಕಾರ ರಚಿಸುವಂತಾಯಿತು.

ಮೇವು ಹಗರಣ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಲಾಲು ಪ್ರಸಾದ್‌ಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಇದನ್ನೂ ಓದಿ: ಉದ್ಯೋಗ ಕೇಳಿದ ಯುವಜನರ ಮೇಲೆ ಲಾಠಿ ಪ್ರಯೋಗಿಸಿದ ಬಿಹಾರ ಸರ್ಕಾರ

2017 ರ ಡಿಸೆಂಬರ್‌ನಿಂದ ಜೈಲಿನಲ್ಲಿರುವ 72 ವರ್ಷದ ಲಾಲು ಪ್ರಸಾದ್‌, ಜಾರ್ಖಂಡ್‌ನ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ತನ್ನ ಹೆಚ್ಚಿನ ಜೈಲು ಶಿಕ್ಷೆಯ ಅವಧಿಯನ್ನು ಅನುಭವಿಸಿದ್ದಾರೆ. ಜನವರಿಯಲ್ಲಿ ಅವರ ಆರೋಗ್ಯ ಹದಗೆಟ್ಟಿದ್ದು, ನಂತರ ಅವರನ್ನು ದೆಹಲಿಗೆ ಕರೆತರಲಾಯಿತು.

ವರದಿಗಳ ಪ್ರಕಾರ, ಅವರು ದೆಹಲಿಯಲ್ಲಿರುವ ತಮ್ಮ ಮಗಳು ಮಿಸಾ ಭಾರತಿ ಅವರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ತಮ್ಮ ಭಾಷಣದಲ್ಲಿ ಅವರು, ಒಕ್ಕೂಟ ಸರ್ಕಾರ ಮತ್ತು ಬಿಹಾರದ ನಿತೀಶ್ ಕುಮಾರ್ ಸರ್ಕಾರದ ಮೇಲೆ ಆಡಳಿತದಲ್ಲಿನ ವೈಫಲ್ಯಗಳಿಗಾಗಿ ವಾಗ್ದಾಳಿ ನಡೆಸಿದ್ದಾರೆ.

“ಜಿಎಸ್ಟಿ ಮತ್ತು ನೋಟು ಅಮಾಣ್ಯೀಕರಣವು ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಈಗ, ಸಾಮಾಜಿಕ ಸಾಮರಸ್ಯವನ್ನು ನಾಶಪಡಿಸುವ ಬೆದರಿಕೆ ಇದೆ. ಅಯೋಧ್ಯೆಯ ನಂತರ, ಕೆಲವರು ಮಥುರಾ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಲಾಲು ಪ್ರಸಾದ್‌ ಹೇಳಿದ್ದಾರೆ.

“ಐದು ಪ್ರಧಾನ ಮಂತ್ರಿಗಳನ್ನು” ಮಾಡುವಲ್ಲಿ ತಾನು ಪ್ರಮುಖ ಪಾತ್ರ ವಹಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ತಮ್ಮ ಪಕ್ಷವು ತನ್ನ ಸದಸ್ಯ ಬಲದೊಂದಿಗೆ ಪ್ರಬಲವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಇದು ರಾಹುಲ್ ಗಾಂಧಿಯ ವಯನಾಡ್ ಕ್ಷೇತ್ರವಲ್ಲ – ಬಿಹಾರದ ಹಳೆಯ ರಸ್ತೆಯ ಚಿತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...