Homeಮುಖಪುಟನಾವು 55 ಸ್ಥಾನಗಳನ್ನು ಗೆದ್ದರೆ ಅಚ್ಚರಿಪಡಬೇಡಿ: ಬಿಜೆಪಿಯ ಮನೋಜ್‌ ತಿವಾರಿ!

ನಾವು 55 ಸ್ಥಾನಗಳನ್ನು ಗೆದ್ದರೆ ಅಚ್ಚರಿಪಡಬೇಡಿ: ಬಿಜೆಪಿಯ ಮನೋಜ್‌ ತಿವಾರಿ!

- Advertisement -
- Advertisement -

ದೆಹಲಿ ಚುನಾವಣೆಯ ಮತ ಎಣಿಕೆಯ ಮುನ್ನ, 70 ಸದಸ್ಯರ ವಿಧಾನಸಭೆಯಲ್ಲಿ “55 ಸ್ಥಾನಗಳನ್ನು” ಗೆದ್ದು ನಾವು ಅಧಿಕಾರಕ್ಕೆ ಬರಲಿದ್ದೇವೆ ಎಂಬ ವಿಶ್ವಾಸವನ್ನು ಬಿಜೆಪಿಯ ದೆಹಲಿ ಮುಖ್ಯಸ್ಥ ಮನೋಜ್ ತಿವಾರಿ ವ್ಯಕ್ತಪಡಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ ಗೆಲ್ಲುತ್ತದೆ ಎಂಬ ಎಕ್ಸಿಟ್‌ ಪೋಲ್‌ಗಳನ್ನು ತಿರಸ್ಕರಿಸಿದ ಮನೋಜ್ ತಿವಾರಿ, ಮೊನ್ನೆ “ನಾವು 48 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ” ಎಂದಿದ್ದರು. ಇಂದು 55 ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

“ನಾವು 55 ಸ್ಥಾನಗಳನ್ನು ಗೆದ್ದರೆ ಅಚ್ಚರಿಪಡಬೇಡಿ, ಎಲ್ಲರೂ ಜನಾದೇಶವನ್ನು ಒಪ್ಪಿಕೊಳ್ಳಬೇಕು ಮತ್ತು ಫಲಿತಾಂಶ ಏನೇ ಇರಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು ಯಾರೂ ದೂಷಿಸಬಾರದು” ಎಂದು ಅವರು ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಎಂದೂ ಸಹ ಹೇಳಿದ್ದಾರೆ.

ಆದರೆ ಮತ ಎಣಿಕೆಯ ಆರಂಭಿಕ ಟ್ರೆಂಡ್‌ಗಳಲ್ಲಿ ಆಮ್‌ ಆದ್ಮಿ ಪಕ್ಷವು ಈಗಾಗಲೇ 52 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವುದರಿಂದ ಮನೋಜ್‌ ತಿವಾರಿಯವರಿಗೆ ತೀವ್ರ ನಿರಾಸೆಯಾಗುವುದು ಖಚಿತವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...