Homeಮುಖಪುಟತೀಸ್ತಾ ಸೆಟಲ್ವಾಡ್‌ರನ್ನು ಮತ್ತೆ ಜೈಲಿಗೆ ಕಳುಹಿಸಲು ಏಕೆ ಬಯಸುತ್ತೀರಿ? ಸಿಬಿಐಗೆ ಸುಪ್ರೀಂ ಪ್ರಶ್ನೆ

ತೀಸ್ತಾ ಸೆಟಲ್ವಾಡ್‌ರನ್ನು ಮತ್ತೆ ಜೈಲಿಗೆ ಕಳುಹಿಸಲು ಏಕೆ ಬಯಸುತ್ತೀರಿ? ಸಿಬಿಐಗೆ ಸುಪ್ರೀಂ ಪ್ರಶ್ನೆ

- Advertisement -
- Advertisement -

ಏಳು ವರ್ಷಕ್ಕೂ ಹೆಚ್ಚು ಕಾಲ ಜಾಮೀನಿನ ಮೇಲೆ ಹೊರಗಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮತ್ತು ಅವರ ಪತಿ ಜಾವೇದ್ ಆನಂದ್ ಅವರನ್ನು ಮತ್ತೆ ಜೈಲಿಗೆ ಏಕೆ ಕಳುಹಿಸಲು ಬಯಸುತ್ತೀರಿ ಎಂದು ಸುಪ್ರೀಂ ಕೋರ್ಟ್ ಬುಧವಾರ ಗುಜರಾತ್ ಪೊಲೀಸರು ಮತ್ತು ಕೇಂದ್ರ ತನಿಖಾ ದಳವನ್ನು ಕೇಳಿದೆ ಎಂದು ಪಿಟಿಐ ವರದಿ ಮಾಡಿದೆ.

ಜಸ್ಟಿಸ್‌ಗಳಾದ ಎಸ್‌ಕೆ ಕೌಲ್, ಎಎಸ್ ಓಕಾ ಮತ್ತು ಬಿವಿ ನಾಗರತ್ನ ಅವರ ಪೀಠವು ಗುಜರಾತ್ ಪೊಲೀಸರು ಮತ್ತು ಕೇಂದ್ರೀಯ ತನಿಖಾ ದಳ ಸಲ್ಲಿಸಿದ ಮೂರು ಎಫ್‌ಐಆರ್‍‌ಗಳಿಗೆ ಸಂಬಂಧಿಸಿದಂತೆ ಸೆಟಲ್‌ವಾಡ್, ಆನಂದ್ ದಂಪತಿಗಳ ವಿರುದ್ಧ ವಿಚಾರಣೆ ನಡೆಸುತ್ತಿದೆ. 2002ರಲ್ಲಿ ಗುಜರಾತ್ ದಂಗೆಯ ಸಂತ್ರಸ್ತರಿಗಾಗಿ ಸಮಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ದಂಪತಿಗಳ ವಿರುದ್ಧ ದೂರು ದಾಖಲಿಸಲಾಗಿದೆ.

ಸೆಟಲ್ವಾಡ್ ಮತ್ತು ಆನಂದ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ವಕೀಲೆ ಅಪರ್ಣಾ ಭಟ್ ಅವರು, ತಮ್ಮ ವಿರುದ್ಧದ ಪ್ರಕರಣಗಳು ಎಂಟು ವರ್ಷಗಳಿಂದ ಬಾಕಿ ಉಳಿದಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯವು ಸೆಟಲ್ವಾಡ್ ಮತ್ತು ಆನಂದ್‌ಗೆ ನಿರೀಕ್ಷಣಾ ಜಾಮೀನು ಮತ್ತು ಸಾಮಾನ್ಯ ಜಾಮೀನು ಮಂಜೂರು ಮಾಡಿದೆ. ಆದರೆ ತನಿಖಾ ಸಂಸ್ಥೆಗಳು ಇನ್ನೂ ಚಾರ್ಜ್‌ಶೀಟ್ ಸಲ್ಲಿಸಬೇಕಿದೆ ಎಂದು ಸಿಬಲ್ ಹೇಳಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.

“ನೀವು ಯಾರನ್ನಾದರೂ ಎಷ್ಟು ಸಮಯದವರೆಗೆ ಕಸ್ಟಡಿಯಲ್ಲಿ ಇರಿಸಬಹುದು ಎಂಬುದು ಪ್ರಶ್ನೆಯಾಗಿದೆ ಎಂದು ಕೋರ್ಟ್ ಹೇಳಿದೆ. ಏಕೆಂದರೆ ನಿರೀಕ್ಷಣಾ ಜಾಮೀನು ನೀಡಿ ಏಳು ವರ್ಷಗಳು ಕಳೆದಿವೆ ಆದರೂ ಈಗ ನೀವು ಅವಳನ್ನು ಮತ್ತೆ ಜೈಲಿಗೆ ಕಳುಹಿಸಲು ಬಯಸುತ್ತೀರಿ” ಎಂದಿದೆ.

ಕೇಂದ್ರೀಯ ತನಿಖಾ ದಳ ಮತ್ತು ಗುಜರಾತ್ ಪೊಲೀಸರು ಬಾಕಿ ಉಳಿದಿರುವ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶವನ್ನು ಕೋರಿದರು.

ಇದನ್ನೂ ಓದಿ: ಖ್ಯಾತ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ಗೆ ಜಾಮೀನು; ಪಾಸ್‌ಪೋರ್ಟ್‌ ಒಪ್ಪಿಸುವಂತೆ ಷರತ್ತು

ಸೆಟಲ್ವಾಡ್ ಮತ್ತು ಆನಂದ್ ವಿರುದ್ಧ ಎಫ್ಐಆರ್

2014 ರಲ್ಲಿ, ಅಹಮದಾಬಾದ್ ಕ್ರೈಂ ಬ್ರಾಂಚ್ ನಗರದ ಗುಲ್ಬರ್ಗ್ ಹೌಸಿಂಗ್ ಸೊಸೈಟಿಯಲ್ಲಿ ಮ್ಯೂಸಿಯಂ ಆಫ್ ರೆಸಿಸ್ಟೆನ್ಸ್ ನಿರ್ಮಾಣಕ್ಕೆ ಸಂಬಂಧಿಸಿದ ವಿಷಯದಲ್ಲಿ ವಂಚನೆ, ನಂಬಿಕೆ ಉಲ್ಲಂಘನೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ ಎಂದು ಪಿಟಿಐ ವರದಿ ಮಾಡಿದೆ.

2002 ರ ಗುಜರಾತ್ ಗಲಭೆಯ ಸಂದರ್ಭದಲ್ಲಿ, ಫೆಬ್ರವರಿ 28, 2002 ರಂದು ಗುಲ್ಬರ್ಗ್ ಸೊಸೈಟಿಯಲ್ಲಿ 69 ಜನರನ್ನು ಕೊಲ್ಲಲಾಯಿತು. ಕಲ್ಲು ಎಸೆದು ಮತ್ತು ಮನೆಗಳಿಗೆ ಬೆಂಕಿ ಹಚ್ಚಿ ದಾಳಿ ನಡೆಸಲಾಯಿತು. ಇ ದಾಳಿಯಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಕೂಡ ಸಾವನ್ನಪ್ಪಿದ್ದರು.

‘ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ಮತ್ತು ಸಬ್ರಂಗ್ ಟ್ರಸ್ಟ್’ ಎಂಬ ಎರಡು ಲಾಭರಹಿತ ಸಂಸ್ಥೆಗಳ ಟ್ರಸ್ಟಿಗಳಾದ ಸೆಟಲ್ವಾಡ್ ಮತ್ತು ಆನಂದ್ ಅವರು ಕೋಟ್ಯಂತರ ರೂಪಾಯಿಗಳನ್ನು ದೇಣಿಗೆಯಾಗಿ ಸಂಗ್ರಹಿಸಿದ್ದಾರೆ. ಆದರೆ ಆ ಹಣವನ್ನು ಇವರು ಮ್ಯೂಸಿಯಂ ನಿರ್ಮಿಸಲು ಅಥವಾ ಗುಲ್ಬರ್ಗ್ ಸೊಸೈಟಿಯ ನಿವಾಸಿಗಳಿಗೆ ಸಹಾಯವನ್ನು ನೀಡಲು ಬಳಸಲಿಲ್ಲ ಎಂದು ಆರೋಪಿಸಲಾಗಿದೆ.

ದಂಪತಿಗಳ ವಿರುದ್ಧದ ಎರಡನೇ ಎಫ್‌ಐಆರ್ ವಿದೇಶಿ ನಿಧಿಯ ದುರುಪಯೋಗಕ್ಕೆ ಸಂಬಂಧಿಸಿದ್ದಾಗಿದೆ. ಇದನ್ನು ಕೇಂದ್ರೀಯ ತನಿಖಾ ದಳವು ತನಿಖೆ ನಡೆಸುತ್ತಿದೆ. ‘ದಂಪತಿಗಳು ಸ್ಥಾಪಿಸಿದ ಸಬ್ರಾಂಗ್ ಕಮ್ಯುನಿಕೇಷನ್ ಮತ್ತು ಪಬ್ಲಿಷಿಂಗ್ ಕಂಪನಿಯು ಯುಎಸ್ ಮೂಲದ ಫೋರ್ಡ್ ಫೌಂಡೇಶನ್‌ನಿಂದ ಕೇಂದ್ರ ಸರ್ಕಾರದ ಕಡ್ಡಾಯ ಅನುಮೋದನೆಯಿಲ್ಲದೆ 1.8 ಕೋಟಿ ರೂಪಾಯಿಗಳನ್ನು ಪಡೆದಿದೆ’ ಎಂದು ಕೇಂದ್ರೀಯ ಸಂಸ್ಥೆ ಆರೋಪಿಸಿದೆ.

2010 ಮತ್ತು 2013 ರ ನಡುವೆ ಸಬ್ರಂಗ್ ಟ್ರಸ್ಟ್‌ಗೆ ಕೇಂದ್ರ ಸರ್ಕಾರದ ನಿಧಿಯಾಗಿ 1.4 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದಕ್ಕಾಗಿ ಸೆಟಲ್ವಾಡ್ ಮತ್ತು ಆನಂದ್ ವಿರುದ್ಧ ಮೂರನೇ ಎಫ್‌ಐಆರ್ ದಾಖಲಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...