ಖಾಸಗಿ ಶಾಲೆಗಳು ಶುಲ್ಕ ಹೆಚ್ಚಿಸಲು ಬಿಡುವುದಿಲ್ಲ: ಅರವಿಂದ್‌ ಕೇಜ್ರಿವಾಲ್‌ ಘೋಷಣೆ

ದೆಹಲಿಯಲ್ಲಿ ಪ್ರಾಮಾಣಿಕ ಸರ್ಕಾರ ಇರುವವರೆಗೆ, ಯಾವುದೇ ಖಾಸಗಿ ಶಾಲೆಗಳು ಅನಿಯಂತ್ರಿತವಾಗಿ ಶುಲ್ಕವನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಕಳೆದ ಐದು ವರ್ಷಗಳಂತೆ ದೆಹಲಿಯಲ್ಲಿ ಖಾಸಗಿ ಶಾಲಾ ಶುಲ್ಕವನ್ನು ನಿಯಂತ್ರಿಸುವುದನ್ನು ಮುಂದುವರಿಸುತ್ತೇನೆ ಎಂದು ಪೋಷಕರಿಗೆ ಭರವಸೆ ನೀಡಿದ್ದಾರೆ.

“ದೆಹಲಿಯಲ್ಲಿ ಪ್ರಾಮಾಣಿಕ ಸರ್ಕಾರ ಇರುವವರೆಗೂ ಪೋಷಕರು ಚಿಂತಿಸಬೇಕಾಗಿಲ್ಲ. ದೆಹಲಿಯ ಯಾವುದೇ ಖಾಸಗಿ ಶಾಲೆ ತನ್ನ ಶುಲ್ಕವನ್ನು ಅನಿಯಂತ್ರಿತವಾಗಿ ನಿರ್ಧರಿಸಲು ಅನುಮತಿಸುವುದಿಲ್ಲ. ಕಳೆದ ಐದು ವರ್ಷಗಳಂತೆ ನಾವು ಶುಲ್ಕವನ್ನು ನಿಯಂತ್ರಿಸುವುದನ್ನು ಮುಂದುವರಿಸುತ್ತೇವೆ ” ಎಂದು ಕೇಜ್ರಿವಾಲ್ ಟ್ವೀಟ್‌ ಮಾಡಿದ್ದಾರೆ.

ಫೆಬ್ರವರಿ 8 ರ ದೆಹಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅವರ ಅಭಿಪ್ರಾಯಗಳು ಬಂದಿವೆ. ಹತ್ತು ಅಂಶಗಳ ಚುನಾವಣಾ ಭರವಸೆಯೊಂದಿಗೆ ಖಾಸಗಿ ಶಾಲಾ ಪೋಷಕರ ಹಿತಕಾಯುವುದಾಗಿಯೂ ಸಹ ಕೇಜ್ರಿವಾಲ್‌ ತಿಳಿಸಿದ್ದಾರೆ.

2018ರ ಏಪ್ರಿಲ್‌ನಲ್ಲಿ ದೆಹಲಿ ಸರ್ಕಾರವು ಸರ್ಕಾರಿ ಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಅನುದಾನರಹಿತ ಶಾಲೆಗಳನ್ನು ಶಿಕ್ಷಣ ನಿರ್ದೇಶನಾಲಯದ ಅನುಮೋದನೆಯಿಲ್ಲದೆ ಬೋಧನಾ ಶುಲ್ಕವನ್ನು ಹೆಚ್ಚಿಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿತ್ತು.

ಅದೇ ವರ್ಷದ ಮೇ ತಿಂಗಳಲ್ಲಿ, 575 ಖಾಸಗಿ ಶಾಲೆಗಳು ವಿಧಿಸಿದ ಹೆಚ್ಚುವರಿ ಶುಲ್ಕವನ್ನು – ಜೂನ್ 2016 ರಿಂದ ಜನವರಿ 2018 ರ ನಡುವೆ – ಶೇಕಡಾ 9 ಬಡ್ಡಿಯೊಂದಿಗೆ ಮರುಪಾವತಿಸುವಂತೆ ಸರ್ಕಾರ ನಿರ್ದೇಶಿಸಿ ವಸೂಲಿ ಮಾಡಿತ್ತು. ಈ ಕ್ರಮವನ್ನು ಎಲ್ಲಾ ಪೋಷಕರು ಶ್ಲಾಘಿಸಿದ್ದರು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here